ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ – ಸುದ್ದಿ- ‘ಊಟಕ್ಕೆ ಮೊದಲು ಉಪ್ಪಿನಕಾಯಿ’ ಅರ್ಪಣೆ

ಕೊಪ್ಪಳ: ನಗರದ ಕೊಪ್ಪಳದ ಸಂಸ್ಥಾನ ಶ್ರೀ ಗವಿಮಠದ ಮಹಾರಥೋತ್ಸವಜನೆವರಿ ೨೨ ರಂದುವ ಜರುಗುವ ಅಂಗವಾಗಿ ಶ್ರೀ ಗವಿಮಠದ ಆವರಣದ ಮುಂಭಾಗದಲ್ಲಿನ ಸುಮಾರು ೧೨ ಎಕರೆ ವಿಸ್ತೀರ್ಣದ ಮೈದಾನದಲ್ಲಿ ೯೦೦ ರಿಂದ ೧೦೦೦ ಅಂಗಡಿಗಳಿಗೆ ವ್ಯವಸ್ಥೆ ಮಾಡಲಾಗಿದೆ. ಈ ವಿಶಾಲ ಆವರಣದಲ್ಲಿ ವೈವಿಧ್ಯಮಯವಾದ ಅಂಗಡಿ-ಮುಂಗಟ್ಟುಗಳು ತೆರದುಕೊಳ್ಳಲಿವೆ. ಈ ಎಲ್ಲ ಅಂಗಡಿ ಮುಂಗಟ್ಟುಗಳ ಮಹಾದ್ವಾರಗಳು ಶ್ರೀಗವಿಮಠದ ಸಂಸ್ಥಾಪಕ ಶಿವಯೋಗಿಗಳಾದ ರುದ್ರಮುನಿ ಮಹಾಸ್ವಾಮಿಗಳು, ಶಿವಶಾಂತವೀರ ಮಹಾಸ್ವಾಮಿಗಳು, ಮರಿಶಾಂತವೀರ ಮಹಾಸ್ವಾಮಿಗಳು ಹಾಗೂ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಹೆಸರಿನಲ್ಲಿ ನಿರ್ಮಾಣಗೊಳ್ಳುಲಿದ್ದೂ ಅವು ಅತ್ಯಾಕರ್ಷಕವಾಗಿ ನೋಡುಗರ ಕಣ್ಮನಗಳನ್ನು ಸೆಳೆಯುವಲ್ಲಿ ಸಫಲವಾಗಬಲ್ಲವು.

ಈ ಬೃಹತ್ ಮಹಾದ್ವಾರಗಳ ಮುಖೇನ ಜನರಿಗೆ ರಹದಾರಿ ಕಲ್ಪಿಸಿಕೊಡಲಾಗುವದು. ಈ ವಿಶಾಲ ಆವರಣದಲ್ಲಿ ಪ್ರತಿವರ್ಷದಂತೆ ಜಾತ್ರೆ ಆವರಣದ ಮಳಿಗೆಗಳಲ್ಲಿ ೧೨ ಸಾಲುಗಳಿದ್ದು, ಪ್ರತಿ ಸಾಲುಗಳ ಮಧ್ಯ ಜನಸಂದಣಿ ಆಗದಂತೆ ಸಮತಟ್ಟಾದ ರಸ್ತೆಗಳನ್ನು ನಿರ್ಮಿಸಲಾಗಿದೆ. ಪ್ರತಿ ಸಾಲಿನಲ್ಲಿರುವ ಅಂಗಡಿಗಳಿಗೆ ಕ್ರಮ ಬದ್ದವಾದ ಕ್ರಮ ಸಂಖ್ಯೆಯನ್ನು ಸಹ ಕೊಡಲಾಗಿದೆ.

೧) ಮಿಠಾಯಿ ಅಂಗಡಿಗಳ ಸಾಲುಗಳು ೨) ಗೋಭಿಮಂಚೂರಿ ಅಂಗಡಿಗಳ ಸಾಲುಗಳು ೩) ಬಳೆ ಅಂಗಡಿಗಳ ಸಾಲುಗಳು ೪) ಹೋಟೆಲುಗಳ ಸಾಲುಗಳು ೫) ಸ್ಟೇಷನರಿ ಅಂಗಡಿಗಳ ಸಾಲುಗಳು, ೬) ಹಣ್ಣು ಹಾಗೂ ಜ್ಯೂಸ್ ಅಂಗಡಿಗಳ ಸಾಲುಗಳು ೭) ಕಬ್ಬಿಣ ಅಂಗಡಿಗಳ ಸಾಲುಗಳು, ೮) ಬಾಂಡೆ ಅಂಗಡಿಗಳ ಸಾಲುಗಳು ೯) ಜೋಕಾಲಿಗಳ ಸಾಲುಗಳು, ೧೦) ಕೃಷಿ ಹಾಗೂ ಇತ್ಯಾದಿ ಪ್ರದರ್ಶಗಳು, ೧೧) ಸ್ನಾನ ಮತ್ತು ಶೌಚಾಲಯಗಳ ವ್ಯವಸ್ಥೆ ೧೨) ಪಾರ್ಕಿಂಗ್ ವ್ಯವಸ್ಥೆ ೧೩)ಪೋಲಿಸ್ ಚೌಕಿ ಇವೆಲ್ಲವುಗಳ ವ್ಯವಸ್ಥೆ ಮಾಡಲಾಗುತ್ತಲಿದೆ.

ನಗರ ಸಭೆ ಸ್ವಚ್ಛತಾ ಕಾರ್ಯಕ್ರಮ ಮಾಡುವಲ್ಲಿ ಶ್ರೀ ಗವಿಮಠದೊಂದಿಗೆ ಕೈಜೊಡಿಸುತ್ತದೆ. ಈ ಜಾತ್ರಾ ಮಳಿಗೆಗಳ ಸ್ಥಳದಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತದೆ. ಜೊತೆಗೆ ಅಂಗಡಿಕಾರರಿಗೆ ಸ್ವಚ್ಛತೆ ಹಾಗೂ ನೈರ್ಮಲ್ಯತೆಯನ್ನು ಕಾಯ್ದುಕೊಳ್ಳಲು ಈ ಮಳಿಗೆಗಳ ಉಸ್ತುವಾರಿ ಸಮಿತಿ ನಿರ್ದೇಶಿಸಲಾಗಿದೆ.ಮಾಹಿತಿಗಾಗಿ ಶ್ರೀ ಸಿದ್ದಣ್ಣ ವಾರದ-೯೮೪೫೦೩೭೭೯೭,ಶ್ರೀ ಮಲ್ಲಿಕಾರ್ಜುನ ಸೋಮಲಾಪುರ ೯೮೪೫೨೯೯೦೦೮ ಹಾಗೂ ಶ್ರೀ ಈಶಣ್ಣ ಬಳ್ಳೊಳ್ಳಿ – ೯೪೪೮೪೮೦೫೮೯ ಇವರುಗಳನ್ನು ಸಂಪರ್ಕಿಸಬಹುದೆಂದು ಗವಿಮಠದ ಪ್ರಕಟಣೆ ತಿಳಿಸಿದೆ.

ಶ್ರೀ ಮಠದ ನಿರಂತರ ಸೇವೆಯಲ್ಲಿ ಯತ್ನಟ್ಟಿ ಭಕ್ತಾದಿಗಳು.

ಕೊಪ್ಪಳ – ನಗರದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಅಂಗವಾಗಿ ಸುಮಾರು ಎರಡು ತಿಂಗಳ ಪರ್ಯಂತರವಾಗಿ ಶ್ರೀ ಮಠದ ಸೇವೆಯಲ್ಲಿ ಯತ್ನಟ್ಟಿ ಭಕ್ತಾದಿಗಳು ನಿರತರಾಗಿದ್ದಾರೆ.ಶ್ರೀ ಮಠದ ಆವರಣ,ಕೆರೆ ದಂಡೆ,ಕೈಲಾಸ ಮಟಪ,ಆಯುರ್ವೆದ ಕಾಲೇಜು,ಪಬ್ಲಿಕ್ ಶಾಲೆ, ಶ್ರೀ ಗವಿಸಿದ್ದೇಶ್ವರ ಪ್ರೌಢ ಶಾಲೆ,ಬಿ ಇಡಿ ಕಾಲೇಜು ಹಿಂಭಾಗ,೨೦೦೦ ಸಾವಿರ ವಿದ್ಯಾರ್ಥಿಗಳ ಹಾಸ್ಟೆಲ್ ಹತ್ತಿರ, ವಿದ್ಯಾರ್ಥಿನಿಯರ ವಸತಿ ನಿಲಯದ ಹತ್ತಿರ, ಪದವಿ, ಪದವಿ ಪೂರ್ವ ಕಾಲೇಜು ಆವರಣ, ಮಠದ ಸಂಪೂರ್ಣ ಗುಡ್ಡ, ಮಹಾದಾಸೋಹದ ಮಂಟಪ, ಒಟ್ಟಾರೆ ಈಡಿ ಮಠದ ಎಲ್ಲಾ ಪ್ರದೇಶವನ್ನು ಸ್ವಚ್ಚಗೊಳಿಸುವ,ನೆಲದ ತಗ್ಗು ದಿನ್ನೆಗಳನ್ನು ಸಮತಟ್ಟು ಮಾಡಿದ್ದಾರೆ. ಕಸ ಕಲ್ಮಶಗಳನ್ನು ಸ್ವಚ್ಚಗೊಳಿಸಿ, ನೀರನ್ನು ಸಿಂಪಡಿಸಿ ಆವರಣವನ್ನು ಸುಂದರಗೊಳಿಸುವ ಕಾರ್ಯದಲ್ಲಿ ಸುಮಾರು ಮೂವತ್ತು ಜನ ಭಕ್ತರು (೧೨ ಪುರುಷರು, ೧೮- ಮಹಿಳೆಯರು) ನಿರಂತರವಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಸೇವಾ ಕಾರ್ಯವನ್ನು ಶ್ಲಾಘಿಸಿ ಶ್ರೀಗಳು ಆಶಿರ್ವದಿಸಿದ್ದಾರೆ.

ಪ್ರಬಂಧ ಸ್ಪರ್ಧೆಯಲ್ಲಿ ೮೯ ವಿದ್ಯಾರ್ಥಿಗಳು.

ಕೊಪ್ಪಳ: ನಗರದ ಶ್ರೀಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನೇತ್ರದಾನದ ಜಾಗೃತಿ ಹಿನ್ನಲೆಯಲ್ಲಿ ಅಂಧತ್ವ ಕಾರಣ ಮತ್ತು ಪರಿಹಾರೋಪಾಯಗಳು ಎಂಬ ವಿಷಯದ ಮೇಲೆ ಜಿಲ್ಲಾ ಮಟ್ಟದ ಪ್ರಬಂಧ ಸ್ಫರ್ದೆಯು ಇಂದು ದಿನಾಂಕ ೧೨-೧-೨೦೧೯ ರಂದು ಶ್ರೀ ಗವಿಸಿದ್ಧೇಶ್ವರ ಮಹಾವಿದ್ಯಾಲಯದಲ್ಲಿ ಬೆಳಿಗ್ಗೆ ೧೦ ಗಂಟೆಗೆ ಜರುಗಿತು. ಪ್ರಬಂಧ ಸ್ಪರ್ಧೆಯಲ್ಲಿ ಬೇರೆ ಬೇರೆ ತಾಲೂಕುಗಳಿಂದ ಶಾಲಾ ಮಕ್ಕಳು ಹಾಗೂ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರಲ್ಲಿ ೭೪ ಪ್ರಾಥಮಿಕ ಹಾಗೂ ಪ್ರೌಡಶಾಲಾ ವಿದ್ಯಾಥಿಗಳು ಹಾಗೂ ೧೫ ಕಾಲೇಜು ಮಟ್ಟದ ವಿದ್ಯಾರ್ಥಿಗಳು ಪ್ರಬಂಧ ಬರೆದರು. ಆಯ್ಕೆಯಾದರಿಗೆ ದಿನಾಂಕ ೧೮ ರಂದು ಗವಿಮಠದ ಆವರಣದಲ್ಲಿ ಜರುಗುವ ಕೃಪಾದೃಷ್ಟಿ ಜಾತ್ರಾ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಹಾಗೂ ಬಹುಮಾನ ನೀಡಲಾಗುವದೆಂದು ಸಂಘಟನೆಯ ಮಲ್ಲಿಕಾರ್ಜುನ ಹ್ಯಾಟಿ ಗವಿಮಠದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

೪. ‘ಊಟಕ್ಕೆ ಮೊದಲು ಉಪ್ಪಿನಕಾಯಿ’ – ಅರ್ಪಣೆ

ಕೊಪ್ಪಳ: ನಗರದ ಶ್ರೀಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಜನೆವರಿ ೨೨ ರಂದು ಜರುಗುವ iಹಾ ರಥೋತ್ಸವದ ಅಂಗವಾಗಿ ಜರುಗುವ ಮಹಾ ದಾಸೋಹಕ್ಕೆ ವೈವಿಧ್ಯಮಯ ಆಹಾರ ಪದಾರ್ಥಗಳು ಹಾಗೂ ದವಸ ಧಾನ್ಯಗಳು ಹರಿದುಬರುತ್ತಿವೆ. ‘ಊಟಕ್ಕೆ ಮೊದಲು ಉಪ್ಪಿನಕಾಯಿ’ ಎನ್ನುವ ನಾಣ್ಣುಡಿಯಂತೆ ವಿವಿಧ ಭಕ್ಷ್ಯ ಭೋಜಗಳಿಗೆ ಇಮ್ಮಡಿ ರುಚಿಯನ್ನು ಆಸ್ವಾದಿಸಲು ಸು.೭ ಕ್ವಿಂmಲ್ ಶುಚಿ – ರುಚಿಯಾದ ಉಪ್ಪಿನಕಾಯಿಗಳನ್ನು ಸಮರ್ಪಿಸಿದ್ದಾರೆ. ದಾನಿಗಳಿಗೆ ಪೂಜ್ಯಶ್ರೀಗಳು ಆಶಿರ್ವದಿಸಿದ್ದಾರೆ.

– ಶ್ರೀ ಮಠದ ನಿರಂತರ ಸೇವೆಯಲ್ಲಿ ನಗರಸಭೆ ಸದಸ್ಯರು.

ಕೊಪ್ಪಳ – ಶ್ರೀ ಗವಿಸಿದ್ಧೇಶ್ವರ ಜಾತ್ರಾ ನಿಮಿತ್ಯ ಶ್ರಿ ಮಠದ ಜಾತ್ರಾ ಮಹೋತ್ಸವದ ಸಕಲ ಕಾರ್ಯಗಳಲ್ಲಿಯೂ ಸ್ವಚ್ಚತೆ, ನೀರಿನ ವ್ಯವಸ್ಥೆ, ಶ್ರೀಮಠದ ನೈರ್ಮಲ್ಯ, ದಾಸೋಹ ಮಂಟಪ, ಜಾತ್ರಾ ಸ್ಥಳ, ಯಾತ್ರಿ ನಿವಾಸ, ವೃದ್ದಾಶ್ರಮ, ಪಾದಗಟ್ಟಿ, ದಶಮಿ ದಿಂಡು, ತೇರಿನ ಮುಂಭಾಗ, ರಥಬೀದಿಯ ಸ್ವಚ್ಚತೆ, ಹಾಗೂ ನಿರ್ಮಾಣ ಮಾಡುವದು, ಮುಂತಾದ ಶ್ರೀ ಮಠದ ಎಲ್ಲಾ ಜಾತ್ರಾ ಕಾರ್ಯಗಳಲ್ಲಿ ತಮ್ಮನ್ನು ಈಡಿಯಾಗಿ ತೊಡಗಿಸಿಕೊಂಡವರು ಕೊಪ್ಪಳದ ನಗರಸಭೆಯ ಮಾಜಿ ನಗರಸಭೆಯ ಸದಸ್ಯರಾದ ಗವಿಸಿದ್ದಪ್ಪ ಮುಂಡರಗಿ. ಕಾರ್ಮಿಕರಿಗೆ ಉತ್ತೆಜಿಸುವ ನಿಟ್ಟಿನಲ್ಲಿ ಉಟೋಪಚಾರ, ವಸತಿ ವ್ಯವಸ್ಥೆಯನ್ನು ಮಾಡುವ ಉದಾರಿಗಳು. ಸ್ವಚ್ಚತೆ ವಿಷಯದಲ್ಲಿ ಒಂದು ಹೆಜ್ಕೆ ಮುಂದು ಮುಂಡರಗಿ ಗವಿಸಿದ್ದಪ್ಪ. ಇವರ ಜಾತ್ರಾ ಮಹೋತ್ಸವದ ಸ್ವಚ್ಚತಾ ಕಾರ್ಯವನ್ನು ಸತತವಾಗಿ ಕಳೆದ ೧೫ ವರ್ಷಗಳಿಂದ ಮಾಡಿಕೊಂಡು ಬಂದಿದ್ದಾರೆ. ಸ್ವಚ್ಚತಾ ಕಾರ್ಯದಲ್ಲಿ ತಮ್ಮನ್ನು ಇಡಿಯಾಗಿ ತೊಡಗಿಸಿಕೊಂಡ ಇವರ ನಿಸ್ವಾರ್ಥ ಸೇವಾ ಮನೋಭಾವವನ್ನು ಕಂಡು ಪೂಜ್ಯ ಶ್ರೀಗಳು ಹರಿಸಿ ಆಶಿರ್ವದಿಸಿದ್ದಾರೆ.

ಗವಿಮಠದಲ್ಲಿ ಆರಂಭಗೊಂಡಿದೆ ರೊಟ್ಟಿಗಳ ಸಪ್ಪಳ

ಕೊಪ್ಪಳ: ನಗರದ ಶ್ರೀಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ ಮಹಾದಾಸೋಹಕ್ಕೆ ಹಾಗೂ ಗಂಗಾವತಿ ತಾಲೂಕಿನ ಜೀರಾಳ್‌ಕಲ್ಗುಡಿ ಗ್ರಾಮದ ಭಕ್ತರು ೫೧ ಚೀಲ ಭತ್ತ, ೧ ಪಾಕೇಟ್ ಅಕ್ಕಿ ೪೦೦೦ ರೊಟ್ಟಿ, ನೆರೆಬೆಂಚಿ ಗ್ರಾಮದ ಭಕ್ತರಿಂದ ೫೦೦ ರೊಟ್ಟಿಗಳನ್ನು ಸಮರ್ಪಿಸಿದ್ದಾರೆ. ದಾನಿಗಳಿಗೆ ಪೂಜ್ಯಶ್ರೀಗಳು ಆಶಿರ್ವದಿಸಿದ್ದಾರೆ.

Please follow and like us:
error