ಶಾಸಕ ಕೆ.ರಾಘವೇಂದ್ರ ಹಿಟ್ನಾಳರಿಂದ ಗಣೇಶ ಮೂರ್ತಿಗಳ ವೀಕ್ಷಣೆ

ಶಾಸಕ ಕೆ.ರಾಘವೇಂದ್ರ ಹಿಟ್ನಾಳರಿಂದ ಕೊಪ್ಪಳ ನಗರದ ವಿವಿಧ ಗಣೇಶ ಸಮಿತಿಗಳ ಉತ್ಸವಗಳಿಂದ ಪ್ರತಿಷ್ಟಾಪಣೆ ಮಾಡಿರುವ ಗಣೇಶ ಮೂರ್ತಿಗಳ ವೀಕ್ಷಣೆ.
ಕೊಪ್ಪಳ ೦೫- ಕೊಪ್ಪಳ ನಗರದ ಜವಹಾರ ರಸ್ತೆ, ಕೋಟೆ ಮತ್ತು ಈಶ್ವರ ಉದ್ಯಾನವನದಲ್ಲಿ ಹಾಗೂ ನಗರದ ಮುಖ್ಯ ರಸ್ತೆಗಳಲ್ಲಿ ಪ್ರತಿಷ್ಟಾಪಿಸಿರುವ ಗಣೇಶ ಮೂರ್ತಿಗಳ ವಿಕ್ಷಣೆಯನ್ನು ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ ಅವರು ಇಂದು ಗಣೇಶನ್ನ ದರ್ಶನ ಪಡೆದು ವಿವಿಧ ಗಣೇಶ ಸಮಿತಿಗಳಿಂದ

ಸನ್ಮಾನಿತಗೊಂಡರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷಗಳಾದ ಸುರೇಶ ಭೂಮರಡ್ಡಿ, ಕಾಟನ ಪಾಷ. ನಗರ ಸಭಾ ಸದಸ್ಯರಗಳಾದ ಅಮ್ಜದ್ ಪಟೇಲ್, ಮುತ್ತುರಾಜ ಕುಷ್ಟಗಿ, ಅಕ್ಬರ ಪಾಷ ಪಲ್ಟನ್, ಬಸಯ್ಯ ಸ್ವಾಮಿ ಹಿರೇಮಠ, ಅಜೀಮ ಅತ್ತಾರ್, ಗುರುರಾಜ ಹಲಗೇರಿ, ಪರಶುರಾಮ ಮೇದಾರ್, ಅರುಣ್ಣ ಶೆಟ್ಟಿ, ಮುಖಂಡರುಗಳಾದ ಬಾಷುಸಾಬ ಖತೀಬ, ವೀರಣ್ಣ ಸಂಡೂರ, ಅಜ್ಜಪ್ಪ ಸ್ವಾಮಿ, ಮಾನ್ವಿ ಪಾಷ, ಮಂಜುನಾಥಗಾಳಿ, ಅರಿಹಂತ ಮೇಹತಾ, ಮಹೆಬೂಬ ಅರಗಂಜಿ, ವಕ್ತಾರಾದ ಕೋರಗೋಡ ರವಿ ಯಾದವ ಉಪಸ್ಥತರಿದ್ದರು.

Please follow and like us: