ಶಾಸಕ ರಾಘವೇಂದ್ರ ಹಿಟ್ನಾಳ್ ರಿಂದ ಆಹಾರ ಕಿಟ್ ವಿತರಣೆ


ಕೊಪ್ಪಳ: ಕೊರೊನಾ ಭೀತಿ ಹರಡುತ್ತಿರುವ ಹಿನ್ನೆಲೆ, ರಾಜ್ಯವನ್ನು ಲಾಕ್ ಡೌನ್ ಮಾಡಲಾಗಿದೆ. ಇದರಿಂದ ಕೂಲಿ ಕಾರ್ಮಿಕರು ಹಾಗೂ ವಿವಿಧ ವಾರ್ಡ್ ನ ಬಡಕುಟುಂಬಗಳಿ ಅಗತ್ಯ ವಸ್ತುಗಳ ಸಮಸ್ಯೆ ಎದುರಾಗಿದೆ ಈ ಹಿನ್ನೆಲೆ ಸುಮಾರು 3೦೦೦ ಕ್ಕಿಂತ ಹೆಚ್ವು ಅಗತ್ಯ ವಸ್ತುಗಳ ರೇಷನ್ ಕಿಟ್ ಗಳನ್ನು ಬಡಕುಟುಂಬಗಳಿಗೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳರವರು ನಗರದ ತಮ್ಮ ಮನೆಯ ಆವರಣದಲ್ಲಿ ಮಹಿಳೆಯರಿಗೆ ವಿತರಿಸಿದರು
ಅಕ್ಕಿ, ಬೇಳೆ ಸೇರಿಸಿದಂತೆ ಅಗತ್ಯವಸ್ತುಗಳ ರೇಷನ್ ಕಿಟ್ ನ್ನು, ವಿವಿಧ ವಾರ್ಡ್ ಗಳ ಬಡವರಿಗೆ ಹಂಚಲಾಗುವುದು ಅಗತ್ಯ ಬಿದ್ರೆ ಇನ್ನಷ್ಟು ಪೂರೈಸಲಾಗುವುದು. ಎಲ್ಲರೂ ಮನೆಯಲ್ಲಿದ್ದು ಸಾಮಜಿಕ ಅಂತರ ಕಾಪಾಡುವ ಮೂಲಕ ಆರೋಗ್ಯದ ಕಡೆ ಗಮನಹರಿಸಬೇಕಾಗಿದೆ.

ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಅಧ್ಯಕ್ಷರುಗಳಾದ ,ಶೇಖರಪ್ಪ‌ ನಾಗರಳ್ಳಿ, ರಾಜಶೇಖರ ಕೆ ಹಿಟ್ನಾಳ,ಜುಲ್ಲುಸಾಬ ಖಾದ್ರಿ,ಸುರೇಶ ಭೂಮರೆಡ್ಧಿ,ಕೃಷ್ಣ ಇಟ್ಟಂಗಿ , ಪ್ರಸನ್ನ ಗಡಾದ
ನಗರಸಭೆ ಸದಸ್ಯರಾದ ಅಕ್ಬರ್ ಪಾಲ್ಟನ್, ಅಜೀಮ್ ಅತ್ತಾರ್, ಮುತ್ತುರಾಜ ಕುಷ್ಟಗಿ,ನಗರ ಘಟಕದ ಬ್ಲಾಕ್ ಅಧ್ಯಕ್ಷ ಕಾಟನ್ ಪಾಷಾ, ಮಾಜಿ ನಗರ ಸಭೆ ಸದಸ್ಯ ಮಾನ್ವಿ ಪಾಷಾ, ಮಾಧ್ಯಮ ವಕ್ತಾರ ಕುರಗೋಡ ರವಿ ಸೇರಿದಂತೆ ಇತರರು ಇದ್ದರು

Please follow and like us:
error