ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚಿನ ಆಧ್ಯತೆ-ಶಾಸಕ ಕೆ.ರಾಘವೇಂದ್ರ ಹಿಟ್ನಾಳ


ಕೊಪ್ಪಳ:೦೯,ಗೊಂಡಬಾಳ ಜಿಲ್ಲಾ ಪಂಚಾಯತ ವ್ಯಾಪ್ತಿಯ ಗ್ರಾಮಗಳಾದ ಚುಕನಕಲ್,ಮುದ್ದಾಬಳ್ಳಿ, ಹೊಸಗೊಂಡಬಾಳ, ಬಹದ್ದೂರಬಂಡಿ, ಬಿ ಹೊಸಳ್ಳಿ, ಹಾಗೂ ಮೆಳ್ಳಿಕೇರಿ ಗ್ರಾಮಗಳಲ್ಲಿ ವಿವಿಧ ಯೋಜನೆ ಅಡಿಯಲ್ಲಿ ಅಂದಾಜು ಮೊತ್ತ ರೂ.೪.೨೦ ಕೋಟಿಯ ಶಾಲಾ ಕೊಠಡಿ ಕಾಮಗಾರಿ, ಸಿಸಿ ರಸ್ತೆ, ಅಂಗನವಾಡಿ ಕಟ್ಟದ, ಬಸ್ ನಿಲ್ದಾಣ ಕಾಮಗಾರಿಯ ಭೂಮಿಪೂಜೆ ನೇರವೇರಿಸಿ ಬಳಿಕ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ರವರು ಈ ೧.೫ ವರ್ಷದ ಅವಧಿಯಲ್ಲಿ ಸುಮಾರು ೧೦೦ ಶಾಲಾ ಕಟ್ಟಡ ನಿರ್ಮಾಣ ಕೈಗೊಂಡಿದ್ದು, ಎಲ್ಲಾ ವರ್ಗದ ಮಕ್ಕಳಿಗೆ ಶಿಕ್ಷಣದ ಸೌಲಭ್ಯ ಕಲ್ಪಿಸಲು ಕ್ರಮಕೈಗೊಳ್ಳಲಾಗಿದೆ. ಸುಮಾರು ೮ ಮೂರಾರ್ಜಿ ಶಾಲೆ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ, ಅಲ್ಪಸಂಖ್ಯಾತರ ಮೂರಾರ್ಜಿ ವಸತಿ ಶಾಲೆ ಹಾಗೂ ಪದವಿಪೂರ್ವ ಕಾಲೇಜು ನಿರ್ಮಾಣ ಮಾಡಿದ್ದು,ಕ್ಷೇತ್ರದ ಶೈಕ್ಷಣಿಕ ಕ್ರಾಂತಿಕಾರಿ ಬದಲಾವಣೆ ಆಗಿದ್ದು, ನಮ್ಮ ಭಾಗವು೩೭೧ಜೆ ಕಲಂಗೆ ಒಳಪಡುವುದರಿಂದ ಇಲ್ಲಿ ಉದ್ಯೋಗ ಅವಕಾಶಗಳು ವಿಫಲವಾಗಿದ್ದು, ಜಿಲ್ಲೆಯಲ್ಲಿ ಈಗಾಗಲೇ ವೈದ್ಯಕೀಯ ಕಾಲೇಜು, ಇಂಜೀನಿಯರಿಂಗ್ ಕಾಲೇಜು, ಹಾಗು ನಗರದಲ್ಲಿ ಪಿ.ಜಿ.ಸೆಂಟರ್, ಇರುವುದರಿಂದ ಇಲ್ಲಿನ ವಿಧ್ಯಾರ್ಥಿಗಳಿಗೆ ಶೈಕ್ಷಣಿಕ ರಂಗದಲ್ಲಿ ಹೆಚ್ಚಿನ ವಿಧ್ಯಾಭ್ಯಾಸಕ್ಕಾಗಿ ಅವಕಾಶಗಳನ್ನು ಕಲ್ಪಸಿಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ಗುಳಪ್ಪ ಹಲಗೇರಿ, ತಾ.ಪಂ.ಅದ್ಯಕ್ಷ ಬಾಲಚಂದ್ರನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶಬೂಮರೆಡ್ಡಿ, ತಾ.ಪಂ.ಸದಸ್ಯ ರಾಜು ರೆಡ್ಡಿ, ಎ.ಪಿ.ಎಮ್.ಸಿಅದ್ಯಕ್ಷ ಜಡಿಯಪ್ಪ ಬಂಗಾಳಿ, ಕೆ.ಓ.ಎಫ್ ಅಧ್ಯಕ್ಷ ಸುರೇಶ ರೆಡ್ಡಿ ಮಾದಿನೂರು, ನಗರಸಭೆ ಸದಸ್ಯ ಅಕ್ಬರಪಾಷಾ ಪಲ್ಟನ, ಮುಖಂಡರುಗಳಾದ ಚಾಂದಪಾಷಾ ಕಿಲ್ಲೇದಾರ, ಶರಣಪ್ಪ ಸಜ್ಜನ್, ಪ್ರಕಾಶ ರೆಡ್ಡಿ, ಆನಂದ ಕಿನ್ನಾಳ, ಗ್ಯಾನಪ್ಪ, ಪ್ರದಾನಪ್ಪ ಹಂಡಿ, ಹನುಮೇಶ ಹೊಸಳ್ಳಿ, ರಾಮನಗೌಡ್ರು, ಉಪಸ್ಥಿತರಿದ್ದರು.

Please follow and like us:
error