ಶಿವಪುರದಲ್ಲಿ  ವಾಲ್ಮೀಕಿ ದೇಗುಲ ಉದ್ಘಾಟನೆ |

ಶಿವಪುರದಲ್ಲಿ ವಾಲ್ಮೀಕಿ ದೇಗುಲ ಉದ್ಘಾಟನೆ | ಸಂಸದ ಬಿ. ಶ್ರೀರಾಮುಲು ಆಗಮನ
ಅಳವಂಡಿಯಲ್ಲಿ ಬಿಜೆಪಿ ನವಶಕ್ತಿ ಸಮಾವೇಶ

ಕೊಪ್ಪಳ: ತಾಲೂಕಿನ ಶಿವಪುರದಲ್ಲಿ ನೂತನವಾಗಿ ನಿರ್ಮಿಸಿರುವ ಮಹರ್ಷಿ ವಾಲ್ಮೀಕಿ ದೇವಸ್ಥಾನದ ಉದ್ಘಾಟನೆ ಸೋಮವಾರ ನಡೆಯಲಿದೆ.
ಬಳ್ಳಾರಿ ಸಂಸದ ಶ್ರೀರಾಮುಲು ಹಾಗೂ ಸಂಸದ ಸಂಗಣ್ಣ ಕರಡಿ ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದು, ದೇವಸ್ಥಾನ ಉದ್ಘಾಟನೆ ಮಾಡಲಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ ಉಪಸ್ಥಿತರಿರುವರು.
ಸಮಾರಂಭದ ನಂತರ, ಬೆಳಗ್ಗೆ 11.30ಕ್ಕೆ ಶಿವಪುರದಲ್ಲಿ ಬಿಜೆಪಿ ಕಾರ್ಯಕರ್ತರ ನವಶಕ್ತಿ ಸಮಾವೇಶ ನಡೆಯಲಿದ್ದು, ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಬಿಜೆಪಿ ನಾಯಕರು ಮಾತನಾಡಲಿದ್ದಾರೆ.

ಕಾರ್ಯಕರ್ತರ ನವಶಕ್ತಿ ಸಮಾವೇಶ: ಶಿವಪುರ ಕಾರ್ಯಕ್ರಮದ ನಂತರ ಹಿರೇಸಿಂದೋಗಿ-ಅಳವಂಡಿ ಭಾಗದ ಕಾರ್ಯಕರ್ತರ ನವಶಕ್ತಿ ಸಮಾವೇಶಕ್ಕೆ ಸಂಸದರಾದ ಬಿ. ಶ್ರೀರಾಮುಲು ಹಾಗೂ ಸಂಗಣ್ಣ ಕರಡಿ ಅಳವಂಡಿಯಲ್ಲಿ ಮಧ್ಯಾಹ್ನ 3 ಗಂಟೆಗೆ ಚಾಲನೆ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಸೇರ್ಪಡೆ ಕಾರ್ಯಕ್ರಮವೂ ನಡೆಯಲಿದ್ದು, ತಿಗರಿ, ಹನಕುಂಟಿ, ಅಳವಂಡಿ ಮುಂತಾದ ಊರುಗಳ ವಿವಿಧ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರನ್ನು ಅವರು ಬಿಜೆಪಿಗೆ ಬರಮಾಡಿಕೊಳ್ಳಲಿದ್ದಾರೆ.
ಬರಲಿರುವ ವಿಧಾನಸಭಾ ಚುನಾವಣೆಗೆ ಅನುಸರಿಸಬೇಕಾದ ಕಾರ್ಯತಂತ್ರಗಳು ಹಾಗೂ ಪ್ರಚಾರ ತಂತ್ರದ ಕುರಿತೂ ಚಿಂತನ-ಮಂಥನ ನಡೆಯಲಿದೆ. ಶೀಘ್ರವಾಗಿ ಸಂಚರಿಸಿ, ಪ್ರಚಾರ ನಡೆಸುವ ಉದ್ದೇಶದಿಂದ ನೂತನ ಪ್ರಚಾರ ವಾಹನಗಳು ಸಿದ್ಧವಾಗಿದ್ದು, ಕಾರ್ಯಕರ್ತರಲ್ಲಿ ಹೆಚ್ಚಿನ ಹುಮ್ಮಸ್ಸು ತರುವ ನಿರೀಕ್ಷೆಯಿದೆ.

Please follow and like us:
error