ಶ್ರೀ ಗವಿಸಿದ್ಧೇಶ್ವರ ಕಾಲೇಜಿನಲ್ಲಿ ಪಾರಂಪರಿಕಾ ದಿನಾಚರಣೆ


ಕೊಪ್ಪಳ ನ ೨ : ನಗರದ ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪಾರಂಪರಿಕಾ ದಿನಾಚರಣೆಯನ್ನು ಆಚರಿಸಲಾಯಿತು. ಮಹಾವಿದ್ಯಾಲಯದ ವಿದ್ಯಾರ್ಥಿಗಳು ತಮ್ಮ-ತಮ್ಮ ಜಾತಿ, ಧರ್ಮ, ಪರಂಪರೆಗೆ ಅನುಗುಣವಾಗಿ ವಿವಿಧ ಬಗೆಯ ವಿಶಿಷ್ಟವಾಗಿ ಉಡುಪುಗಳನ್ನು ತೊಟ್ಟು ಸಂಭ್ರಮಿಸಿದರು. ಈ ಕಾರ್ಯಕ್ರಮದಲ್ಲಿ ವಿಶಿಷ್ಟವಾಗಿ ಉಡುಗೆ ತೊಟ್ಟ ವಿದ್ಯಾರ್ಥಿನಿಯರಲ್ಲಿ ಕುಮಾರಿ ಸೀತಮ್ಮ, ಪಲ್ಲವಿ, ನೇತ್ರಾವತಿಯವರು ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಪಡೆದುಕೊಂಡರೆ; ವಿದ್ಯಾರ್ಥಿಗಳಲ್ಲಿ ಕುಮಾರ ಅಶ್ರಫ್ ಅಲಿ, ಶಿವಶಂಕರ, ಮಂಜುನಾಥ ಕೆ ಯವರು ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಪಡೆದುಕೊಂಡರು.
ಅಧ್ಯಾಪಕರ ವಿಭಾಗದಲ್ಲಿ ಶ್ರೀ ಶಿವನಗೌಡ ಪಾಟೀಲ ಪ್ರಥಮ ಹಾಗೂ ಶ್ರೀ ಕೆ.ಎಸ್ ದಂಡಿನ್‌ರವರು ದ್ವಿತೀಯ ಸ್ಥಾನವನ್ನು ಪಡೆದುಕೊಂಡರು. ಈ ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್‌ರವರು ಮಾತನಾಡಿ ನಮ್ಮ ಹಿಂದೆ ಅನೇಕ ಪರಂಪರೆಗಳಿವೆ. ಅವುಗಳನ್ನು ಮುಂದಿನ ಜನಾಂಗಕ್ಕೆ ಕೊಂಡೊಯುವುದು ನಮ್ಮ-ನಿಮ್ಮೇಲ್ಲರ ಜವಾಬ್ದಾರಿ. ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಿಗೆ ತಮ್ಮ ಪರಂಪರೆಗಳನ್ನು ಅರಿತುಕೊಳ್ಳಲು ಸಹಕಾರಿಯಾಗಲಿವೆ ಎಂದರು. ಈ ಕಾರ್ಯಕ್ರಮದಲ್ಲಿ ಶೈಕ್ಷಣಿಕ ನಿರ್ದೇಶಕರಾದ ಶ್ರೀ ಶಿವಾನಂದ ಮಠದ ಹಾಗೂ ಪ್ರಾಧ್ಯಾಪಕರುಗಳಾದ ಶ್ರೀ ಕೆ.ಟಿ ದೇಸಾಯಿ, ಶ್ರೀ ಅಶೋಕ ಓಜಿನಹಳ್ಳಿ ಮುಂತಾದವರು ಉಪಸ್ಥಿತರಿದ್ದರು.

Please follow and like us:
error