ಶಾಸಕ ಪರಣ್ಣ ಮುನವಳ್ಳಿ ಖೋಟಾನೋಟ್, ಜೀವ ಬೆದರಿಕೆ ಕೇಸ್ ಗೆ ಚೆನ್ನೈ ನಂಟು

ಕೊಪ್ಪಳ : ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಜೀವ ಬೆದರಿಕೆ, ಖೋಟಾ ನೋಟು ಪ್ರಕರಣಕ್ಕೆ ಸಂಬಂದಿಸಿದಂತೆ ಖೋಟಾನೋಟು ಸರಬರಾಜು ಜಾಲ ತಂಡ ಪತ್ತೆ ಹಚ್ಚಿದ ಕೊಪ್ಪಳ ಪೊಲೀಸರು.

೨೦೦೦ ಹಾಗೂ ೫೦೦ ಮುಖ ಬೆಲೆ ನೋಟುಗಳ ೧೬ ಲಕ್ಷ ರೂಪಾಯಿಗಳ ವಶ.ಇಬ್ಬರು ಅರೋಪಿಗಳನ್ನು ಬಂಧಿಸಿದ ಪೊಲೀಸರು. ಅನಂತಪೂರ ಮೂಲದ ಬೆಂಗಳೂರು ನಿವಾಸಿ ಅಬ್ದುಲ್ ರೆಹಮಾನ್ (೩೯). ತಮಿಳುನಾಡು ಮೂಲದ ಬೆಂಗಳೂರು ನಿವಾಸಿ ಎಂ.ಎ.ಅಮ್ಜದ್ (೪೪) ಬಂಧಿತರು.

ಚೆನ್ನ್ಯ ಮಹಾನಗರದ ಹೊರ ವಲಯದ ನಿವಾಸದ ಮೇಲೆ ದಾಳಿ ಮಾಡಿ ದಸ್ತಗಿರಿ ಮಾಡುವ ಮೂಲಕ ಪ್ರಕರಣ ಬಯಲಿಗೆಳೆದ ಪೊಲೀಸರು. ಬಿಜೆಪಿಯ ಮುಖಂಡ ಯರಿಸ್ವಾಮಿ ಬಿಲ್ಗಾರ ಸೇರಿದಂತೆ ೧೦ ಜನ ಆರೋಪಿಗಳನ್ನು ಈಗಾಗಲೇ ಬಂದಿಸಲಾಗಿದೆ.

ಸ್ಕ್ಯಾನರ್, ಪ್ರಿಂಟರ್, ಕಂಪ್ಯೂಟರ್, ಪೇಪರ್, ಅಚ್ಚು, ಇಂಕ ಬಾಟಲಿ ಸೇರಿದಂತೆ ಪ್ರಮುಖ ದಾಖಲೆಗಳ ವಶ.ಕಲಂ ೧೨೦ (ಬಿ), ೪೮೯ ಎ. ಬಿ. ಸಿ, ೫೦೬, ೫೦೭, ೩೪ ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ ಪೊಲೀಸರು.

Please follow and like us:

Related posts