ಶೋರೂಂನ ಕೆಲಸಗಾರನಂತೆ ವರ್ತಿಸಿ ಹಣ ದೋಚಿದ ವ್ಯಕ್ತಿ

ಶೋರೂಂನ ಕೆಲಸಗಾರನಂತೆ ವರ್ತಿಸಿ ವ್ಯಕ್ತಿಯೋರ್ವ ಹಣ ಲಪಟಾಯಿಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಹಬ್ಬದ ನಿಮಿತ್ಯ ಆಪರ್ ಗಳಿರುತ್ತೇವೆ ಎಂದುಕೊಂಡು ಬೈಕ್ ಖರೀದಿಗೆ ಬಂದಿದ್ದ ವ್ಯಕ್ತಿಗೆ ಮೋಸ ಮಾಡಿ ೬೪ ಸಾವಿರ ದೋಚಿ ಈ ಅಪರಿಚಿತ ವ್ಯಕ್ತಿ ಪರಾರಿಯಾಗಿದ್ದಾನೆ.
ಕೊಪ್ಪಳದ ಕುಷ್ಟಗಿ ಸರ್ಕಲ್ ನ ಬಜಾಜ್ ಶೋರೂಂನಲ್ಲಿ ಘಟನೆ ನಡೆದಿದ್ದು
ಬೂದಗುಂಪಾದ ಕೋಟೆಶ್ವರರಾವ್ ದುಡ್ಡು ಕಳೆದುಕೊಂಡ ಅಮಾಯಕ ವ್ಯಕ್ತಿ.


ದೀಪಾವಳಿ ಹಬ್ಬದ ನಿಮಿತ್ಯ ಸಜ್ಜಿ ಮಾರಿದ ದುಡ್ಡಿನಲ್ಲಿ ಬೈಕ್ ಖರೀದಿಗೆ ಬಂದಿದ್ದರು ಈ ಕೋಟೆಶ್ವರರಾವ್ ಈ ಸಂದರ್ಭದಲ್ಲಿ ಶೋರೂಂನ ಕೆಲಸಗಾರನಂತೆ ಬೈಕ್ ಗಳನ್ನು ತೋರಿಸಿದ್ದಾನೆ. ಅವರಲ್ಲಿ ನಂಬಿಕೆ ಹುಟ್ಟಿಸಿದ್ದಾನೆ. ಬೈಜ್ ಗಾಗಿ ದುಡ್ಡುಕಟ್ಟಲು ಕ್ಯಾಶ ಕೌಂಟರ್ ಗೆ ಬಂದ ಕೋಟೇಶ್ವರರಾವ್ ಹಣ ಎಣಿಸುವುದಕ್ಕಾಗಿ ಅವನ ಕೈಗೆ ನೀಡಿದ್ದಾರೆ. ಕೋಟೇಶ್ವರರಾವ್ ಜೊತೆ ಮತ್ತೊಬ್ಬ ಯುವಕನೂ ಬೈಕ್ ಖರೀದಿಗೆ ಬಂದಿದ್ದ. ಅವನೂ ತನ್ನ ದುಡ್ಡನ್ನು ಎಣಿಸುತ್ತಿದ್ದಾಗ ಮೆಲ್ಲಗೆ ಪರಾರಿಯಾಗಿದ್ದಾನೆ ಈ ಅಪರಿಚಿತ ವ್ಯಕ್ತಿ. ಶೋರೂಂನಲ್ಲಿ ಎರಡು ಕ್ಯಾಶ್ ಕೌಂಟರ್ ಗಳು ಇರುವುದರಿಂದ ಇನ್ನೊಂದರಲ್ಲಿ ಕಟ್ಟಲಯ ಹೋಗಿದ್ದಾನೆ ಎಂದುಕೊಂಡು ಕೋಟೆಶ್ವರರಾವ್ ಸುಮ್ಮನಾಗಿದ್ದಾರೆ. ಕಟ್ಟಿದ ದುಡ್ಟಿಗೆ ರಿಸಿಪ್ಟ್ ಕೇಳಿದಾಗ ಶೋರೂಂನ ವರು ನೀವು ದುಡ್ಡೆ ಕೊಟ್ಟಿಲ್ಲ ಎಂದಾಗ ಮೋಸ ಹೋಗಿದ್ದು ಗೊತ್ತಾಗಿದೆ.
ನಮಗೆ ಆ ವ್ಯಕ್ತಿ ಯಾರೆಂದು ಗೊತ್ತಿಲ್ಲ ನಿಮ್ಮವರು ಎಂದುಕೊಂಡಿದ್ದೇವು ಎಂದು ಶೋರೂಂ ನವರು ಹೇಳುತ್ತಿದ್ದಾರೆ
ಹಣ ಕಳೆದುಕೊಂಡ ಕೋಟೆಶ್ವರರಾವ್ ಪೋಲಿಸರ ಮೊರೆ ಹೋಗಿದ್ದಾನೆ. ಮೋಸ ಮಾಡಿದ ವ್ಯಕ್ತಿ ಶೂರೂಂನಿಂದ ಹೊರ ಹೋಗಿದ್ದು ಸಿಸಿಟಿಯಲ್ಲಿ ಕಂಡು ಬಂದಿದೆ.
ಕೊಪ್ಪಳ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Please follow and like us:
error