ಶ್ರವಣ ಮಾಡುವುದರಿಂದ ನಮ್ಮ ಸಂಸ್ಕೃತಿ ಪರಿಚಯ :  ಚೈತನ್ಯಾನಂದ ಸ್ವಾಮಿಜಿ 

ಕೊಪ್ಪಳ: ಪುರಾಣ ಶ್ರವಣ ಮಾಡುವದರಿಂದ ನಮ್ಮ ಸಂಸ್ಕೃತಿ ಪರಿಚಯದೊಂದಿಗೆ ನಮ್ಮ ಋಷಿಮುನಿಗಳ ಸಾಧು ಶರಣರ ಅವರ ಜೀವನ ಅನುಷ್ಠಾನ ಮೆಲಕು ಹಾಕುವಂತೆ ಶ್ರೇಷ್ಠ ವಿಚಾರ ಕೇಳುವುದರಿಂದ ಭಕ್ತ ಜನರು ತಮ್ಮ ಕೀಳರಿಮೆ ಮತ್ತು ಧರ್ಮ ಜೀವನ ತತ್ ಪ್ರೇರಣೆ ಪಡೆದುಕೊಳ್ಳುತ್ತಾರೆ ಅಂತ ರಾಮಕೃಷ್ಣಾಶ್ರಮದ ಪ.ಪೂ. ಚೈತನ್ಯಾನಂದ ಸ್ವಾಮಿಜಿ  ಹೇಳಿದರು. ಕಿನ್ನಾಳದ ಬೆಟ್ಟದಲಿಂಗೇಶ್ವರ ಕಲಾ ಸಾಂಸ್ಕೃತಿಕ ಮತ್ತು ಪುರಾಣ ಪ್ರವಚನ ವೇದಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರುಗಳ ಸಹಯೋಗದಲ್ಲಿ ಕಿನ್ನಾಳದ ಕವಲುಪೇಟೆಯ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಜರುಗಿದ ೧೩ನೇ ವರ್ಷದ ಬೆಟ್ಟದ ಲಿಂಗೇಶ್ವರ ಪುರಾಣ ವಿದ್ವಾಂಸರಿಂದ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಮಹಾತ್ಮರ ಕೃಪಾಶೀರ್ವಾದ ಈ ರೀತಿ ಇರುತ್ತದೆ ಎಂದರೆ ನಾವು ಯಾರೂ ಗಾಳಿಯನ್ನು ನೋಡಲಾರೆವು.  ಆದರೆ ಅದರ ಅನುಭವದಿಂದ ಬದುಕುತ್ತಾರೆ.  ಅದಕ್ಕೆ ಶ್ರದ್ಧೆ, ವಿಶ್ವಾಸ, ನಂಬಿಕೆ ಇದ್ದರೆ ಸಾಕು.  ಸಂತ ಶರಣ ಶ್ರೇಷ್ಠ ಸಂಕಲ್ಪ ಹೊಂದಿರುವವನಿಗೆ ಭಕ್ತಿಯೇ ನೂರಾರು ಮಂದಿಯನ್ನು ಜೊತೆಗೂಡಿಸುತ್ತದೆ ಎಂದರು.
ಖ್ಯಾತ ಕಲಾವಿದರುಗಳಿಂದ ಹಿಂದೂಸ್ತಾನಿ, ಶಾಸ್ತ್ರೀಯ ಸಂಗೀತ, ಭಕ್ತಿ ಸಂಗೀತ, ಸೀತಾರ ಮತ್ತು ವಾಯಿಲಿನ್ ವಾದನ, ತತ್ವಪದ, ದಾಸರ ಪದ, ಅಹೋರಾತ್ರಿ ಪುರಾಣ, ಮತ್ತು ಸಂಗೀತೋತ್ಸವ ಕಾರ್ಯಕ್ರಮ ಜರುಗಿದವು
ಸಣ್ಣ ವೀರಯ್ಯ ಸ್ವಾಮಿಗಳು, ಈಶಯ್ಯ ಸ್ವಾಮಿಗಳು, ಗಂಗಾಧರ ಸ್ವಾಮಿಗಳು ಈ ಸಂದರ್ಭದಲ್ಲಿ ಇದ್ದರು.  ಕಾರ್ಯಕ್ರಮವನ್ನು ಗೊಂಡಬಾಳದ ಮಲ್ಲಿಕಾರ್ಜುನ ಸ್ವಾಮಿ ನಾಯಕಲ್ ಹಿರೇಮಠ ಉದ್ಘಾಟಿಸಿದರು. ಶಿವಪ್ಪ ಲಕ್ಕುಂಡಿ ಅಧ್ಯಕ್ಷತೆಯನ್ನು ವಹಿಸಿದ್ದರು. ಲಕ್ಷ್ಮಣಪ್ಪ ಬಡಗಲ್ ಗಂಗಾವತಿ, ದೇವಪ್ಪ ಹಳೆಪೇಟೆ, ಪುಟ್ಟಣ ಬೆಲ್ಲಂಕೊಂಡಿ, ಜಂಬಣ್ಣ ಪರಿಗಿ, ವೀರೇಂದ್ರ ಕುದರಿಮೋತಿ, ಸಂಗಪ್ಪ ಚಕ್ರಸಾಲಿ, ಕೆ. ನಿಂಗಜ್ಜ, ಶಶಿಧರ ಜೀರಗಿ, ತೋಟಪ್ಪ ಗಾಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.