ಶಿಮ್ಲಾದಲ್ಲಿ ಮೊಳಗಿದ ಕನ್ನಡ ಡಿಂಡಿಮ

ಶಿಮ್ಲಾದಲ್ಲಿ ನಡೆಯುತ್ತಿರುವ ಎಸ್.ಎಫ್.ಐ ನ 16 ನೇ ಅಖಿಲ ಭಾರತ ಸಮ್ಮೇಳನದಲ್ಲಿ ಕರ್ನಾಟಕದ ಪ್ರತಿನಿಧಿಗಳು ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಿದರು.
‘ಬಾರಿಸು ಕನ್ನಡ ಡಿಂಡಿಮ’ ಘೋಷಣೆ ಮೊಳಗಿಸಿದ ಪ್ರತಿನಿಧಿಗಳು “ಹಚ್ಚೇವು ಕನ್ನಡದ ದೀಪ ಹಾಡುವ ಮೂಲಕ ಆಚರಣೆಗೆ ಮೆರಗು ತಂದರು.”

ಎಸ್.ಎಫ್.ಐ ಅಖಿಲ ಭಾರತ ಅಧ್ಯಕ್ಷರಾದ ವಿ.ಪಿ ಸಾನು ರಾಜ್ಯದ ಜನತೆಗೆ ರಾಜ್ಯೋತ್ಸವದ ಶುಭಾಶಯಗಳನ್ನು ಕನ್ನಡದಲ್ಲಿ ಹಾರೈಸಿದ್ದು ವಿಶೇಷ ಗಮನ ಸೆಳೆಯಿತು. ಸರಕಾರಿ ಕನ್ನಡ ಶಾಲೆಗಳನ್ನು ಮುಚ್ಚಬಾರದು, ಅವುಗಳನ್ನು ಬಲಪಡಿಸಿ ಶಿಕ್ಷಣ ಉಳಿಸುವ ಕೆಲಸವನ್ನು ಕರ್ನಾಟಕ ರಾಜ್ಯ ಸರಕಾರ ಮಾಡಬೇಕು ಎಂದು ಆಗ್ರಹಿಸಿದರು.

ಎಸ್.ಎಫ್.ಐ ರಾಜ್ಯ ಕಾರ್ಯದರ್ಶಿ ಗುರುರಾಜ್ ದೇಸಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಎಫ್.ಐ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ವಿಕ್ರಂಸಿಂಗ್, ರಾಜ್ಯಾಧ್ಯಕ್ಷ ವಿ.ಅಂಬರೀಶ್, ಅಸ್ಸಾಂ ರಾಜ್ಯಾಧ್ಯಕ್ಷ ನಿರಂಕುಶ್, ಮಹಾರಾಷ್ಟ್ರದ ರಾಜ್ಯಾಧ್ಯಕ್ಷ ಬಾಲಾಜಿ, ಕೇಂದ್ರ ಸಮಿತಿ ಸದಸ್ಯರಾದ ರೇಣುಕಾ ಕಹಾರ್, ಬಸವರಾಜ ಪೂಜಾರ ಹಾಗೂ ಕೊಪ್ಪಳ ಜಿಲ್ಲಾ ಅಧ್ಯಕ್ಷ ಅಮರೇಶ ಕಡಗದ, ರಾಯಚೂರಿನ ಶಬ್ಬೀರ್ ಜಾಲಹಳ್ಳಿ, ಬಳ್ಳಾರಿಯ ಬಸವರಾಜ, ವಾಸುದೇವ ರೆಡ್ಡಿ, ಗಾಯತ್ರಿ, ಮಾದುರಿ, ಸೋಮಶೇಖರ್, ಬಸವರಾಜ ಬೋವಿ ಸೇರಿದಂತೆ ಕರ್ನಾಟಕದ ಹಾಗೂ ಇತರೆ ರಾಜ್ಯದ ಪ್ರತಿನಿಧಿಗಳು ಹಾಜರಿದ್ದರು.

Please follow and like us:
error