ಶ್ರೀ ಶಿವಶಾಂತವೀರ ಪುಣ್ಯ ಸ್ಮರಣೆ : ವೃದ್ದಾಶ್ರಮ,ಸಂಗೀತ ವಿದ್ಯಾಪೀಠದ ನೂತನ ಕಟ್ಟಡ ಉದ್ಘಾಟನೆ

ಶ್ರೀಶಿವಶಾಂತವೀರ ಮಹಾಶಿವಯೋಗಿಗಳು-ಶ್ರೀ ಶಿವಶಾಂತವೀರ ಮಹಾಶಿವಯೋಗಿಗಳು ಗವಿಮಠದ ೧೭ ನೇ ಪೀಠಾಧಿಪತಿಗಳಾಗಿ ೧೯೬೬ ರಲ್ಲಿ ಅಧಿಕಾರ ಸ್ವೀಕರಿಸಿದರು. ಮೂಲತಃ ಇವರು ಶಿಕ್ಷಕರಾಗಿದ್ದರು. ಗುರು ಮರಿಶಾಂತವೀರಮಹಾಸ್ವಾಮಿಗಳು ಹೊರಿಸಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದರು. ಲಿಂಗಪೂಜೆ , ಜಪತಪ, ಶಿವಯೋಗ, ಪವಾಡ ಸಾದೃಶ್ಯ ಘಟನೆಗಳಿಗೆ ಗವಿಮಠವು ಸಾಕ್ಷಿಯಾಗಲು ಪೂಜ್ಯರ ಪಾತ್ರ ಬಹುದೊಡ್ಡದು. ಇವರ ಗುರುಗಳಾದ ಶ್ರೀ ಮರಿಶಾಂತವೀರ ಮಹಾಸ್ವಾಮಿಗಳು ಹೊತ್ತಿಸಿದ ಅಕ್ಷರದ ಜ್ಯೋತಿಯನ್ನು ಬೆಳಗಿಸಿದವರು. ಗವಿಮಠದ ಶಾಖಾಮಠಗಳನ್ನು ಜೀರ್ಣೋದ್ದಾರ ಮಾಡಿ ಉಚಿತ ಪ್ರಸಾದ ನಿಲಯಗಳನ್ನು ಆರಂಭಿಸಿ ಬಡಮಕ್ಕಳ ವಿದ್ಯಾದಾನಕ್ಕೆ ಪ್ರೋತ್ಸಾಹ ನೀಡಿದರು. ಗವಿಮಠಕ್ಕೆ ಮಹಾದ್ವಾರ ನಿರ್ಮಾಣ, ತೇರು ನಿರ್ಮಾಣ, ಪ್ರಸಾದ, ಕಲ್ಯಾಣ ಮಂಟಪ, ಅತಿಥಿ ಗೃಹಗಳು, ಹೊಸದಾಗಿ ಟ್ರಸ್ಟ ಆಫೀಸ್ ಇವೆಲ್ಲವುಗಳನ್ನು ಭಕ್ತರಿಗಾಗಿಯೇ ಮಾಡಿದ್ದಾರೆ. ಆಯುರ್ವೇದ ವಿದ್ಯಾ ಪ್ರವೀಣರು ಆಗಿದ್ದರು. ಇವರು ಆರ್ಯುವೇದ ಮೆಡಿಕಲ್ ಕಾಲೇಜಿನ ಪ್ರಾರಂಬಿಸಿದರು. ಭಕ್ತರಲ್ಲಿ ಗವಿಸಿದ್ಧೇಶ್ವರನ ಪ್ರತಿರೂಪ ಕಂಡವರು. ಇವರ ಪ್ರತಿ ಹೆಜ್ಜೆಯೂ ಈ ನೆಲವನ್ನು ಪವಿತ್ರಗೊಳಿಸಿದೆ. ಶ್ರೀ ಶಿವಶಾಂತವೀರ ಮಹಾಸ್ವಾಮಿಗಳವರು ದಿನಾಂಕ ೨೬-೦೩-೨೦೦೩ ರಂದು ಲಿಂಗೈಕ್ಯರಾದ ನಿಮಿತ್ಯ ದಿ. ೨೨-೦೩-೨೦೧೭ ರಂದು ಪುಣ್ಯ ಸ್ಮರಣೆ ಆಚರಿಲಾಗುತ್ತಿದೆ.
ಲಿಂ. ಶ್ರೀ ಶಿವಶಂಕರ ಮಹಾಸ್ವಾಮಿಗಳು- ಲಿಂ. ಶ್ರೀ ಶಿವಶಂಕರ ಮಹಾಸ್ವಾಮಿಗಳು ವಿಜಾಪುರ ಜಿಲ್ಲೆಯ ತಮದಡ್ಡಿಯಲ್ಲಿನ ವಿರಕ್ತ ಮಠದವರು. ಇವರು ಜಪ ತಪ ಲಿಂಗಪೂಜೆಯ ಸಂಗದಲ್ಲಿ ಬೆರೆಯುತ್ತಿದ್ದರು.ಸದಾ ನಗುಮುಖದವರು, ಜಟಾಧಾರಿಯಾಗಿ ತಮ್ಮ ಬಳಿ ಬಂದ ಭಕ್ತರನ್ನು ಹರಸುತ್ತಿದ್ದರು. ಕೊಪ್ಪಳದ ಗವಿಮಠಕ್ಕೆ ಪೂಜ್ಯ ಶ್ರೀ ಗgavimath_koppalವಿಸಿದ್ದೇಶ್ವರ ಮಹಾಸ್ವಾಮಿಗಳನ್ನು ಶ್ರೀಮಠಕ್ಕೆ ಪರಿಚಯಿಸಿದವರು. ಗವಿಮಠದ ಜೊತೆಗೆ ಸದಾ ಸಂಪರ್ಕವಿಟ್ಟುಕೊಂಡಿದ್ದರು. ಗುರುಸ್ವರೂಪಿಯಾಗಿ ಪೂಜ್ಯ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದರು.
ವೃದ್ದಾಶ್ರಮ ಕಟ್ಟಡದ ಉದ್ಘಾಟನೆ -ಶ್ರೀ ಶಿವಶಾಂತವೀರ ಮಹಾಶಿವಯೋಗಿಗಳ ಸ್ಮರಣೋತ್ಸವವನ್ನು ಭಕ್ತರು ಶ್ರದ್ಧೆ, ಭಕ್ತಿ, ಮುಕ್ತಿಯ ಪ್ರತೀಕವಾಗಿ ಆಚರಿಸುತ್ತಾರೆ. ಇವರ ಪುಣ್ಯ ಸ್ಮರಣೆ ಎಂದರೆ ಕೊಪ್ಪಳಕ್ಕೆ ಏನಾದರೊಂದು ಕೊಡುಗೆಯನ್ನು ಭಕ್ತರಿಗಾಗಿ ಶ್ರೀ ಗವಿಮಠದ ಮೂಲಕ ಕೊಡಮಾಡಲಾಗತ್ತದೆ. ಈ ವರ್ಷ ಶಿವಶಾಂತ ವನ, ಗವಿಮಠ ಆವರಣ (ಯಾತ್ರಿ ನಿವಾಸ ಹತ್ತಿರ) ದಿ.ಶ್ರೀಮತಿ ಚೆನ್ನಬಸಮ್ಮ ಗುರುಸಿದ್ದಪ್ಪ ಕೊತಬಾಳ ಸಾ.ಕೊಪ್ಪಳ ಇವರ ಸ್ಮರಣಾರ್ಥವಾಗಿ ವೃದ್ಧಾಶ್ರಮದ ಕಟ್ಟಡ ದಿನಾಂಕ ೨೨-೦೩-೨೦೧೭ ರಂದು ಬುಧವಾರ ಬೆಳಿಗ್ಗೆ ೧೦.೩೦ ಗಂಟೆಗೆ ಉದ್ಘಾಟನೆಯಾಗಲಿದೆ. ಬೆಂಗಳೂರಿನ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ಹೆಚ್.ಎಸ್ ದೊರೆಸ್ವಾಮಿ ಹಾಗೂ ಶ್ರೀ ಮ.ನಿ.ಪ್ರ ಚನ್ನವೀರ ಮಹಾಸ್ವಾಮಿಗಳು ಜಂಗಮಕ್ಷೇತ್ರ, ಲಿಂಗನಾಯಕನ ಹಳ್ಳಿ ಇವರುಗಳು ವೃದ್ದಾಶ್ರಮದ ಉದ್ಘಾಟನೆ ಮಾಡಲಿದ್ದಾರೆ. ೩ ಎಕರೆ ವಿಶಾಲವಾದ ಜಾಗೆಯಲ್ಲಿ ೨೨೦೦೦ ಚದುರ ಅಡಿಯ ವಿಸ್ತೀರ್ಣದಲ್ಲಿ ನಿರ್ಮಾಣವಾಗಿರುವ ವೃದ್ದಾಶ್ರಮ ಕಟ್ಟಡದ ಒಳಗಡೆ ೧೨ ವಿಶೇಷವಾದ ಕೋಣೆಗಳು,೫ ದೊಡ್ಡ ಹಾಲ್‌ಗಳುಹಾಗೂ ಗ್ರಂಥಾಲಯವನ್ನು ಒಳಗೊಂಡಿರುತ್ತದೆ. ಸುಮಾರು ೨.೫ ಕೋಟಿ ರೂಪಾಯಿ ಣದಿಂದ ನಿರ್ಮಾಣಕ್ಕೆ ವಿನಿಯೋಗವಾಗಿರುತ್ತದೆ.   shivashantaveer-swamyji-gavimath_koppal
ಶ್ರೀಗವಿಸಿದ್ಧೇಶ್ವರ ಸಂಗೀತ ವಿದ್ಯಾಪೀಠದ ನೂತನ ಕಟ್ಟಡ ಉದ್ಘಾಟನೆ -ಶ್ರೀಗವಿಮಠದ ಆವರಣದಲ್ಲಿ ಸುಸಜ್ಜಿತ ಮತ್ತು ಭವ್ಯವಾದ ಸಂಗೀತ ವಿದ್ಯಾಪೀಠದ ನೂತನ ಕಟ್ಟಡವು ದಿನಾಂಕ ೨೨-೦೩-೨೦೧೭ ಬುಧವಾರದಂದು ಬೆಳಿಗ್ಗೆ ೧೦ ಗಂಟೆಗೆ ಉದ್ಘಾಟನೆ ಆಗಲಿದೆ. ಪರಮಪೂಜ್ಯ ಶ್ರೀಕಲ್ಲಯ್ಯ ಅಜ್ಜನವರು ವೀರೇಶ್ವರ ಪುಣ್ಯಾಶ್ರಮ ಗದಗ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಜಾನಪದ ಕಲಾವಿದೆ ಶ್ರೀಮತಿ ಸುಕ್ರಜ್ಜಿ ಬೊಮ್ಮಗೌಡ ಉತ್ತರಕನ್ನಡ ಇವರು ಉದ್ಘಾಟಿಸಲಿದ್ದಾರೆ. ಈ ಕಟ್ಟಡವು ಹಂಪೆಯ ವಾಸ್ತು ಶಿಲ್ಪಗಳ ಶೈಲಿಯಂತೆ ಕಟ್ಟಲಾಗಿದ್ದು ಇದರ ಒಳಗಡೆ ಎಂಟು ಕೋಣೆಗಳು, ವಿದ್ಯಾರ್ಥಿಗಳು ಎಲೆಕ್ಟ್ರಾನಿಕ್ ವಿದ್ಯೂನ್ಮಾನ ಉಪಕರಣಗಳನ್ನು ಬಳಸಿಕೊಂಡು ರಾಗ,ತಾಳ,ಲಯ ಹಾಗೂ ಹಾಡುಗಳನ್ನು ಕಲಿಯಲಿಕ್ಕಾಗಿ ಗ್ರೀನ್ ರೂಂ ವ್ಯವಸ್ಥೆ, ಪ್ರತಿಧ್ವನಿ ಆಗದೇ ಇರುವ ತಂತ್ರಜ್ಞಾನವನ್ನು ಇಲ್ಲಿ ಅಳವಡಿಸಲಾಗಿದೆ. ಪ್ರತಿಕೋಣೆಗಳಲ್ಲಿ ಸಂಗೀತದ ಎಲ್ಲ ಸಲಕರಣೆಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬಹುದು. ಹಾಗೆಯೇ ಕಲಾವಿದರಿಗೆ ತಂಗಲೂ ಈ ಕೋಣೆಗಳು ಸಹಾಯಕ. ಸುಮಾರು ೭೫ ಲಕ್ಷ್ಯ ಹಣ ವ್ಯಯವಾಗಿರುತ್ತದೆ.
ಜಲ ಚಿಂತನ ಗೋಷ್ಠಿ : ಕೊಪ್ಪಳದ ಗವಿಮಠದಲ್ಲಿ ಜರುಗುವ ಎಲ್ಲಾ ಕಾರ್ಯಕ್ರಮಗಳು ಸಮಾಜಮುಖಿಯಾಗಿಯೇ ಇರುತ್ತವೆ. ಜಾತ್ರೆಯಲ್ಲಿ ಬಾಲ್ಯ ವಿವಾಹ ತಡೆ ಜಾಗೃತಿ ಅಭಿಯಾನ ಹಾಗೂ ಜಲದೀಕ್ಷೆಯಂತಹ ಜನಪರ ಕಾಳಜಿ ಉಳ್ಳ ಕಾರ್ಯಕ್ರಮಗಳು ಜರುಗಿ ಜನಮನ್ನಣೆ ಪಡೆದಿರುತ್ತವೆ. ಇದೀಗ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಬರ ಒಂದು- ಪರಿಹಾರ ಹಲವು ಈ ವಿಷಯದಡಿ ಜಲಚಿಂತನ ಗೋಷ್ಠಿಯನ್ನು ಗವಿಮಠವು ಹಮ್ಮಿಕೊಂಡಿದೆ. ಮಳೆ ನೀರನ್ನು ಸಂಗ್ರಹಿಸುವ, ಕೆರೆಗಳನ್ನು ಪುನಶ್ಚೇತನ ಗೊಳಿಸುವ, ಒಣಬೇಸಾಯದಲ್ಲಿ ಮಳೆ ನೀರಿನ ನಿರ್ವಹಣೆ, ಬರವನ್ನು ನಿಭಾಹಿಸುವದು ಹೇU? ಎಂಬುದರ ಕುರಿತು ಜಲಚಿಂತನ ಗೋಷ್ಠಿಯು ಶ್ರೀ ಗವಿಮಠದ ಆವರಣದಲ್ಲಿ ದಿನಾಂಕ ೨೨-೦೩-೨೦೧೭ ರಂದು ಬುಧವಾರ ಬೆಳಿಗ್ಗೆ ೧೧ ರಿಂದ ೪ ಗಂಟೆಯವರೆಗೆ ಜರುಗಲಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಶಿವಾನಂದ ಕಳವೆ,ಶ್ರೀಚನ್ನಬಸಪ್ಪ ಕೊಂಬಳಿ ಹಾವೇರಿ, ಬಿ.ವೈಬಂಡಿವಡ್ಡರ ಕೊಪ್ಪಳ, ಮಲ್ಲಣ್ಣ ನಾಗರಾಳ ಹುನುಗುಂದ ಆಗಮಿಸಿ ಮಾತನಾಡಲಿದ್ದಾರೆ

Please follow and like us:
error