You are here
Home > Koppal News > ಶಿವರಾಜ್ ಎಸ್. ತಂಗಡಗಿಯವರಿಂದ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ

ಶಿವರಾಜ್ ಎಸ್. ತಂಗಡಗಿಯವರಿಂದ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ

ಶಿವರಾಜ್ ಎಸ್. ತಂಗಡಗಿಯವರು ಈ ದಿನ ನವಲಿ ಜಿಲ್ಲಾ ಪಂಚಾಯತ ವ್ಯಾಪ್ತಿಯ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನ

ನೀಡಿದರು. ಮೈಲಾಪುರ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ 2016-17ನೇ ಸಾಲಿನ 5054 ಯೋಜನೆ ಅಡಿಯಲ್ಲಿ ರಾರಾವಿ ಬೇಲೂರು ಮುಖ್ಯರಸ್ತೆಯಿಂದ ಮೈಲಾಪುರ – ಉಮಲೂಟಿ ರಸ್ತೆಯ ಆಯ್ದಾ ಭಾಗಗಳಲ್ಲಿ ಸುಮಾರು 07.00 ಕಿ.ಮೀ. ರಸ್ತೆ ಡಾಂಬರೀಕರಣ, ಚಿರ್ಚನಗುಡ್ಡ ಹಾಗೂ ನವಲಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಸಿಸಿ ರಸ್ತೆ ನಿರ್ಮಾಣ, ಪ್ರವಾಸೋದ್ಯಮ ಇಲಾಖೆ ವತಿಯಿಂದ ನವಲಿ ಗ್ರಾಮದ ಭೋಗಾಪುರೇಶ್ವರ ದೇವಸ್ಥಾನದ ಯಾತ್ರಿ ನಿವಾಸ ನಿರ್ಮಾಣ, ಶಾಸಕರ ಅನುದಾನದಲ್ಲಿ ನವಲಿ ಗ್ರಾಮದಲ್ಲಿ ಕನಕದಾಸ ಸಮುದಾಯ ಭವನ ನಿರ್ಮಾಣ, ನವಲಿ ಈದ್ಗಾ ಮೈದಾನದ ಕಂಪೌಂಡ ಗೋಡೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ್ದ, ಸಾರ್ವಜನಿಕರ ಜೊತೆ ಬೆರೆತು, ಸಾರ್ವಜನಿಕರ ಸಮಸ್ಯೆಯನ್ನು ಆಲಿಸಿದರು.

Top