ನಿಧನ ವಾರ್ತೆ :  ಶ್ರೀಮತಿ ಮಲ್ಲಮ್ಮ ಶಂಕ್ರಪ್ಪ ಬನ್ನಿಗೊಳ್

ಕೊಪ್ಪಳ: ನಗರದ ವಾರಕಾರ ಓಣಿ ನಿವಾಸಿ ಶ್ರೀಮತಿ ಮಲ್ಲಮ್ಮ ಶಂಕ್ರಪ್ಪ ಬನ್ನಿಗೊಳ್ (71) ಅನಾರೋಗ್ಯದ ಹಿನ್ನಲೆಯಲ್ಲಿ ಇಂದು ಸಂಜೆ 6:45 ಕ್ಕೆ ನಿಧನರಾಗಿದ್ದಾರೆ. ಮೃತರ ಅಂತ್ಯಕ್ರಿಯೆ ನಾಳೆ ದಿನಾಂಕ 02-12-2018 ರವಿವಾರ ಮಧ್ಯಾಹ್ನ 1 ಗಂಟೆಗೆ ನಗರದ ವೀರಶೈವ ರುದ್ರಭೂಮಿಯಲ್ಲಿ ಜರುಗಲಿದೆ. ಮೃತರು ನಿವೃತ್ತ ಶಿಕ್ಷಕ ಶಂಕ್ರಪ್ಪ ಬನ್ನಿಗೊಳ್ ಅವರ ಧರ್ಮಪತ್ನಿಯಾಗಿದ್ದು, ಲೋಕೋಪಯೋಗಿ ಇಲಾಖೆಯ ಅಭಿಯಂತರ ಪ್ರಭಾಕರ ಬನ್ನಿಗೊಳ್ ಸೇರಿದಂತೆ ಮೂವರು ಪುತ್ರರು, ಓರ್ವ ಪುತ್ರಿ,ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.