ಶಿಕ್ಷಕರ ಪ್ರತಿಭಟನೆ :  ಪ್ರಾಥಮಿಕ  ಶಾಲೆಗಳು ಬಂದ್

ಕೊಪ್ಪಳ: ಪ್ರಾಥಮಿಕ ಶಾಲಾ ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇಂದು (೦೯-೦೭-

೨೦೧೯) ಕ.ರಾ.ಪ್ರಾ.ಶಾ.ಶಿ.ಸಂಘ ಹಮ್ಮಿಕೊಂಡಿರುವ ಬೃಹತ 

ಪ್ರತಿಭಟನಾ ರ‍್ಯಾಲಿಯಲ್ಲಿ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲಾ 

ಶಿಕ್ಷಕರು ಶಾಲೆಗಳನ್ನೆಲ್ಲಾ ಬಂದ್ ಮಾಡಿ ಒಂದು ದಿನದ 

ಮುಷ್ಕರದಲ್ಲಿ ಪಾಲ್ಗೊಳ್ಳಬೇಕೆಂದು ಕ.ರಾ.ಪ್ರಾ.ಶಾ.ಶಿ 

ಸಂಘದ ಜಿಲ್ಲಾಧ್ಯಕ್ಷ ಶರಣಬಸನಗೌಡ ಪಾಟೀಲ 

ಪ್ರಕಟಣೆಯಲ್ಲಿ ಕೋರಿದ್ದಾರೆ. ಅಂದು ನಗರದ ಹಳೇ 

ಸಾರ್ವಜನಿಕ ಮೈದಾನದಿಂದ ಕಾಲ್ನಡಿಗೆಯ ಮೂಲಕ 

ಜಿಲ್ಲಾಧಿಕಾರಿಗಳ ಕಛೇರಿ ತಲುಪಿ ಆ ಮೂಲಕ ಮಾನ್ಯ 

ಮುಖ್ಯಮಂತ್ರಿಗಳಿಗೆ, ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿ 

ಅಲ್ಲಿಯೇ ಸಾಯಂಕಾಲದವರೆಗೆ ಧರಣಿ 

ಮಾಡಲಾಗುವುದು ಆದ್ದರಿಂದ ಬೆಳಿಗ್ಗೆ ೧೦:೦೦ ಗಂಟೆಗೆ 

ಪ್ರಾಥಮಿಕ ಶಾಲಾ ಶಿಕ್ಷಕರೆಲ್ಲರೂ ಹಳೇ ಸಾರ್ವಜನಿಕ 

ಮೈದಾನದಲ್ಲಿ ಹಾಜರಿರುವಂತೆ ಕೋರಿದ್ದಾರೆ. 

Please follow and like us:
error