ಶ್ರೀ ಗವಿಸಿದ್ಧೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ

ಶ್ರೀ ಗವಿಸಿದ್ಧೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಸ್ಥೆಯ ಪ್ರಾಚಾರ್ಯರಾದ ಪ್ರೊ. ವಿಜಯಕುಮಾರ ಪಲ್ಲೇದರವರು ಕನ್ನಡ ನಾಡು ವಿಶಿಷ್ಟ ಕಲೆಗಳ ಸಂಸ್ಕೃತಿಯ ಬೀಡು ನಾಡಿನಲ್ಲಿ ಅನೇಕ ಮಹಾನ್ ಕವಿಗಳು ಜೀವಿಸಿ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ್ದಾರೆ. ಕನ್ನಡ ಭಾಷೆ ಎಂಬುದು ಅದು ನಮ್ಮ ಅಭಿಮಾನದ ಸಂಕೇತ ಒಬ್ಬ ವ್ಯಕ್ತಿ ತನ್ನ ಅಬಿಪ್ರಾಯಗಳನ್ನು ಮಾತೃಭಾಷೆಯ ಮೂಲಕ ವ್ಯಕ್ತ ಪಡಿಸಿದಾಗ ಮಾತ್ರ ಪರಿಪೂರ್ಣವಾಗುತ್ತದೆ. ಕನ್ನಡ ನಾಡಿನಲ್ಲಿ ರಾಜ ಮನೆತನಗಳು ಆಳ್ವಿಕೆ ಮಾಡುವುದರ ಮೂಲಕ ಸಾಂಸ್ಕೃತಿಕ ಸಮೃದ್ಧಿತೆಗೆ ಕೊಡಿಗೆಯನ್ನು ನೀಡಿವೆ ಕನ್ನಡ ನಾಡಿನಲ್ಲಿ ಹುಟ್ಟಿದ ನಾವೇ ಧನ್ಯರು ಎಂದು ಹೇಳಿದರು.

ಸಹ ಪ್ರಾಧ್ಯಾಪಕರಾದ ಶರಣಬಸಯ್ಯ ಹಿರೇಮಠ ಇವರು ಉಪನ್ಯಾಸ ನೀಡಿ ಕರ್ನಾಟಕ ಒಂದು ರಾಜ್ಯರೂಪವಾಗಲು ಅನೇಕ ಹೋರಾಟ, ಪ್ರತಿಬಟನೆ, ಸಾವು-ನೋವುಗಳು ಸಂಭವಿಸಿದವು. ಅಂದು ಅಖಂಡವಾದ ರಾಜ್ಯದಲ್ಲಿ ಪ್ರಸ್ತುತ ದಿನಮಾನಗಳಲ್ಲಿ ಪ್ರತ್ಯೇಕ ಕೂಗು ಎದ್ದಿರುವುದು ವಿಷಾಧನೀಯ ಕನ್ನಡ ಮಾಧ್ಯಮದಲ್ಲಿ ಅಧ್ಯಯನಮಾಡಿದವರಿಗೆ ಹೆಚ್ಚು ಉದ್ಯೋಗಾವಕಾಶ ದೊರೆಯುಂತಾಗಬೇಕು ಕರ್ನಾಟಕದಲ್ಲಿ ಕೈಗಾರಿಕೆಗಳು ಹೆಚ್ಚು ಸ್ಥಾಪನೆಯಾಗುವುದರ ಮೂಲಕ ನಾಡಿನ ಅಭಿವೃದ್ಧಿಗೆ ಪ್ರೇರಕವಾಗಲಿ ಎಂದು ಆಶಿಸಿದರು. ವಿದ್ಯಾರ್ಥಿಗಳ ಪರವಾಗಿ ಗವಿಸಿದ್ದಯ್ಯ, ಲಿಂಗಪ್ಪ, ರಾಜೇಶ್ವರಿ, ವಿಶ್ವನಾಥ ಕಾರ್ಯಕ್ರಮದ ಕುರಿತು ಮಾತನಾಡಿದರು. ಸಮಾರಂಭದಲ್ಲಿ ಆನಂದರಾವ್ ದೇಸಾಯಿ, ವಿರೇಶ.ವಿ., ಆರ್.ಎಂ. ಅಂಗಡಿ, ಜಿ.ಎಸ್.ಸೊಪ್ಪಿಮಠ, ಶೈಲಜಾ ಅರಳಲೆಮಠ, ಜಂಭಯ್ಯ ಹಿರೇಮಠ, ಸುರೇಶ ಸುರ್ವೆ, ಐಶ್ವರ್ಯ ಎಂ.ಪಿ, ಶಿವಪ್ರಕಾಶ ಹಿರೇಮಠ, ಎಸ್.ಜಿ. ಬೆಣ್ಣಿ, ದೇವೇಂದ್ರ.ಜಿ, ದೇವರಾಜ ಎಚ್. ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ಮಮ್ತಾಜ್ ಬೇಗಂ ಹಾಗೂ ಸಂಗಡಿಗರು ಪ್ರಾರ್ಥಿಸಿದರು, ಭಾರತಿ ಸ್ವಾಗತಿಸಿದರು, ವಂದನಾರ್ಪಣೆ ಗಿರಿಜಾ ಹಾಳಕೇರಿ ಮಾಡಿದರು. ಸುಮಾ ಪಲ್ಲೇದ ಕಾರ್ಯಕ್ರಮದ ನಿರೂಪಣೆ ಮಾಡಿದರು.

Related posts