ಶಿವರಾಜ ತಂಗಡಗಿ ಅಧಿಕಾರ ಕಳೆದುಕೊಂಡು ಹತಾಶರಾಗಿ ರೈತರ ದಾರಿ ತಪ್ಪಿಸುತ್ತಿದ್ದಾರೆ- ಬಸವರಾಜ್ ದಡೆಸೂಗುರು

 ಕೊಪ್ಪಳ : 
 ಜಿ ಶಾಸಕ ಶಿವರಾಜ ತಂಗಡಗಿ ಅವರಿಗೆ ತುಂಗಭದ್ರಾ ಜಲಾಶಯ ಮತ್ತು ಅಚ್ಚುಕಟ್ಟು ವ್ಯಾಪ್ತಿಯ ಬಗ್ಗೆ ವಾಸ್ತವ ಜ್ಞಾನ ಇಲ್ಲ ಅನ್ನಿಸುತ್ತಿದೆ . ಈ ಕಾರಣಕ್ಕೆ ಜಲಾಶಯದಲ್ಲಿ ನೀರಿಲ್ಲದಿದ್ದರೂ ರೈತರನ್ನು ದಾರಿ ತಪ್ಪಿಸುವ ಮತ್ತು ಉತ್ತೇಜಿಸುವ ಮಾತನಾಡುತ್ತಿದ್ದಾರೆ . ವಾಸ್ತವದಲ್ಲಿ ತುಂಗಭದ್ರಾ ಜಲಾಶಯದ ಒಟ್ಟು ಐದು ಕಾಲುವೆಗಳ ಅಚ್ಚುಕಟ್ಟು ವ್ಯಾಪ್ತಿಯ ರೈತರು ಬೆಳೆ ಬೆಳೆಯಲು ಕನಿಷ್ಠ ಎಷ್ಟು ಟಿಎಂಸಿ ನೀರು ಬೇಕು ಎಂದು ಮೊದಲು ತಿಳಿದುಕೊಳ್ಳಬೇಕು . ವರುಣರಾಯನ ಅವಕೃಪೆಯಿಂದ ಈ ಬಾರಿ ಇಂದಿನವರೆಗೂ ಜಲಾಶಯ ಅರ್ಧದಷ್ಟೂ ತುಂಬಿಲ್ಲ . ಬದಲಾಗಿ ಸದ್ಯ ಜಲಾಶಯದಲ್ಲಿ ಕೇವಲ 37ಟಿಎಂಸಿ ನೀರಿದೆ . ಆದಾಗ್ಯೂ , ಕಾಲುವೆಗೆ ನೀರು ಬಿಡುವಂತೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೇನೆ . ಆದರೆ ಸದ್ಯ ನೀರು ಹರಿಸಿದರೆ ಮುಂದೆ ಮಳೆ ಕೈಕೊಟ್ಟರ ಬೆಳ ಸಂಪೂರ್ಣ ಹಾಳಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ . – 40ಟಿಎಂಸಿ ನೀರು ಸಂಘ್ರಹ ವಾದ ಬಳಿಕ ಕೊಪ್ಪಳಬಳ್ಳಾರಿ , ರಾಯಚೂರ , ಜಿಲ್ಲೆಗಳ ಶಾಸಕರು ಸಂಸದರ ಜೋತೆ ಚರ್ಚಿಸಿ ನೀರು ಬಿಡುಗಡೆಗಳಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತನ , ನಾನು ಕೂಡ ರೈತ ಕುಟುಂಬದಿಂದ ಬೆಳರು ಬಂದಿದ್ದೇನ , ಈಗಲೂ ನಾನು ರೈತನಾಗಿರುತ್ತನೆ ರೈತರ ಸಂಕಷ್ಟದ ಬಗ್ಗೆ ನನಗೆ ತಿಳಿದಷ್ಟು ಮಾಜಿ ಶಾಸಕರಿಗೆ ತಿಳಿದಿಲ್ಲ . ಇನ್ನು ಮಾಜಿ ಶಾಸಕರು ನಾವು ಈ ಹಿಂದೆ ಮಾಡಿದ ಹೋರಾಟ ಪ್ರಸ್ತಾಪಿಸಿದ್ದಾರೆ . ಆ ವೇಳೆ ಜಲಾಶಯದಲ್ಲಿ ಬೇರೊಬ್ಬರಿ 70 ಟಿಎಂಸಿ ನೀರಿತ್ತು ಅನ್ನೋದನ್ನು ಮಾಜಿ ಶಾಸಕರು ತಿಳಿದುಕೊಳ್ಳಬೇಕಿದೆ . ಕಳದ 12 ವರ್ಷದ ಹಿಂದೆ ಕನಕಗಿರಿಗೆ ಬಂದ ಮಾಜಿ ಶಾಸಕರು ಐದೇ ವರ್ಷದಲ್ಲಿ ” ಫಡ್ ಫ್ಲೋ ಕೆನಾಲ್ ” ತರೋದಾಗಿ ಭರವಸೆ ನೀಡಿದ್ದರು ಎಂಬುದನ್ನು ಕ್ಷೇತ್ರದ ರೈತರು ಮತ್ತು ಜನ ಶ್ರೀಸಾಮಾನ್ಯರು ಮರೆತಿಲ್ಲಾ , ಮಾಜಿ ಶಾಸಕರು ಏನೇನು ಮಾಡಿದ್ದರ ಅನ್ನೂದರ ಸಂಪೂರ್ಣ ಮಾಹಿತಿ ಕ್ಷೇತ್ರದ ಜನರಿಗೆ ತಿಳಿಸಬೇಕಿದೆ .
ಈ ವರ್ಷ ಉತ್ತಮ ಮಳಯಾಗಲಿ ಅಂತಾ ದೇವರಲ್ಲಿ ಪ್ರಾರ್ಥಿಸುತ್ತದೆ . ಜೊತೆಗೆ ಮಾಜಿ ಶಾಸಕ ಶಿವರಾಜ ತಂಗಡಗಿ ಅವರಿಗೆ ದೇವರು ಒಳ್ಳೆಯ ಬುದ್ದಿ ಕೊಡಲಿ ಎಂದು ಕೇಳಿಕೊಳ್ಳುತ್ತೇನ . ಕೊನೆಯದಾಗಿ ಮಾಜಿ ಶಾಸಕರು ಮತ್ತು ಸಚಿವರು ನನ್ನನ್ನು ಪರಸೆಂಟೇಜ್ ಶಾಸಕ ಅಂತಾ ಕರದು ಮತದಾರರಿಗೆ ಅಪಮಾನ ಮಾಡಿದ್ದಾರೆ . ಆದರೆ , ಇದೇ ಕ್ಷೇತ್ರದ ಮತದಾರರು ” ಶಿವರಾಜ ತಂಗಡಗಿ ಕರ ತುಂಬಿಸಿಲ್ಲ , ಮನೆತುಂಬಿಕೊಂಡಿದ್ದಾರೆ ‘ ‘ ಹಾಗೂ ” ದೇವಸ್ಥಾನದ ಹಣ ನುಂಗಿ ನೀರು ಕುಡಿದಿದ್ದಾರೆ ” ಅಂತಾ ಪ್ರತಿಭಟನೆ ಮಾಡಿದ್ದನ್ನು ಮರೆಯುವಂತಿಲ್ಲ . ಅಷ್ಟೇ ಅಲ್ಲದೆ ಇವರ ಅವಧಿಯಲ್ಲಿ ಕ್ಷೇತ್ರದ ಹಾಗೂ ತಾವು ಸಚಿವರಾಗಿದ್ದ ಇಲಾಖೆಯ ಕೋಟಿಗಟ್ಟಲೆ ಅನುದಾನವನ್ನ ದುರುಪಯೋಗ ಪಡಿಸಿಕೊಂಡಿದ್ದಕ್ಕಾಗಿ ಅದನ್ನ ಇಲಾಖಾ ಅಧಿಕಾರಿಗಳ ತಲೆಗೆ ಕಟ್ಟಿ ಅವರ ಮತ್ತು ಕುಟುಂಬದವರ ಜೀವನ , ಬದುಕನ್ನ ಬೀದಿಗೆ ತಂದಂತಹ ಕೀರ ತಿಗೆ ಭಾಜನರಾಗಿರುವದರ ನನಪು ಇನ್ನೂ ಮಾಸಿಲ್ಲ ಎಂಬುದು ನೆನಪಿರಲಿ .  ಎಂದು  ಕನಕಗಿರಿ ಶಾಸಕ ಬಸವರಾಜ ದಡೇಸೂಗೂರು ಹೇಳಿದ್ದಾರೆ

Please follow and like us:
error