ಶ್ರೀ ಪ್ಯಾಟಿ ಈಶ್ವರ ದೇವಸ್ಥಾನದ ಕಾರ್ತಿಕೋತ್ಸವ


ಕೊಪ್ಪಳ: ನಗರದ ಶ್ರೀ ಪ್ಯಾಟಿ ಈಶ್ವರ ದೇವಸ್ಥಾನದಲ್ಲಿ   ಕಾರ್ತಿಕೋತ್ಸವ ಕಾರ್ಯಕ್ರಮ ಜರುಗಿತು. ಭಕ್ತರು ವೀರಭದ್ರೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ದೇವಾಲಯದ ಒಳಗೆ ಮತ್ತು ಹೊರಾಂಗಣ ಸಹಸ್ರಾರು ದೀಗಳನ್ನು ಭಕ್ತರು ಬೆಳಗಿಸಿದರು. ದೀಪದ ಬೆಳಕಿನಿಂದ ದೇವಾಲಯವು ಝಗಮಗೊಳ್ಳುತ್ತಿತ್ತು. ಅಪಾರ ಭಕ್ತರು ಇದರಲ್ಲಿ ಭಾಗವಹಿಸಿದ್ದರು. ಅಚ್ಚುಕಟ್ಟಾದ ಪ್ರಸಾದ ವ್ಯವಸ್ಥೆಯನ್ನು ಭಕ್ತಾಧಿಗಳಿಗೆ ಮಾಡಲಾಗಿತ್ತು. ಸಮಿತಿಯ ಅಧ್ಯಕ್ಷ ಬಸಣ್ಣ ಸಮಗಂಡಿ, ಕಾರ್ಯದರ್ಶಿಗಳಾದ ನಾಗರಾಜಬಳ್ಳಾರಿ, ಗೌರವಾಧ್ಯಕ್ಷರಾದ ಚಂದ್ರಪ್ಪ ಉಲ್ಲತ್ತಿ , ಪದಾಧಿಕಾರಿಗಳಾದ ಆನಂದಪ್ಪ ಅಳವಂಡಿ, ಪತ್ರೆಪ್ಪ ಪಲ್ಲೇದ, ವೀರಮಹೇಶ್ವರಸ್ವಾಮಿ ಕೊಂಡದಕಟ್ಟಿಮಠ, ವೀರಣ್ಣ ಬಣಗಾರ , ಸಿದ್ದಲಿಂಗಯ್ಯ ಕಿನ್ನಾಳಮಠ್, ಮಂಜಪ್ಪ ಹಮ್ಮಿಗಿ, ಕೃಷ್ಣ ಅಳವಂಡಿ, ಸೋಮಣ್ಣ ಬೆಂತೂರು ಇತರರು ಇದ್ದರು.

Please follow and like us:
error