ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ


ಕೊಪ್ಪಳ: ಇತ್ತೀಚಿಗೆ ಕೊಪ್ಪಳ ಜಿಲ್ಲಾ ಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಕ್ರೀಡಾಕೂಟಗಳಲ್ಲಿ ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಬಾಲಕರ ವಿಭಾಗದಲ್ಲಿ ೧೧೦ ಮೀಟರ್ ಹರ್ಡಲ್ಸನಲ್ಲಿ ಶಂಕ್ರಯ್ಯ ಹಿರೇಮಠ ಪ್ರಥಮ, ೪೦೦ ಮೀಟರ್ ಓಟದಲ್ಲಿ ಬಸವರಾಜ ದ್ವೀತಿಯ, ಜಾವಲಿನ್ ಥ್ರೋದಲ್ಲಿ ತಿರುಪತಿ ಪ್ರಥಮ, ಜಂಪ್ ರೋಪ್ ಡಬಲ್ಸದಲ್ಲಿ ಪ್ರವೀಣ ಪ್ರಥಮ ಮತ್ತು ಜಾಗಿಂಗ್ಸನಲ್ಲಿ ದ್ವೀತಿಯ ಸ್ಥಾನ, ಬಾಲಿಕೆಯರ ವಿಭಾಗದಲ್ಲಿ ಷಟಲ್ ಬ್ಯಾಡ್ಮಿಟನ್‌ನಲ್ಲಿ ಪ್ರಿಯಾಂಕ, ಅನುಶ್ರೀ, ಐಶ್ವರ್ಯ, ಶಾರದಾ, ರಮ್ಯ ಕೃಷ್ಣ ಇವರ ತಂಡವು ಪ್ರಥಮ ಸ್ಥಾನ, ಚೆಸ್‌ನಲ್ಲಿ ಹನುಮಕ್ಕ ದ್ವಿತೀಯ ಸ್ಥಾನ, ಪಾರ್ವತಿ ದ್ವಿತೀಯ ಸ್ಥಾನ, ಹಾಗೂ ಜಾವಲಿನ್ ಥ್ರೋದಲ್ಲಿ ಹನುಮವ್ವ ಪ್ರಥಮ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ಇವರ ಸಾಧನೆಗೆ ಆಡಳಿತ ಮಂಡಳಿ ಮತ್ತು ಪ್ರಾಚಾರ್ಯರು, ಸಂಯೋಜನಾಧಿಕಾರಿಗಳು, ವಿದ್ಯಾರ್ಥಿಬಳಗ, ಶಿಕ್ಷಕ ಬಳಗ ಮತ್ತು ಶಿಕ್ಷಕೇತರ ಬಳಗವು ಹರ್ಷವ್ಯಕ್ತಪಡಿಸಿದ್ದಾರೆ

Please follow and like us:
error