ಶ್ರೀ ಗವಿಸಿದ್ಧೇಶ್ವರ ಜಾತ್ರಾ ನಿಮಿತ್ಯ ಕೃಪಾದೃಷ್ಠಿ ಜಾಗೃತಿ ಜಾಥಾ

ದಿನಾಂಕ ೧೮-೦೧- ೨೦೧೯ ಸಮಯ: ಬೆಳಿಗ್ಗೆ ೮ ಗಂಟೆ. ಸ್ಥಳ. ಸಾರ್ವಜನಿಕ ಮೈದಾನ
ಕೊಪ್ಪಳ: ನಗರದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ಪ್ರತಿವರ್ಷ ಒಂದಲ್ಲಾ ಒಂದು ಜಾಗೃತಿ ಕಾರ್ಯಕ್ರಮವನ್ನು ಹಾಕಿಕೊಂಡು ಬರುವ ಸಂಪ್ರದಾಯವನ್ನು ಗವಿಮಠ ಪ್ರಾರಂಭಿಸಿದೆ. ಈಗಾಗಲೇ ಕಳೆದ ವರ್ಷಗಳಿಂದ ರಕ್ತದಾನ ಜಾಗೃತಿ, ಬಾಲ್ಯವಿವಾಹ ತಡೆ ಜಾಗೃತಿ, ಜಲದೀಕ್ಷೆ, ಸಶಕ್ತ ಮನ – ಸಂತೃಪ್ತ ಜೀವನ ಎನ್ನುವ ಸಮಾಜಮುಖಿ ಜಾಗೃತಿ ಕಾರ್ಯಕ್ರಮಗಳನ್ನು ಇದುವರೆಗೆ ಯಶಸ್ವಿಯಾಗಿ ನಡೆಸಿಕೊಂಡು ಬರಲಾಗಿದೆ. ಕೊಪ್ಪಳದಲ್ಲಿ ಕಣ್ಣು ಸಂಗ್ರಹಣಾ ಘಟಕ ಪ್ರಾರಂಭವಾಗುತ್ತಿರುವ ಹಿನ್ನಲೆಯಲ್ಲಿ ನೇತ್ರದಾನ ಕುರಿತು ಜಾಗೃತಿಯನ್ನು ಮೂಡಿಸುವ ಸಂಕಲ್ಪವನ್ನು ಈ ಸಲ ೨೦೧೯ನೇ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದಲ್ಲಿ ಮಾಡಲಾಗಿದೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಭಾರತೀಯ ರೆಡ್ ಕ್ರಾಸ್ ಕೊಪ್ಪಳ ಶಾಖೆ, ಅನುದಾನ ರಹಿತ ಶಾಲೆಗಳ ಒಕ್ಕೂಟ, ಜಿಲ್ಲಾ ನೌಕರರ ಸಂಘ, ರೋಟರಿ ಕ್ಲಬ್, ಲಯನ್ಸ ಕ್ಲಬ್, ಕನ್ನಡ ಸಾಹಿತ್ಯ ಪರಿಷತ್, ವಿವಿಧ ಮಹಿಳಾ ಸಂಘಟನೆಗಳು ಹಾಗೂ ವಿವಿಧ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಈ ವರ್ಷ ಕೃಪಾದೃಷ್ಠಿ ನೇತ್ರದಾನ ಜಾಗೃತಿ ಜಾತಾ ನಡುಗೆಯನ್ನು ಜನೇವರಿ-೧೮ ರಂದು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಹತ್ತು ಸಾವಿರ ವಿದ್ಯಾರ್ಥಿಗಳು ಈ ಜಾಗೃತಿ ರ್‍ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇಂದು ಜನೆವರಿ ೧೮ ರಂದು ಬೆಳಿಗ್ಗೆ ೮.೦೦ ಕ್ಕೆ ನಗರದ ಸಾರ್ವಜನಿಕ ಮೈದಾನದಿಂದ ರ್‍ಯಾಲಿ ಪ್ರಾರಂಭವಾಗಲಿದೆ. ಅಂದೇ ಆಯಾ ಶಾಲಾ ಮಟ್ಟದಲ್ಲಿಯೂ ಜಾಗೃತಿ ನಡಿಗೆ ಆಯಾ ಗ್ರಾಮ ವಾರ್ಡಗಳಲ್ಲಿ ನಡೆಯಲಿದೆ. ಈಡೀ ಜಿಲ್ಲೆಯಾದ್ಯಂತ ಸುಮಾರು ೨೫ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಾಗೃತಿ ನಡಿಗೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಲ್ಲಿದೆ.
ಮನುಷ್ಯ ದಿನವು ಸಹ ದೃಷ್ಠಿಯಿಲ್ಲದೆ ಬದುಕುವದು ಹೇಗೆ? ನಮ್ಮಲ್ಲಿ ಹೆಚ್ಚಿನವರು ಇದನ್ನೂ ಯೋಚಿಸಲು ಕೂಡಾ ಬಯಸುವದಿಲ್ಲಾ. ದೀರ್ಘ ಕಾಲದವರೆಗೆ ಸಂಪೂರ್ಣವಾಗಿ ಕತ್ತಲು ಕೋಣೆಯಲ್ಲಿ ಇರಲು ಮತ್ತು ದೀರ್ಘ ಕಾಲದವರೆಗೆ ನಮ್ಮ ಕಣ್ಣುಗಳನ್ನು ಮುಚ್ಚಿ ಇಡಲು ಇಚ್ಚೆಪಡುವದಿಲ್ಲ. ಇದರಿಂದ ದೃಷ್ಠಿ ಇಲ್ಲದೆ ಬದುಕುವುದು ಹೇಗೆ ಎಂದು ನಾವೂ ಕಲ್ಪಿಸಿಕೊಳ್ಳಬಹುದು. ನಮ್ಮ ಪ್ರಪಂಚವು ದೊಡ್ಡದಾಗಿದೆ ಮತ್ತು ವರ್ಣಮಯವಾಗಿದೆ. ನಾವು ಆಕಾರಗಳನ್ನು ನೋಡುತ್ತೇವೆ ಮತ್ತು ನಮ್ಮ ದೃಷ್ಟಿ ಗೋಚರದಿಂದಾಗಿ ನಾವು ಜನರನ್ನು ಅಥವಾ ಯಾವುದಾದರು ವಸ್ತುವನ್ನು ಗುರುತಿಸುತ್ತೇವೆ. ಆದರೆ ಅಂಧರಿಗೆ ಈ ಭಾಗ್ಯ ಇರುವುದಿಲ್ಲ. ನಾವು ನಮ್ಮ ನೇತ್ರದಾನ ಮಾಡುವುದರಿಂದ ಅವರಿಗೂ ಈ ಭಾಗ್ಯ ಕಲ್ಪಿಸಬಹುದು.
ಈ ರ್‍ಯಾಲಿಯೂ ಸಾರ್ವಜನಿಕ ಮೈದಾನದಿಂದ ಆಶೋಕ ಸರ್ಕಲ್ ಜವಾಹರ ರಸ್ತೆ, ಗಡಿಯಾರ ಕಂಭ, ಶಾರದಾ ಚಿತ್ರಮಂದಿರ ಮಾರ್ಗವಾಗಿ ಗವಿಮಠದಮಹಾದಾಸೋಹ ಮಂಟಪ ತಲುಪುವದು. ನೇತ್ರದಾನದ ಜಾಗೃತಿ ಹಿನ್ನಲೆಯಲ್ಲಿ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಅಂಧತ್ವ ಕಾರಣ ಮತ್ತು ಪರಿಹಾರೋಪಾಯಗಳು ಎಂಬ ವಿಷಯದ ಪ್ರಬಂಧ ಸ್ಫರ್ದೆಯನ್ನು ಹೈಸ್ಕೂಲ್, ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಜನೆವರಿ ೧೨ ರಂದು ಜಿಲ್ಲಾ ಮಟ್ಟದ ಸ್ಫರ್ದೆಯನ್ನು ಶ್ರೀ ಗವಿಸಿದ್ಧೇಶ್ವರ ಮಹಾವಿದ್ಯಾಲಯದಲ್ಲಿ ಜರುಗಿತ್ತು. ವಿಜೇತರರಿಗೆ ಜಾತಾ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಬಹುಮಾಗಳನ್ನು ನೀಡಲಾಗುವದು. ಮಾಹಿತಿಗಾಗಿ   ರಾಜೇಶ ಯಾವಗಲ್ – ೯೭೪೨೩೦೭೧೫೩   ಮಲ್ಲಿಕಾರ್ಜುನ ಹ್ಯಾಟಿ – ೯೯೮೬೫೯೧೦೭೬ ಇವರುಗಳನ್ನು ಸಂಪರ್ಕಿಸಬಹುದೆಂದು.

Please follow and like us:
error