ಶ್ರೀ ಮೃತ್ಯುಂಜಯ ಚಿದಂಬರರ ಕ್ಷೇತ್ರದಲ್ಲಿ ಗುರು ಪೂರ್ಣಿಮೆಯ ಮಹಾ ರಥೋತ್ಸವ

ಕೊಪ್ಪಳ. ೧೬- ತಾಲೂಕಿನ ಕರ್ಕಿಹಳ್ಳಿಯ ಐತಿಹಾಸಿಕ ಪ್ರಸಿದ್ದ ಶ್ರೀ ಮೃತ್ಯುಂಜಯ ಚಿದಂಬರರ ಕ್ಷೇತ್ರದಲ್ಲಿ ಗುರು ಪೂರ್ಣಿಮೆಯ ಅಂಗವಾಗಿ ಮಹಾ ರಥೋತ್ಸವ ನೆರೆದಿದ್ದ ಭಕ್ತಾಧಿಗಳ ಭಗವಂತನ ನಾಮ ಸ್ಮರಣೆಯ ಮಧ್ಯೆ ವಿಜೃಂಭಣೆಯಿಂದ ಜರುಗಿತು.
ಕರ್ನಾಟಕ ಹಾಗೂ ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಿಂದ ಹಾಗೂ ಕರ್ಕಿಹಳ್ಳಿ ಸುತ್ತ ಮುತ್ತಲಿನ ಗ್ರಾಮದಿಂದ ವಿಶೇಷ ದಿಂಡಿಯಾತ್ರೆ ಮೂಲಕ ಆಗಮಿಸಿದ್ದ ಭಕ್ತರು ಮಂಗಳವಾರ ಮಧ್ಯಾಹ್ನ ೧ ಕ್ಕೆ ಜರುಗಿದ ರಥೋತ್ಸವದಲ್ಲಿ ನೆರೆದಿದ್ದ ಸಹಸ್ರಾರು ಭಕ್ತರ ಮಧ್ಯ ಸಾಗಿಬಂತು. ಭಕ್ತರು ಊತತ್ತಿ – ಬಾಳೆ ಹಣ್ಣು ಸಮರ್ಪಿಸಿ ಧನ್ಯತೆ ಮೆರೆದರು.
ಮಾಹಾ ರಥೋತ್ಸವಕ್ಕು ಮುನ್ನ ಶ್ರೀ ಮೃತ್ಯುಂಜಯನಿಗೆ ವಿಶೇಷ ಅಲಂಕಾರ ಹಾಗೂ ರುದ್ರಾಭಿಷೇಕ ನಿರಂತರ ಅಖಂಡ ಭಜನೆ ಜರುಗಿತು.
ದಾಸೋಹ ; ಜಾತ್ರೆಗೆ ವಿವಿಧ ರಾಜ್ಯ ಹಾಗೂ ಗ್ರಾಮಗಳಿಂದ ಆಗಮಿಸಿದ್ದ ೫೦ ಸಾವಿರಕ್ಕು ಹೆಚ್ಚು ಭಕ್ತಾಧಿಗಳಿಗೆ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು.
ಅಖಂಡ ಭಜನೆ : ರಥೋತ್ಸವ ಅಂಗವಾಗಿ ಮೃತ್ಯುಂಜಯ ದೇವಸ್ಥಾನದಲ್ಲಿ ಅಖಂಡ ಭಜನೆ, ಕೀರ್ತನೆ ,ಬಗವಂತನ ಕುರಿತು ಭಜನೆ .ಜಪ ಕಳೆದ ಎಂಟು ದಿನಗಳಿಂದ ಜರುಗಿದವು.
ಕಾರ್ಯಕ್ರಮ ಸಾನಿಧ್ಯ ವಹಿಸಿದ್ದ ಕರ್ಕಿಹಳ್ಳಿ ಸಂತ ಶ್ರೇಷ್ಠ ಸುರೇಶ ಗುರು ಮಾಹಾರಾಜರು ಮಾತನಾಡಿ ಮೃತ್ಯುಂಜಯೇಶ್ವರನು ಬೇಡಿದ್ದನ್ನು ಕರುಣಿಸುವ ಕರುಣಾಮಯಿ. ಈ ಪುಣ್ಯಕ್ಷೇತ್ರದಲ್ಲಿ ೧೦೮ ಕೋಟಿ ಶಿವ ಚಿದಂಬರ ಜಪ ಹಾಗೂ ಸಾಂಗತಾ ಕಾರ್ಯಕ್ರಮ ಜರುಗಿದ್ದು ಎಲ್ಲ ಪಾಪಗಳು ಸ್ವಾಮಿ ಅಳಿಯುತ್ತಾನೆ. ಭಕ್ತಿಯಿಂದ ಬೇಡಿದವರ ಮನೋ ಅಭಿಲಾಷೆಗಳು ಈಡೇರುತ್ತವೆ ಎಂದರು.
ನಾಡಿನಲ್ಲಿ ಮಳೆಯ ಅಭಾವವಿದ್ದು ಭಗವಂತ ಸಮೃದ್ಧ ಮಳೆ ಬೆಳೆ ಕರುಣಿಸಲಿ . ಸಕಲ ಜೀವಿಗಳು ಸಮೃದ್ಧಿ ಜೀವನ ನಡೆಸುವಂತಾಗಲಿ ಎಂದು ಎಲ್ಲರು ಭಗವಂತನಲ್ಲಿ ಬೇಡಿಕೊಳ್ಳೊಣ ಎಂದರು.
ಪ್ರತಿದಿನ ಭಗವಂತನಲ್ಲಿಗೆ ಭಕ್ತರು ದರ್ಶನಕ್ಕೆ ಹೋದರೆ ರಥೋತ್ಸವದ ದಂದು ತನ್ನ ಅಂತರಂಗದ ಭಕ್ತರನ್ನು ನೋಡಲು ಭಗವಂತನೇ ರಥವನ್ನೆರಿ ಬರುತ್ತಾನೆ iಹಾ ರಥೋತ್ಸವಕ್ಕೆ ಭಕ್ತಿಯಿಂದ ನಮಿಸಿದರೆ ಮನುಷ್ಯನ ಇಷ್ಟಾರ್ಥಗಳು ಸಿದ್ಧಿಯಾಗಲಿವೆ ಎಂದರು.
ಈ ಸಂದರ್ಭದಲ್ಲಿ ಮುರಗೋಡದ ಪೀಠಾಧಿಕಾರಿ ಪ್ರಭಾಕರ ದೀಕ್ಷಿತರು, ಶ್ರೀ ಸುರೆಶ ದೀಕ್ಷಿತರು ಮುರಗೋಡ ಸೇರಿದಂತೆ ಬಿಜೆಪಿ ಮುಖಂಡ ಅಮರೇಶ ಕರಡಿ, ಜಿ.ಪಂ ಸದಸ್ಯ ಗೂಳಪ್ಪ ಹಲಗೇರಿ ಇತರರು ಭಾಗವಹಿಸಿದ್ದರು.

Please follow and like us:
error