ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ’ಟಿಪ್ಪು ಜಯಂತಿ ಆಚರಣೆ’

ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ, ಕೊಪ್ಪಳದ ಸಭಾಭವನದಲ್ಲಿ ಟಿಪ್ಪು ಸುಲ್ತಾನರ ಜಯಂತಿಯನ್ನು ಆಚರಿಸಲಾಯಿತ 

’ಟಿಪ್ಪು ಜಯಂತಿ ಆಚರಣೆ’ ಬ್ರಿಟೀಷರ ವಿರುದ್ದ ಹೊರಾಡಿದಂತಹ ಪ್ರಥಮ ವೀರ ಆಂಗ್ಲರ ಸಿಂಹ ಸಪ್ನವಾಗಿದ್ದವರು ಮೈಸೂರಿನ ಹುಲಿ ಟಿಪ್ಪು ಸುಲ್ತಾನರು ಭಾರತ ಕಂಡ ಶ್ರೇಷ್ಟ ರಾಜರಲ್ಲಿ ಒಬ್ಬ, ಎಂದು ಕನ್ನಡ ವಿಬಾಗದ ಉಪನ್ಯಾಸಕರಾದ ಡಾ. ರಾಜಶೇಖರ ಜಮದಂಡಿ ಇವರು ಸ್ನಾತಕೋತ್ತರ ಕೇಂದ್ರದಲ್ಲಿ ಆಚರಿಸಿದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಮಾತನಾಡಿದರು. ಟಿಪ್ಪು ಬ್ರಿಟೀಷರ ವಿರುದ್ದ ಎಕಾಂಗಿಯಾಗಿ ಹೊರಾಡುತ್ತಲೆ ಯುದ್ದಭೂಮಿಂiiಲ್ಲಿಯೇ ವೀರ ಮರಣವನಪ್ಪಿದರು, ಟಿಪ್ಪುವಿನ ಶೌರ್ಯ, ಪರಾಕ್ರಮತೆ, ಉತ್ಸಾಹ, ದೇಶಾಭಿಮಾನ ಇಂದಿನ ಯುವ ಪೀಳಿಗೆಯಲ್ಲಿ ಬರಬೇಕು, ಅಂತಹ ಸಾಹಸಿ ವೀರರನ್ನು ಮಾದರಿಯನ್ನಾಗಿಟ್ಟುಕೊಂಡು ನೀವು ಬೇಳೆಯಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಉಪನ್ಯಾಸಕರಾದ ಡಾ. ಹನುಮಪ್ಪ ಅವರು ಮಾತನಾಡಿ ಟಿಪ್ಪು ಆಂಗ್ಲರ ಪಾಲಿಗೆ ಮಾರಕ ಶಸ್ತ್ರಾಸ್ತ್ರದಂತಾಗಿದ್ದ ಕಾಡಿಗೆ ಹುಲಿ ಹೇಗೆ ರಾಜ, ಹಾಗೆಯೇ ನಾಡಿಗೆ ಟಿಪ್ಪು ಹುಲಿಯಾಗಿದ್ದ ಎಂದರು. ಕಾರ್ಯಕ್ರಮದಲ್ಲಿ ಟಿಪ್ಪುವಿನ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡ  ಪತ್ರಿಕೋದ್ಯಮ ವಿದ್ಯಾರ್ಥಿ  ಜಾಫರ್ ಷರೀಫ್ ೧೭೯೯ ರ ವೇಳೆಯಲ್ಲಿ ಆಂಗ್ಲರನ್ನು ದೇಶದಿಂದ ಓಡಿಸಲು ಟಿಪ್ಪು ಸುಲ್ತಾನ್ ಆಂಗ್ಲರ ವೈರಿಯಾಗಿದ್ದ ನೆಪೋಲಿಯನ್ ಬೋನಾಪಾರ್ಟಿಯ ಸಹಾಯ ಕೇಳಿದ್ದ ಅಂದೇ ಏನಾದರು ನೇಪೋಲಿಯನ್ ಭಾರತಕ್ಕೆ ಬಂದು ಯುದ್ದದಲ್ಲಿ ಟಿಪ್ಪುವುಗೆ ಸಹಾಯ ಮಾಡಿದ್ದ ಭಾರತಕ್ಕೆ ೧೭೯೯ ರಲ್ಲಿಯೇ ಸ್ವಾತಂತ್ರ ದೊರಕುತ್ತಿತ್ತು ಭಾರತವನ್ನಾಳಿದ ಆಂಗ್ಲರಿಗೆ ಸಿಂಹ ಸಪ್ನವಾಗಿದ್ದ ಟಿಪ್ಪು ಕೇವಲ ಕರ್ನಾಟಕಕ್ಕೆ ಅಷ್ಟೇ ಅಲ್ಲ ಇಡೀ ಭಾರತದ ಹುಲಿ ಎಂದು ಅನಿಸಿಕೆಯನ್ನು ಹಂಚಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿ.ಶ್ರೀ.ಕೃ.ವಿ, ಸ್ನಾತಕೋತ್ತರ ಕೇಂದ್ರದ ವಿಶೇಷಾಧಿಕಾರಿಗಳಾದ ಡಾ. ಮನೋಜ್ ಡೊಳ್ಳಿ, ಇವರು ಮಾತನಾಡಿ ಟಿಪ್ಪು ಒಬ್ಬ ವೀರ ಸೇನಾನಿ ಮಗನಾಗಿ ಹುಟ್ಟು ವೀರನಾಗಿ ಬೇಳೆದವನು ಏಕಾಂಗಿಯಾಗಿ ಆಂಗ್ಲರ ವಿರುದ್ದ ಹೋರಾಡಿದ iಹಾನ ವೀರ ಟಿಪ್ಪು ಸುಲ್ತಾನ್ ಭಾಷೆ, ನೆಲ, ಜಲಕ್ಕೆ ಸಂಬಂದಿಸಿದಂತೆ ತನ್ನ ಪ್ರಾಣತ್ಯಾಗ ಮಾಡಿದ ವೀರನ ಜಯಂತಿಯನ್ನು ಆಚರಿಸುವುದು ಸ್ವಾಗತಾರ್ಹ ಎಂದರು. ಕಾರ್ಯಕ್ರಮವನ್ನು ಭೌತಶಾಸ್ತ್ರ ವಿಭಾಗದ ಉಪನ್ಯಾಸಕರಾದ ಅಲ್ತಾಫ್ ಹುಸೇನ್‌ರವರು ನಿರೂಪಿಸಿದರು. ಪ್ರಾರ್ಥನಾ ಗೀತೆಯನ್ನು ವಿದ್ಯಾರ್ಥಿನಿ ಕು. ಐಶ್ವರ್ಯ ನೆರವೆರಿಸಿಕೊಟ್ಟರು, ವಂದನಾರ್ಪಣೆಯನ್ನು ರಸಾಯನಶಾಸ್ತ್ರ ಉಪನ್ಯಾಸಕಿ ಕು. ಸವೀತಾ ನೇರವೆರಿಸಿಕೊಟ್ಟರು, ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ವೀಶಾಲಾಕ್ಷೀ, ಶೃತಿ ದೇಸಾಯಿ, ಅಕ್ಷಯ ಕುಲಕರ್ಣಿ, ಶ್ರೀಕಾಂತ ಭದ್ರಾಪುರ, ಹೇಮಾವತಿ, ಪ್ರಸನ್ನ ಮುತ್ತಳ್ಳಿ, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Please follow and like us:
error