ಶಾಸಕ ಕೆ.ರಾಘವೇಂದ್ರ ಹಿಟ್ನಾಳರಿಂದ ೧.೫೦ ಕೋಟಿಯ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ

koppal-mla-work koppal-mla-works

ಕೊಪ್ಪಳ : ೩೦ ನಗರದ ವಿವಿಧ ವಾರ್ಡಗಳಲ್ಲಿ ಲೋಕಪಯೋಗಿ ಇಲಾಖೆ ಮತ್ತು ಕರ್ನಾಟಕ ಕೊಳಚೆ ನಿರ್ಮೂಲನಾ ಯೋಜನೆಯಡಿಯಲ್ಲಿ ರೂ ೧.೫೦ ಕೋಟಿ ಸಿ.ಸಿ ರಸ್ತೆ ಹಾಗೂ ಚರಂಡಿ, ಶುದ್ದ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ರವರು ತೀವ್ರಗತಿಯಲ್ಲಿ ಅಭಿವೃದ್ದಿ ಹೊಂದುತ್ತಿರುವ ಕೊಪ್ಪಳ ನಗರವು ಈ ಹಿಂದಿನ ಸರ್ಕಾರಗಳಲ್ಲಿ ಅಭಿವೃದ್ದಿಯು ಕುಂಟಿತಕೊಂಡಿದ್ದು ರಾಜ್ಯದ ಜನಪರ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಪ್ರತಿಯೊಂದು ವಾರ್ಡಿನ ಸರ್ವಾಂಗೀಣ ಅಭಿವೃದ್ದಿಗೆ ವಿಶೇಷ ಅನುಧಾನ ನೀಡಿ ರಸ್ತೆ, ಚರಂಡಿ, ಸಾರ್ವಜನಿಕ ಉದ್ಯಾನವನ , ಶುದ್ದ ಕುಡಿಯುವ ನೀರಿನ ಘಟಕಗಳ ಕಾಮಗಾರಿಗಳನ್ನು ಕೈಗೆ ಎತ್ತಿಕೊಂಡು ಕೊಪ್ಪಳ ನಗರದ ಸೌಂದರ್ಯಕ್ಕೆ ಹೆಚ್ಚು ಹೊತ್ತು ಕೊಡಲಾಗುತ್ತಿದೆ. ಈಗಾಲೆ ನಗರದ ಪಕ್ಕದಲ್ಲಿಯೇ ಬೃಹತ್ತ ವೈದ್ಯಕೀಯ ಕಾಲೇಜ ಆರಂಭಗೊಂಡಿದ್ದು ಬರುವ ದಿನಗಳಲ್ಲಿ ನಗರದ ಸಮೀಪದಲ್ಲಿರುವ ಬಾನಾಪೂರದ ಬಳಿ ಇಂಜನಿಯರಿಂಗ್ ಕಾಲೇಜ್, ಆರಂಭಗೊಳ್ಳಲಿದ್ದು ಬೃಹತ್ತ ಕೈಗಾರಿಕೆಗಳು ಇರುವುದಿರಿಂದ ನಗರವು ಇನಷ್ಠು ಬೃಹತ್ತ ಪ್ರಮಾಣದಲ್ಲಿ ಬೆಳೆಯುತ್ತಿದ್ದು ಇದರ ದೂರದೃಷ್ಠಿಯಿಂದಲೆ ಕೊಪ್ಪಳವನ್ನು ಸ್ವಚ್ಛ ಹಾಗೂ ಸುಂದರ ನಗರವನ್ನು ಮಾಡುವ ಸಂಕಲ್ಪ ನಮ್ಮದಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಕೆ.ರಾಜಶೇಖರ ಹಿಟ್ನಾಳ, ಮುಂಖಡರುಗಳಾದ ಬಾಸುಸಾಬ ಖತೀಬ್, ನವೋದಯ ವೀರುಪಣ್ಣ, ನಗರಸಭಾ ಸದಸ್ಯರುಗಳಾದ ಅಮ್ಜದ್ ಪಟೇಲ್ , ಶ್ರೀಮತಿ ಲತಾ.ವಿ.ಸಂಡೂರು , ರಾಮಣ್ಣ ಹದ್ದಿನ, ಮೌಲಾಹುಸೇನ ಜಮಾದಾರ, ಮಹೇಶ ಬಜಂತ್ರಿ, ಮುತ್ತುರಾಜ ಕುಷ್ಟಗಿ, ಗವಿಸಿದ್ದಪ್ಪ ಚಿನ್ನೂರ, ಕಾಟನ ಪಾಷಾ, ಕಲ್ಲಕ್ಷಪ್ಪ ಪೂಜಾರ, ವೀರಣ್ಣ ಸಂಡೂರು, ಶಿವಕುಮಾರ ಪಾವಲಿಶೆಟ್ಟರ್, ಬಸವರಾಜ ಶಹಾಪೂರ, ನಗರಸಭೆ ಪೌರಾಯುಕ್ತರು, ಅಭಿಯಂತರರು, ಲೋಕಪಯೋಗಿ ಇಲಾಖೆ ಅಭಿಯಂತರರು, ಹಾಗೂ ವಕ್ತಾರ ಅಕ್ಬರ್ ಪಾಷಾ ಪಲ್ಟನ್ ಉಪಸ್ಥಿತರಿದ್ದರು.

Please follow and like us:
error

Related posts

Leave a Comment