ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಪೋಲಿಸ್ ಸಿಬ್ಭಂದಿಗಳಿಂದ ಸ್ವಚ್ಛತಾ ಕಾರ್ಯ,ಸಚಿವ ಸಿ.ಸಿ ಪಾಟೀಲ ಶ್ರೀ ಗವಿಮಠಕ್ಕೆ ಭೇಟಿ

ಕೊಪ್ಪಳ : ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀ ಗವಿಮಠದ ಜಾತ್ರಾ ಮಹೋತ್ಸವದ ಮೈದಾನವನ್ನು ಕೊಪ್ಪಳ ನಗರದ ನಾಗರೀಕ ಹಾಗೂ ಸಂಚಾರಿ ಪೋಲಿಸ್ ಅಧಿಕಾರಿಗಳು ಹಾಗೂ ಸಿಬ್ಭಂದಿಯವರು ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿಕೊಂಡರು. ಶ್ರೀಮಠದ ಜಾತ್ರಾ ಮಹೋತ್ಸವದ ಆವರಣ, ರಥ ಸಾಗುವ ಬೀದಿ ಮೊದಲಾದ ಕಡೆಗೆ ಸ್ವ ಇಚ್ಛೆಯಿಂದ ಶ್ರಮದಾನ ಸಲ್ಲಿಸುವ ಮೂಲಕ ಸೇವೆಗೈದಿರುತ್ತಾರೆ.ಈ ಸಂದರ್ಭದಲ್ಲಿ ಸಿಪಿಐ ಮೌನೇಶ್ವರ ಪಾಟೀಲ್. ಪಿಎಸೈ ಗಣೇಶ ಸೇವಾಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಪ್ರಬಂಧ ಸ್ಪರ್ದೆಯಲ್ಲಿ ವಿಜೇತರರು.
ಕೊಪ್ಪಳ : ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗುವ ಲಕ್ಷ ವೃಕ್ಷೆತ್ಸವ ಜಾಗೃತಿ ಅಭಿಯಾನದ ಅಂಗವಾಗಿ ಪ್ರೌಢ ಶಾಲಾ ವಿಭಾಗ, ಪದವಿಪೂರ್ವ, ಪದವಿ ವಿಭಾಗದ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಪ್ರಬಂಧ ಹಾಗೂ ಭಾಷಣ ಸ್ಪರ್ಧೆಗಳನ್ನು ದಿನಾಂಕ ೦೪-೧-೨೦೨೦ ರಂದು ಶ್ರೀ ಗವಿಸಿದ್ಧೇಶ್ವರ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿತ್ತು. ಪ್ರೌಢಶಾಲಾ ವಿಭಾಗದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ವನ್ನು ಕೊಪ್ಪಳ ಶಾರದಾ ಸ್ಕೂಲ್‌ನ ಮಂಜುಶ್ರೀ ಹುಡೇದ, ದ್ವಿತೀಯ ಸ್ಥಾನವನ್ನು ಕೊಪ್ಪಳದ ಶ್ರೀ ಸ್ವಾಮಿವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಕುಮಾರಿ ವಿದ್ಯಾಶ್ರೀ ಮೇಟಿ, ತೃತೀಯ ಸ್ಥಾನವನ್ನು ಮುನಿರಾಬಾದ್‌ನ ವಿಜಯನಗರ ಹೈಸ್ಕೂಲ್‌ನ ವಿನೋದ್ ಪಡೆದಿರುತ್ತಾರೆ. ಪದವಿಪೂರ್ವ ವಿಭಾಗದಲ್ಲಿ ನೆಡೆದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಗಂಗಾವತಿಯ ಸಂಕಲ್ಪ[ ಪದವಿ ಪೂರ್ವ ಕಾಲೇಜಿನ ಸುದರ್ಶನ್ ರೆಡ್ಡಿ, ದ್ವಿತೀಯ ಸ್ಥಾನವನ್ನು ಕೊಪ್ಪಳ ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಕಾಲೇಜಿನ ರಮೇಶ ಕನಕಪ್ಪ, ತೃತೀಯ ಸ್ಥಾನವನ್ನು ಕೊಪ್ಪಳದ ಬಾಲಕರ ಸರಕಾರಿ ಪದವಿಪೂರ್ವ ಕಾಲೇಜಿನ ಜಂಬಣ್ಣ ಕನಕಗಿರಿ ಪಡೆದಿರುತ್ತಾರೆ. ಪದವಿ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಕಾಲೇಜಿನ ಶಿವಶಂಕರ್, ದ್ವಿತೀಯ ಸ್ಥಾನವನ್ನು ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಕಾಲೇಜಿನ ಭೂಮಿಕಾ ಅಂಗಡಿ, ತೃತೀಯ ಸ್ಥಾನವನ್ನು ಕೊಪ್ಪಳದ ಶಾರದಮ್ಮಾ ಕೊತಬಾಳ ಕಾಲೇಜಿನ ನಬೀಬಾ ಇವರುಗಳು ಪಡೆದಿರುತ್ತಾರೆ. ಈ ಎಲ್ಲ ವಿಜೇತರರಿಗೆ ದಿನಾಂಕ ೭ ರಂದು ಜರುಗುವ ಜಾಥಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ಹಾಗೂ ಪ್ರಮಾಣ ಪತ್ರಗಳನ್ನು ನೀಡಲಾಗುವುದೆಂದು ಶ್ರೀಗವಿಮಠದ ಪ್ರಕಟಣೆ ತಿಳಿಸಿದೆ.

ಸಿ.ಸಿ ಕ್ಯಾಮರಾ ಅಳವಡಿಕೆ:

ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜಾತ್ರಾ ಮಹೋತ್ಸವದ ಅಂಗಡಿಗಳ ಆವರಣ, ಮಹಾದಾಸೋಹ, ಶ್ರೀಮಠದ ಒಳ-ಹೊರ ಆವರಣ, ಕೆರೆಯ ದಡ, ಕೈಲಾಸ ಮಂಟಪ, ಜನದಟ್ಟಣೆ ಹೆಚ್ಚು ಇರುವ ಸ್ಥಳಗಳಲ್ಲಿ ಮಹಿಳೆಯರ, ಮಕ್ಕಳ, ವಯೋವೃದ್ದರ ಹಿತದೃಷ್ಟಿಯಿಂದ ಮತ್ತು ಹಣ, ಬಂಗಾರ,ವಸ್ತು, ಒಡವೆಗಳು, ಆಭರಣಗಳು, ಮೊಬೈಲ್ ಮುಂತಾದವುಗಳ ಕಳ್ಳತನ ಮಾಡುವ ಕಳ್ಳಕಾಕರನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಾತ್ರಾ ಮಹೋತ್ಸವವನ್ನು ಶಿಸ್ತುಬದ್ದವಾಗಿ ಜರುಗಿಸಲು ಇಡೀ ಜಾತ್ರಾ ಆವರಣದ ದಾಸೋಹ, ಶ್ರೀಮಠ ಹಾಗೂ ಶ್ರೀಮಠಕ್ಕೆ ಸಂಪರ್ಕಿಸುವ ಎಲ್ಲಾ ರಸ್ತೆಗಳಿಗೆ ಸಿ. ಸಿ. ಕ್ಯಾಮರಗಳನ್ನು ಅಳವಡಿಸಲಾಗಿರುತ್ತದೆ. ಮಾಹಿತಿಗಾಗಿ ಶ್ರೀ ಆನಂದ ಕಲ್ಲನವರ – ೯೭೪೨೧೯೨೨೧೪, – ಶ್ರೀ ಧ್ರುವಕಿರಣ ಶೆಟ್ಟರ್ – ೯೩೪೩೯೬೭೯೭೬ ಇವರುಗಳನ್ನು ಸಂಪರ್ಕಿಸಬಹುದು.

ರಕ್ತದಾನ ಶಿಬಿರ
ಶ್ರೀಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದಲ್ಲಿ ದಿನಾಂಕ ೧೩/೦೧/೨೦೨೦ ರಿಂದ ೧೫/೦೧/೨೦೨೦ ರವರೆಗೆ ೦೩ ದಿನಗಳ ಕಾಲ ಶ್ರೀ ಜಗದ್ಗುರು ಗವಿಸಿದ್ಧೇಶ್ವರ ಆಯುರ್ವೇದಿಕ ಮಹಾವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಬೆಳೆಗ್ಗೆ ೦೯:೦೦ ಗಂಟೆಯಿಂದ ಸಾಯಂಕಾಲ ೦೫:೦೦ ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ. ಈಗ ನಮ್ಮ ಜಿಲ್ಲೆಯಲ್ಲಿ ರಕ್ತದ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ೨೦೧೯ ನೇ (ಎಚಿಟಿ-೧೯ ಣo ಓov-೧೯) ವರ್ಷದಲ್ಲಿ ಒಟ್ಟು ನಮ್ಮ ಜಿಲ್ಲೆಯಲ್ಲಿ ೮೪ ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದ್ದು, ಸದರಿ ರಕ್ತದಾನ ಶಿಬಿರಗಳಲ್ಲಿ ಒಟ್ಟು ೮೭೯೨ ಜನ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿರುತ್ತಾರೆ. ಒಟ್ಟು ೧೧,೩೯೩ ಜನರು ಇದರ ಸದುಪಯೋಗವನ್ನು ಪಡೆದುಕೊಂಡಿದ್ದಾರೆ. ೨೦೧೯ ರಲ್ಲಿ ಜರುಗಿದ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದಲ್ಲಿ ೦೩ ದಿನಗಳ ಕಾಲ ಬೃಹತ್ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು, ಅದರಲ್ಲಿ ಒಟ್ಟು ೬೩೩ ಜನ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿರುತ್ತಾರೆ. ಶ್ರೀ ಗವಿಸಿದ್ಧೇಶ್ವರ ಸಂಸ್ಥಾನ, ಗವಿಮಠ ಇವರ ಸಹಯೋಗದಲ್ಲಿ ದಿನಾಂಕ ೧೩/೦೧/೨೦೨೦ ರಿಂದ ೧೫/೦೧/೨೦೨೦ ರವರೆಗೆ ೦೩ ದಿನಗಳ ಕಾಲ ಜರುಗುವ ಬೃಹತ್ ರಕ್ತದಾನ ಶಿಬಿರಕ್ಕೆ ೨೦ ವೈದ್ಯರ ತಂಡ, ೪೦ ಜನ ಪ್ರಯೋಗ ಶಾಲಾ ತಂತ್ರಜ್ಞರ ತಂಡ, ೨೦ ಜನ ಸ್ವಯಂ ಸೇವಕರ ತಂಡ ಹಾಗೂ ೧೦೦ ಕಾಟ್ ಬೆಡ್‌ಗಳ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಸದರಿ ರಕ್ತದಾನ ಶಿಬಿರದಲ್ಲಿ ೨೦೦೦-೨೫೦೦ ಜನ ರಕ್ತದಾನಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುತ್ತಾರೆಂದು ನಿರೀಕ್ಷಿಸಲಾಗಿದೆ, ಹೆಚ್ಚಿನ ಮಾಹಿತಿಗಾಗಿ – ಡಾ. ಶ್ರೀನಿವಾಸ ಹ್ಯಾಟಿ – ೯೦೦೮೯೯೬೬೪೬, ಶ್ರೀ ಸುಧೀರ ಅವರಾದಿ ೯೪೪೮೮೧೪೧೫೬ ಇವರುಗಳನ್ನು ಸಂಪರ್ಕಿಸಬಹುದು.

ಮಾಧ್ಯಮಕೇಂದ್ರ ಆರಂಭ
ಕೊಪ್ಪಳ : ಶ್ರೀಗವಿಸಿದ್ಧೇಶ್ವರ ಜಾತ್ರಾಮಹೋತ್ಸವದ ನಿಮಿತ್ಯ ಪತ್ರಿಕಾ ಹಾಗೂ ದೂರದರ್ಶನ ಮಾಧ್ಯಮದವರಿಗೆ ಸುದ್ದಿ ಹಾಗೂ ದೃಶ್ಯಾವಳಿಗಳನ್ನು ಬಿತ್ತರಿಸುವದಕ್ಕಾಗಿ ಶ್ರೀ ಗವಿಸಿದ್ಧೇಶ್ವರ ಪದವಿ ಕಾಲೇಜಿನ ಕಂಪ್ಯೂಟರ್ ವಿಭಾಗದಲ್ಲಿ (ಕಂಪ್ಯೂಟರ್ ಲ್ಯಾಬ್) ಮಾಧ್ಯಮ ಕೇಂದ್ರವನ್ನು ಸ್ಥಾಪಿಸಲಾಗುತ್ತದೆ. ಇದರ ಉಧ್ಘಾಟನೆಯನ್ನು ಕೊಪ್ಪಳ ಜಿಲ್ಲಾ ವಾರ್ತಾಧಿಕಾರಿಗಳಾದ ಜಿ. ಸುರೇಶ ನೆರವೇರಿಸಲಿದ್ದಾರೆ. ಮಾಧ್ಯಮ ಮಿತ್ರರು ತಾವೆಲ್ಲರು ಕಾರ್ಯಕ್ರಮಕ್ಕೆ ಆಗಮಿಸಬೇಕು ಹಾಗೂ ದಿನಾಂಕ: ೧೨-೦೧-೨೦೨೦ ರಿಂದ ೧೪-೦೧-೨೦೨೦ ರ ವರೆಗೆ ಇದರ ಸದುಪಯೋಗಪಡೆದುಕೊಳ್ಳಬೇಕೆಂದು. ಶ್ರೀ ಗವಿಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕೊಪ್ಪಳ : ಶ್ರೀಗವಿಸಿದ್ಧೇಶ್ವರ ಜಾತ್ರಾಮಹೋತ್ಸವದ ಹಿನ್ನೆಲೆಯಲ್ಲಿ ಶ್ರೀ ಗವಿಮಠಕ್ಕೆ ಅನೇಕ ಗಣ್ಯರು ಭೇಟಿ ನೀಡುತ್ತಿದ್ದಾರೆ.ಇಂದು ಗಣಿ, ಭೂವಿಜ್ಞಾನ ಮತ್ತು ಅರಣ್ಯ ಇಲಾಖೆಯ ಸಚಿವರಾದ ಸಿ.ಸಿ ಪಾಟೀಲ್ ಗವಿಮಠಕ್ಕೆ ಭೇಟಿ ನೀಡಿ ಪೂಜ್ಯ ಶ್ರೀಗಳ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಸಂಸದ ಸಂಗಣ್ಣ ಕರಡಿ, ಕೊಪ್ಪಳ ನಗರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ ಕವಲೂರ ಅನೇಕರು ಉಪಸ್ಥಿತರಿದ್ದರು.

ಲಕ್ಷ ವೃಕ್ಷೆತ್ಸವ ದಿನಾಂಕ ೦೭.೦೧.೨೦೨೦ ರಂದು ಜಾಥಾ

ಈ ಮೊದಲು ದಿನಾಂಕ ೦೮.೦೧.೨೦೨೦ ಜಾಥಾ ದಿನಾಂಕ ನಿಗದಿಯಾಗಿತ್ತು. ಕಾರಣಾಂತರಗಳಿಂದ ಅಂದು ರದ್ಧಾಗಿರುತ್ತದೆ. ದಿನಾಂಕ ೦೭.೦೧.೨೦೨೦ ರಂದು ಮಂಗಳವಾರ ಜರುಗಲಿದೆ ಎಂದು ಸಂಯೋಜಕರಾದ ರಾಜೇಶ ಯಾವಗಲ್ ಮತ್ತು ಮಲ್ಲಿಕಾರ್ಜುನ್ ಹ್ಯಾಟಿ ತಿಳಿಸಿದ್ದಾರೆ.

ಕೊಪ್ಪಳ: ಶ್ರೀ ಗವಿಸಿದ್ಧೇಶ್ವರ ಜಾತ್ರ ಮಹೋತ್ಸವ ಅಂಗವಾಗಿ ಜರುಗುವ ಜಾಗೃತಿ ಜಾಥಾ ಕಾರ್ಯಕ್ರಮ ಲಕ್ಷ ವೃಕ್ಷವನ್ನು ನೆಟ್ಟು ಬೆಳೆಸುವ ಲಕ್ಷ ವೃಕ್ಷೆತ್ಸವ ಎಂಬ ಶೀರ್ಷಿಕೆ ದೈವ ಸಾಕ್ಷಾತ್ಕಾರಕ್ಕೆ ಲಕ್ಷ ದೀಪೋತ್ಸವ, ಪ್ರಕೃತಿ ಸಾಕ್ಷಾತ್ಕಾರಕ್ಕೆ ಕ್ಷ ವೃಕ್ಷೆತ್ಸವ ಘೋಷ ವಾಕ್ಯದೊಂದಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಲಕ್ಷ ವೃಕ್ಷೆತ್ಸವ ವಿಶೇಷ ಹಾಗೂ ವಿನೂತನವಾದ ಕಾರ್ಯಕ್ರಮವಾಗಿದ್ದು ಪರಿಸರ ರಕ್ಷಣೆ ಕೇವಲ ಭಾಷಣ, ಮೆರವಣಿಗೆ, ಘೋಷಣೆಗೆ ಸಿಮಿತವಾಗದೆ ಪ್ರಾಯೋಗಿಕವಾಗಿ ಅನುಷ್ಟಾನಗೊಳಿಸುವದಾಗಿದೆ.ಮರ ಬೆಳಿಸಿ ಎಂದು ಹೇಳದೆ ಖುದ್ದಾಗಿ ಸಸಿ ನೆಟ್ಟು ರಕ್ಷಿಸಿ, ಪೋಷಿಸಿ ವೃಕ್ಷ ಮಾಡಬೇಕಿದೆ.ಒಂದು ಮರವು ಸಕಲ ಜೀವ ಸಂಕುಲಕ್ಕೆ ಅನ್ನ, ಆಶ್ರಯ, ನೇರಳು, ಪ್ರಾಣ ವಾಯು ನೀಡುವ ನಿತ್ಯ ದಾಸೋಹ ಅಕ್ಷಯ ಪಾತ್ರೆ. ಅನ್ನ ದಾಸೋಹ, ಅಕ್ಷರ ದಾಸೋಹ, ಆರೋಗ್ಯ ದಾಸೋಹದ ಜೊತೆಗೆ ಶ್ರೀ ಮಠದ ವತಿಯಿಂದ ವಿನೂತನ ವೃಕ್ಷ ಸಂಕಲ್ಪ ಜಾಗೃತಿ ಅಭಿಯಾನವನ್ನು ಲಕ್ಷ ವೃಕ್ಷೆತ್ಸವ ಶಿರ್ಷಿಕೆಯ ದೈವ ಸಾಕ್ಷಾತ್ಕಾರಕ್ಕೆ ಲಕ್ಷ ದೀಪೋತ್ಸವ, ಪ್ರಕೃತಿ ಸಾಕ್ಷಾತ್ಕರಕ್ಕೆ ಲಕ್ಷ ವೃಕ್ಷೆತ್ಸವ ಎಂಬ ಘೋಷವಾಕ್ಯದೊಂದಿಗೆ ಕಾರ್ಯಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಒಂದು ಲಕ್ಷಕ್ಕೂ ಹೆಚ್ಚಿನ ವಿವಿಧ ಸಸಿಗಳನ್ನು ಬೆಳೆಯಲಾಗಿದ್ದೂ ಶ್ರೀ ಮಠದ ವತಿಯಿಂದ ಉಚಿತವಾಗಿ ವಿತರಿಸಿ ಆ ಎಲ್ಲಾ ಸಸಿಗಳೆನ್ನೆಲ್ಲಾ ಗಿಡಗಳಾಗಿ, ಮರಗಳಾಗಿ ಬೆಳೆಯು ಹಾಗೆ ಮಾಡುವದೇ ಈ ಕಾರ್ಯಕ್ರಮದ ಮೂಲ ಉದ್ಧೇಶವಾಗಿದೆ.
ಹಿರೇಹಳ್ಳದ ಎಡ-ಬಲಗಳಲ್ಲಿ ತೆಂಗು, ನೇರಳೆ ಸಸಿಗಳನ್ನು ನೆಡುವುದರಿಂದ ಉತ್ತಮ ಪರಿಸರ ಹಾಗೂ ರೈತರಿಗೆ ಉತ್ತಮ ಆದಾಯದ ಮೂಲಗಳನ್ನು ಈ ಮೂಲಕ ಕಂಡುಕೊಳ್ಳುವಲ್ಲಿ ಇದು ಪ್ರಮುಕ ಪಾತ್ರ ವಹಿಸುತ್ತದೆ.
ಈ ಕಾರ್ಯಕ್ರಮವು ದಿನಾಂಕ: ೦೭-೦೧-೨೦೨೦ ರಂದು ಮಂಗಳವಾರ ಕೊಪ್ಪಳದ ಸಾರ್ವಜನಿಕ ಮೈದಾನ ಶ್ರೀ ಗವಿಮಠ ಪರಮ ಪೂಜ್ಯರು, ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ, ಸಣ್ಣ ನೀರಾವರಿ ಮತ್ತು ಕೆರೆಯ ಅಬಿವೃದ್ಧಿ ಪ್ರಾಧಿಕಾರ, ಖಾಸಗಿ ಶಾಲಾ ಒಕ್ಕೂಟ ಹಾಗೂ ವಿವಿಧ ಸಂಘ ಸಂಸ್ಥೆಗಳು ಭಾಗಿಯಾಗಲಿವೆ ಎಂದು ಶ್ರೀಗವಿಮಠದ ಪ್ರಕಟಣೆ ತಿಳಿಸಿದೆ.

ಜಾಥಾದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಶಾಲೆಗೆ ತೆರಳಲು ಉಚಿತ ವಾಹನ ಸೌಕರ್ಯ

ಕೊಪ್ಪಳ: ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವದ ನಿಮಿತ್ಯ ಜರುಗುವ ಲಕ್ಷ ವೃಕ್ಷೆತ್ಸವ ಜಾಗೃತಿ ಅಭಿಯಾನದ ಜಾಥಾವು ದಿನಾಂಕ ೦೭-೦೧-೨೦೨೦ ರಂದು ಮಂಗಳವಾರ ಬೆಳಿಗ್ಗೆ ೮ ಕ್ಕೆ ಸಾರ್ವಜನಿಕ ಮೈದಾನದಿಂದ ಶ್ರೀಗವಿಮಠಕ್ಕೆ ಬಂದು ಸಮಾರೋಪಗೊಳ್ಳುವುದು. ಈ ಜಾಥಾದಲ್ಲಿ ಭಾಗವಹಿಸುವ ಮಕ್ಕಳು ಜಾಥಾ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿಕೊಂಡು ತಮ್ಮ ಶಾಲೆಗಳಿಗೆ ತೆರಳಲು ಗವಿಮಠವು ಸಂಸ್ಥೆಯ ೮ ಉಚಿತ ವಾಹನಗಳನ್ನು ನಿಯೋಜಿಸಿದೆ. ಈ ಎಲ್ಲಾ ವಾಹನಗಳು ದಾಸೋಹ ಭವನದ ಮುಂಭಾಗದಲ್ಲಿ ನಿಂತುಕೊಂಡಿರುತ್ತವೆ. ಎಲ್ಲಾ ವಿದ್ಯಾರ್ಥಿಗಳು ಇದರ ಸದುಪಯೋಗಪಡೆದುಕೊಳ್ಳಬೇಕು. ಮಾಹಿತಿಗಾಗಿ ಡಾ.ಬಸವರಾಜ ಪೂಜಾರ- ೯೪೪೮೨೬೨೮೬೩ ಇವರನ್ನು ಸಂಪರ್ಕಿಸಬಹುದು.

ದೇವಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಭಾಗವಹಿಸುವಂತಹ ಹೆಣ್ಣುಮಕ್ಕಳಿಗಾಗಿ ಉಚಿತ ವಾಹನದ ಸೌಕರ್ಯ

ಕೊಪ್ಪಳ: ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವದ ನಿಮಿತ್ಯ ದಿನಾಂಕ ೧೦-೦೧-೨೦೨೦ ರಂದು ಶುಕ್ರವಾರ ಗವಿಮಠದ ಬೆಟ್ಟದ ಮೇಲಿನ ಶ್ರೀ ಅನ್ನಪೂರ್ಣೇಶ್ವರಿ ದೇವಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಭಾಗವಹಿಸುವಂತಹ ಹೆಣ್ಣುಮಕ್ಕಳಿಗಾಗಿ ಗವಿಮಠಕ್ಕೆ ಬರಲು ಹಾಗೂ ತಮ್ಮ ಮನೆಗಳಿಗೆ ತೆರಳಲು ಶ್ರೀ ಗವಿಮಠವು ಸಂಸ್ಥೆಯ ೮ ಉಚಿತ ವಾಹನಗಳ ಸೌಕರ್ಯವನ್ನು ಮಾಡಲಾಗಿರುತ್ತದೆ. ಈ ಎಲ್ಲಾ ವಾಹನಗಳು ಸಂಜೆ ೪.೩೦ ರಿಂದ ರಾತ್ರಿಯವರೆಗೆ ಕೊಪ್ಪಳ ನಗರದ ವಿವಿಧ ಸ್ಥಳಗಳಿಂದ ಶ್ರೀಗವಿಮಠಕ್ಕೆ ಬರುತ್ತಿರುತ್ತವೆ. ಈ ಎಲ್ಲಾ ವಾಹನಗಳು ಗವಿಮಠದ ಮುಂಭಾಗದಲ್ಲಿ ನಿಂತುಕೊಂಡಿರುತ್ತವೆ. ಎಲ್ಲಾ ಮಹಿಳಾ ಭಕ್ತರು ಇದರ ಸದುಪಯೋಗಪಡೆದುಕೊಳ್ಳಬೇಕು. ಮಾಹಿತಿಗಾಗಿ ಡಾ.ಬಸವರಾಜ ಪೂಜಾರ- ೯೪೪೮೨೬೨೮೬೩ ಇವರನ್ನು ಸಂಪರ್ಕಿಸಬಹುದು.

Please follow and like us:
error