ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಶಿವರಾಜ್ ತಂಗಡಗಿ ಭೇಟಿ

ಕನಕಗಿರಿಯ ಶಾಸಕ ಮಾಜಿ ಸಚಿವ  ಶಿವರಾಜ್ ಎಸ್. ತಂಗಡಗಿ ಈ ದಿನ ತುಂಗಭದ್ರಾ ಜಲಾಶಯ ಪ್ರದೇಶದಲ್ಲಿ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದರು.

 ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹೂಳೆತ್ತುವ ಕಾಮಗಾರಿಗೆ ತಮ್ಮ ಬೆಂಬಲವಿದೆ ಎಂದರು. ಇದೇ ಸಂದರ್ಭದಲ್ಲಿ ಮಾತನಾಡುತ್ತಾ ಮುಂಬರುವ ಅಧಿವೇಶನದಲ್ಲಿ ಜಲಾಶಯದ ಹೂಳೆತ್ತುವ ಕಾಮಗಾರಿ ಕುರಿತು ಸರಕಾರದ ಗಮನಕ್ಕೆ ತಂದು, ಸರಕಾರದಿಂದಲೂ ಆದಷ್ಟು ಬೇಗನೆ ಜಲಾಶಯದ ಹೂಳೆತ್ತುವ ಕಾಮಗಾರಿಯನ್ನು ಪ್ರಾರಂಬಿಸುವಂತೆ ಮನವಿಯನ್ನು ಮಾಡಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಸನ್ಮಾನ್ಯರು ಹೂಳೆತ್ತುವ ಕಾಮಗಾರಿಗೆ ರೂ.1- ಲಕ್ಷ  ದೇಣಿಗೆಯನ್ನು ನೀಡಿದರು.

Leave a Reply