ಶಿಕ್ಷಕರು ಸಂಶೋಧಕರಾದಾಗ ಭೋಧನೆ ಸುಧಾರಿಸುತ್ತದೆ – ಎಂ. ಜಿ. ದಾಸರ

: ಫೆ.೧೪ ನಗರದ ಬಹದ್ದೂರಬಂಡಿ ರಸ್ತೆಯಲ್ಲಿರುವ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಗಣಿತ, ವಿಜ್ಞಾನ, ಇಂಗ್ಲೀಷ್ ವಿಷಗಳ ಒಂದು ದಿನದ ಶಿಕ್ಷಕರ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಜಿ. ದಾಸರ ಶಿಕ್ಷಕರು ಯಾವಾಗ ಸಂಶೋಧಕರಾಗುತ್ತಾರೆ ಆಗ ಭೋಧನೆ ಸುಧಾರಿಸುತ್ತದೆ ಮಕ್ಕಳಿಗೆ ಸಾಂತ್ವಾನ ಹೇಳಿ ಶಿಕ್ಷಣ ನೀಡುವಂತಹ ವೃತ್ತಿ ಇದಾಗಿದೆ. 

ಮಕ್ಕಳನ್ನು ಮನವೋಲಿಸಿ ಕಲಿಸುವಂತಹ ಪ್ರವೃತ್ತಿಯನ್ನು ಬೆಳಸಿಕೊಳ್ಳಬೇಕು ಶಿಕ್ಷಕರು ವರ್ಗಕೋಣೆಯ ಸಮಸ್ಯಗಳನ್ನು ಮೆಲಕು ಹಾಕುವಂತಹ ಕೆಲಸ ಇಂತಹ ಕಾರ್ಯಗಳಲ್ಲಿ ಆಗಬೇಕು ಹಾಗೂ ಚೈತನ್ಯವನ್ನು ಮತ್ತು ವೃತ್ತಿ ಪ್ರಾವಿಣ್ಯತೆಯನ್ನು ಹೆಚ್ಚಿಸಿಕೊಳ್ಳಲು ಸಾಹಯಕವಾಗುತ್ತದೆ ಮಕ್ಕಳಿಗೆ ಪರೀಕ್ಷೆ ಉದ್ದೇಶದಿಂದ ಬೊಧಿಸಿದೇ ಜೀವನವನ್ನು ರೂಪಿಸಿಕೊಳ್ಳುವ ಮನವೀಯ ಮೌಲ್ಯಗಳ ಶಿಕ್ಷಣವನ್ನು ನೀಡಿ ಸುಸಂಕೃತ ಸಮಾಜ ನಿರ್ಮಾಣಕ್ಕೆ ಕಾರಣವಾಗಬೇಕ. ಕಟ್ಟಿಟ್ಟ ಜ್ಞಾನ ಕೊಳೆಯುತ್ತದೆ ಬಿಚಿಟ್ಟ ಜ್ಞಾನ ಹೊಳೆಯುತ್ತದೆ ಎಂದು ಕಾರ್ಯಗಾರದಲ್ಲಿ ಸಕ್ರೀಯವಾಗಿ ಪಾಲ್ಗೊಂಡು ತರಗತಿಯಲ್ಲಿ ಎದುರಾದ ಸಮಸ್ಯಗಳನ್ನು ಚರ್ಚಿಸಿ ಅರ್ಥೈಸಿಕೊಂಡು ತರಗತಿಯಲ್ಲಿ ಮಕ್ಕಳ ಮನ ಮುಟ್ಟುವಂತೆ ಬೋಧನೆ ಮಾಡಿ ಜಿಲ್ಲಿಎಯ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಸುಧಾರಿಸಲು ನಾವು ನೀವೆಲ್ಲರೂ ಶ್ರಮಿಸಬೇಕೆಂದು ಹೇಳಿದರು.
ಕಾರ್ಯಕ್ರಮದ ಮೊದಲಿಗೆ ಶಿಕ್ಷಣ ಸಂಯೋಜಕರಾದ ಶಂಕರಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರದಲ್ಲಿ ಜಿಲ್ಲಾ ನೋಡಲ್ ಅಧಿಕಾರಿ ಸಾರ್ವಜನಿಕ ಶಿಕ್ಷಣ ಇಲಾಖೆಯ ರೇಹತ್ ಖಾನಂ ರವರು ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿ ಆರ್. ಹೆಚ್ ಅತ್ತನೂರ ವಹಿಸಿದ್ದರು, ವೇದಿಕೆಯ ಮೇಲೆ ಶಿಕ್ಷಕರಾದ ಬಸಯ್ಯ ದೊಡ್ಡಮನಿ, ಮಂಜು ನಾಯಕ, ರಾಮಣ್ಣ, ವೆಂಕಟೇಶ ಜೋಷಿ, ರೇಣುಕಾ ಅತ್ತನೂರ, ಶಿಕ್ಷಣ ಪ್ರೇಮಿ ಅಶೋಕ ಅಂಗಡಿ ಹಾಗೂ ತಾಲೂಕಿನ ಎಲ್ಲಾ ಗಣಿತ, ವಿಜ್ಞಾನ, ಇಂಗ್ಲೀಷ್ ವಿಷಯ ಶಿಕ್ಷಕರು ಭಾಗವಹಿಸಿದ್ದರು.
ಜಿ. ಎಸ್ ಹಿರೇಗೌಡ್ರು ನಿರೂಪಿಸಿದರು, ಶರಣಪ್ಪ ಬನ್ನಿಮರದ ಸ್ವಾಗತಿಸಿದರು ಕೊನೆಯಲ್ಲಿ ಆಫ್ರೀನ್ ತಬಸ್ಸುಂ ವಂದಿಸಿದರು.

Please follow and like us:
error