You are here
Home > Koppal News > ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ-2019ರ ಪಾರ್ಕಿಂಗ್ ವ್ಯವಸ್ಥೆ ಮಾಹಿತಿ

ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ-2019ರ ಪಾರ್ಕಿಂಗ್ ವ್ಯವಸ್ಥೆ ಮಾಹಿತಿ

ಕೊಪ್ಪಳ ನಗರದ ಶ್ರೀಗವಿಸಿದ್ಧೇಶ್ವರ ಜಾತ್ರೆಗೆ ದಿನಗಣನೆ ಆರಂಭವಾಗಿದೆ. ಇದೇ ಜನೆವರಿ 22 ರಂದು ಜರುಗುವ ಮಹಾರಥೋತ್ಸವದಲ್ಲಿ ಜಾತ್ರೆಗೆ ಬಂದು ಹೋಗುವ ಮೋಟಾರುವಾಹನಗಳು, ಚಕ್ಕಡಿಗಳಿಗಾಗಿ ವಿಶೇಷ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ.

22-01-2019 ರಿಂದ 24-01-2019 ರವರೆಗೆ ಗವಿಮಠಕ್ಕೆ ಬರುವ ನಾಲ್ಕೂ ಕಡೆಗಳಲ್ಲಿ ಈ ಕೆಳಕಂಡಂತೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಹೊಸಪೇಟೆ/ಗಂಗಾವತಿ ಮಾರ್ಗದಿಂದ ಬರುವ ವಾಹನಗಳಿಗಾಗಿ ಕುಟೀರ ಫ್ಯಾಮಿಲಿ ರೆಸ್ಟೋರೆಂಟ್ ಪಕ್ಕದಿಂದ ಗೋಪನಕೊಪ್ಪ ಆಸ್ಪತ್ರೆಯ ಬದಿಯ ಮೂಲಕ ಡಾಲರ್ಸ ಕಾಲೋನಿಯಿಂದ ನೇರವಾಗಿ ಮಠದ ಹತ್ತಿರ ಬರಲು ಹೊಸ ರಸ್ತೆ ನಿರ್ಮಾಣವಾಗಿದೆ. ಅಲ್ಲಿ ದ್ವಿಚಕ್ರ, ಕಾರು, ಟ್ರ್ಯಾಕ್ಟರ್, ಲಾರಿ ಇವುಗಳಿಗೆ ಸಹ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಕುಷ್ಟಗಿ ರಸ್ತೆಯಿಂದ ಬರುವ ವಾಹನಗಳಿಗಾಗಿ ಕುಷ್ಟಗಿ ರೈಲ್ವೆ ಗೇಟ್ ಮತ್ತು ಬಜಾಜ್ ಷೋರೂಮ್ ಹಿಂದುಗಡೆ ಬಳಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿರುತ್ತದೆ.

ಗದಗ ರಸ್ತೆಯಿಂದ ಬರುವ ವಾಹನಗಳಿಗಾಗಿ ಹಳೆಯ ಸಾರ್ವಜನಿಕ ಮೈದಾನ ಮತ್ತು ಎ.ಪಿ.ಎಂ.ಸಿ. ಯಾರ್ಡನಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಕುಣಿಕೇರಿ ಮತ್ತು ಹಾಲವರ್ತಿ ರಸ್ತೆಗಳಿಂದ ಬರುವ ವಾಹನಗಳಿಗಾಗಿ ಶ್ರೀಮಠದ ಹಿಂಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸಿಂದೋಗಿ, ಗೊಂಡಬಾಳ ಕಡೆಯಿಂದ ಗಡಿಯಾರ ಕಂಭದ ಮೂಲಕ ಬರುವ ವಾಹನಗಳಿಗೆ ಪಾಂಡುರಂಗ ದೇವಸ್ಥಾನದ ಹಿಂಭಾಗದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.

ಈ ವರ್ಷ ಗವಿಸಿದ್ಧೇಶ್ವರ ಮಹಾರಥೋತ್ಸವದಲ್ಲಿ 5 ಲಕ್ಷಕ್ಕಿಂತಲೂ ಹೆಚ್ಚು ಭಕ್ತಜನರು ಪಾಲ್ಗೊಳ್ಳುವದರಿಂದ ರಥೋತ್ಸವ ಜರುಗಲಿರುವ ಮೈದಾನದ ಒಳಗಡೆ ಶಾಂತಿ ಹಾಗೂ ಸುವ್ಯವಸ್ಥೆಯ ಶಿಸ್ತಿನ ಅಗತ್ಯತೆ ಇದೆ. ಆದ್ದರಿಂದ ಎತ್ತಿನ ಬಂಡಿಗಳನ್ನು, ದ್ವಿಚಕ್ರ, ಕಾರು, ಟ್ರ್ಯಾಕ್ಟರ್, ಟಾಂ.ಟಾಂ ಹಾಗೂ ಲಾರಿಗಳನ್ನು ಈ ಮೇಲೆ ನಿಗದಿಪಡಿಸಿದ ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸಿ ನಂತರ ಮೈದಾನದ ಒಳಗಡೆ ಆಗಮಿಸಿ ರಥೋತ್ಸವದಲ್ಲಿ ಭಾಗವಹಿಸಬೇಕು.

ಹೆಚ್ಚಿನ ಮಾಹಿತಿಗಾಗಿ ವಿರೇಶ ಭಾವಿಕಟ್ಟಿ. ಮೊಬೈಲ್- 8884942666 ಸಂರ್ಪಿಸಬಹುದು

Top