You are here
Home > Koppal News > ಶಾಸಕ ಸ್ಥಾನಕ್ಕೆ‌ ರಾಜಿನಾಮೆ‌ ಸಲ್ಲಿಸಿ ಚುನಾವಣೆಗೆ ಸಜ್ಜಾದ ಇಕ್ಬಾಲ್ ಅನ್ಸಾರಿ

ಶಾಸಕ ಸ್ಥಾನಕ್ಕೆ‌ ರಾಜಿನಾಮೆ‌ ಸಲ್ಲಿಸಿ ಚುನಾವಣೆಗೆ ಸಜ್ಜಾದ ಇಕ್ಬಾಲ್ ಅನ್ಸಾರಿ

ಅಭಿವೃದ್ಧಿಯ‌ ಹರಿಕಾರ  ಎಂದು ಖ್ಯಾತರಾಗಿರುವ ಗಂಗಾವತಿ‌ ವಿಧಾನಸಭಾ ಕ್ಷೇತ್ರದ  ಶಾಸಕ  ಇಕ್ಬಾಲ್‌ ಅನ್ಸಾರಿಯವರು  ಇಂದು‌ ಬೆಂಗಳೂರಿನಲ್ಲಿ   ಸಭಾಪತಿಗಳಾದ   ಕೆ.ಬಿ.ಕೋಳಿವಾಡರವರಿಗೆ ಶಾಸಕ ಸ್ಥಾನಕ್ಕೆ ರಾಜಿನಾಮೆ‌ ಪತ್ರ ಸಲ್ಲಿಸಿದರು. 
2013 ರಲ್ಲಿ ಐತಿಹಾಸಿಕ‌ ವಿಜಯವನ್ನು‌ ಸಾಧಿಸಿ ಅತ್ಯಧಿಕ‌ ಬಹುಮತದಿಂದ. ಶಾಸಕರಾಗಿ ಆಯ್ಕೆಯಾದಾಗಿನಿಂದ  ಇಕ್ಬಾಲ್ ಅನ್ಸಾರಿಯವರು  ಕೇವಲ‌ ಅಭಿವೃದ್ಧಿ , ಅಭಿವೃದ್ಧಿ ಹಾಗೂ ಅಭಿವೃದ್ಧಿಯನ್ನೆ‌ ಜಪಿಸಿದವರು.
ತಮ್ಮ‌ಪಕ್ಷದ ಸರಕಾರ‌ ಇಲ್ಲದ‌ ಸಂಧರ್ಭದಲ್ಲಿ‌ ತಮ್ಮ ರಾಜಕೀಯ‌ ಭವಿಷ್ಯವನ್ನು‌ ಪಣಕ್ಕಿಟ್ಟು ಕೇವಲ‌ ಕ್ಷೇತ್ರದ ಅಭಿವೃದ್ಧಿಗೋಸ್ಕರ. ಕಾಂಗ್ರೇಸ್ ಪಕ್ಷದ ಸರಕಾರದ‌ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಸಖ್ಯ‌ ಸಾಧಿಸಿ  ಕ್ಷೇತ್ರಕ್ಕೆ ಇನ್ನುವರೆಗೂ ಸುಮಾರು‌ 900 ಕೋಟಿ ಅನುದಾನವನ್ನು ತರಲು ಯಶಸ್ವಿಯಾಗಿದ್ದಾರೆ.
ಈಗ‌ ಅನ್ಸಾರಿಯವರು  ಶಾಸಕ‌ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು ಪೂರ್ಣ ಪ್ರಮಾಣದಲ್ಲಿ  ಚುನಾವಣೆಯತ್ತ ಗಮನ‌ಹರಿಸಲಿದ್ದಾರೆ ಎನ್ನಲಾಗಿದೆ. ಕ್ಷೇತ್ರದಲ್ಲಿ ತಮ್ಮದೇ ಆದ ಸಶಕ್ತ‌ ಪಡೆ, ಅತ್ಯಧಿಕ‌ ಅಭಿಮಾನಿಗಳು‌ ಹಾಗೂ  ಸಕ್ರಿಯ‌ ಕಾರ್ಯಕರ್ತರನ್ನು‌ ಹೊಂದಿರುವ. ಅನ್ಸಾರಿಯವರನ್ನು  ಸುಲಭವಾಗಿ ಎದುರು ಹಾಕಿಕೊಳ್ಳಲಿಕ್ಕಾಗಲ್ಲ‌ಎನ್ನುವುದು ಈಗಾಗಲೆ‌ ವಿರೋಧಿ ಪಾಳಯದವರಿಗೆ‌ ಮನವರಿಕೆ‌ ಆಗಿದೆ.
  ದಿ.25-03-2018  ಬಾನುವಾರ ಮೈಸೂರು ಸಮೀಪದ‌ ಮಳವಳ್ಳಿಯಲ್ಲಿ‌* ನಡೆಯಲಿರುವ  ಕಾಂಗ್ರೇಸ್‌ ಪಕ್ಷದ. ಬೃಹತ್‌ ಸಮಾವೇಶದಲ್ಲಿ  ಇನ್ನು‌ 6  ಜನ‌ ಜೆ.ಡಿ.ಎಸ್ ಶಾಸಕರ‌ ಜೊತೆಗೂಡಿ ರಾಹುಲ್‌ ಗಾಂಧಿವರ ಸಮ್ಮುಖದಲ್ಲಿ ಕಾಂಗ್ರೇಸ್‌‌ ಪಕ್ಷಕ್ಕೆ‌ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ.
Top