ಶೆಟಲ್ ಬ್ಯಾಡ್‌ಮಿಂಟನ್ ಕೋಚಿಂಗ್ ಶಿಬಿರ ಉದ್ಘಾಟನೆ


ಕೊಪ್ಪಳ : ಎಪ್ರೀಲ್ ೮ ರಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕೊಪ್ಪಳ ಜಿಲ್ಲಾ ಬ್ಯಾಡ್‌ಮಿಂಟನ್ ಅಶೋಷಿಯೇಷನ್ ಹಾಗೂ ಕರ್ನಾಟಕ ಬ್ಯಾಂಟ್‌ಮಿಂಟ್‌ನ್ ಬೆಂಗಳೂರು ಇವರ ಸಹಯೋಗದಲ್ಲಿ ನಡೆದ ಮಕ್ಕಳ ಉಚಿತ ಬೇಸಿಗೆ ಶೆಟಲ್ ಬ್ಯಾಡ್‌ಮಿಂಟನ್ ಶಿಬಿರವನ್ನು ಉದ್ಘಾಟಿಸಲಾಯಿತು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮಣ್ಣನವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಬ್ಯಾಡ್‌ಮಿಂಟನ್ ಸಂಸ್ಥೆಯ ಈ ಕಾರ್ಯವನ್ನು ಶ್ಲಾಘಿಸಿ ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಮತ್ತು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ದೈಹಿಕ ಶ್ರಮ ಅಗತ್ಯ ಎಂದು ತಿಳಿಸಿದರು.
ನಂತರ ಮುಖ್ಯಅತಿಥಿಯಾಗಿ ಆಗಮಿಸಿದ ಮೀಡಿಯಾ ಕ್ಲಬ್ ಅಧ್ಯಕ್ಷ ದೊಡ್ಡೇಶ ಯಲಿಗಾರ ಮಾತನಾಡಿ ಹೈದ್ರಬಾದ ಕರ್ನಾಟಕದಂಹತ ಹಿಂದುಳಿದ ಪ್ರದೇಶದಲ್ಲಿ ಮಕ್ಕಳಿಗೆ ಹಮ್ಮಿಕೊಂಡಂತಹ ಈ ಒಂದು ಉಚಿತ ಬ್ಯಾಡ್‌ಮಿಂಟನ್ ತರಬೇತಿ ಸಂಘದ ಉತ್ತಮ ಕಾರ್ಯವಾಗಿದ್ದು ಅಲ್ಲದೇ ಸುಮಾರು ಈ ರೀತಿ ತರಬೇತಿ ಮತ್ತು ರಾಜ್ಯಮಟ್ಟದ ಪಂದ್ಯಾವಳಿಗಳನ್ನು ಸಂಸ್ಥೆ ನಡೆಸಿಕೊಂಡು ಬರುತ್ತಿರುವುದು ಸ್ವಾಗತಾರ್ಹ ವಿಷಯ ಸಂಸ್ಥೆ ಉನ್ನತ ಮಟ್ಟಕ್ಕೆ ಬೆಳೆಯಲೆಂದು ಹಾರೈಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಗ್ಯಾನೇಶ ಹ್ಯಾಟಿ, ಪ್ರಧಾನ ಕಾರ್ಯದರ್ಶಿ ಖಾಸಿಂಸಾಬ್ ಸಂಕನೂರು, ಉಪಾಧ್ಯಕ್ಷ ನಾಗರಾಜ ಪಾಟೀಲ, ಖಜಾಂಚಿ ಕೋಟ್ರೇಶ. ಪಿ, ಸಂಘದ ಕಾರ್ಯಕಾರಿ ಮಂಡಳಿಯ ಸದಸ್ಯರಾದ ಮಹಾಂತೇಶ ಚನ್ನಿನಾಯ್ಕರ, ಮಹ್ಮದ್ ಮುನಿರ್, ಬಸವರಾಜ ಕೊಪ್ಪಳ, ಸಂಗಪ್ಪ ತಳವಗೇರಿ, ಕಿಶೋರ ದಲಬಂಜನ್, ಮುಸ್ತಫಾ ಕೆ, ಎಸ್.ಟಿ. ಹಂಚಿನಾಳ, ವೆಂಕಟೇಶ ಬೊಸ್ಲೆ ಸೇರಿದಂತೆ ಇತರರು ಇದ್ದರು.
ಕಾರ್ಯಕ್ರಮವನ್ನು ಕಾರ್ಯದರ್ಶಿ ಖಾಸಿಂಸಾಬ್ ಸಂಕನೂರು ನಿರೂಪಿಸಿದರು, ಕೊಟ್ರೇಶ ಪೊಚಗುಂಡಿ ಸ್ವಾಗತಿಸಿದರೆ, ಮಹಾಂತೇಶ ಚನ್ನಿನಾಯ್ಕರ ವಂದಿಸಿದರು.