ಶಾಸಕ ಇಕ್ಬಾಲ್ ಅನ್ಸಾರಿ ಅವರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಹಕಾರದಿಂದ ಗಂಗಾವತಿ ಕ್ಷೇತ್ರದ ಗ್ರಾಮೀಣದಲ್ಲಿ ಅಭಿವೃದ್ದಿ ಕ್ರಾಂತಿ ಆಗಿದೆ ಎಂದು ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಹೇಳಿದರು.
ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಪ್ಪಳ ತಾಲೂಕಿನ ಇಂದರಗಿ ಗ್ರಾಮದಲ್ಲಿ ಒಟ್ಟು 1 ಕೋಟಿ 38 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ, ರಸ್ತೆ ಡಾಂಬರೀಕರಣ, ಶಾಲಾ ಕೊಠಡಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಗಂಗಾವತಿ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಶೈಕ್ಷಣಿಕ ಕಾಳಜಿಯಿಂದ ಇಂದರಗಿ ಗ್ರಾಮಕ್ಕೆ ಸರಕಾರಿ ಪದವಿ ಪೂರ್ವ ಕಾಲೇಜು ಮಂಜೂರು ಮಾಡಿಸಿದ್ದು ಕಾಲೇಜ್ ಕಟ್ಟಡಕ್ಕಾಗಿ ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಗೆ 1 ಕೋಟಿ 34 ಲಕ್ಷ ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿದ್ದು ಶೀಘ್ರ ಹಣ ಮಂಜೂರು ಆಗಲಿದೆ. ಮುಖ್ಯಮಂತ್ರಿಗಳ ಉಚಿತ ಅನಿಲ ಭಾಗ್ಯ ಯೋಜನೆಗೆ ಮೊದಲ ಹಂತದಲ್ಲಿ ಇಂದರಗಿ ಗ್ರಾಮದಲ್ಲಿ 260 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು.
ನಂತರ ಶಾಸಕರು ಗೋಸಲದೊಡ್ಡಿಯಲ್ಲಿ 76 ಲಕ್ಷ ವೆಚ್ಚದಲ್ಲಿ ಅರಿಶಿಣಕೇರಿ-ಕೊಡದಾಳ ರಸ್ತೆ ಡಾಂಬರೀಕರಣ, 10ಲಕ್ಷ ವೆಚ್ಚದ ಶಾಲಾ ಕೊಠಡಿ ನಿರ್ಮಾಣ, ಮೆತಗಲ್‍ನಲ್ಲಿ 91ಲಕ್ಷ ವೆಚ್ಚದ ಗಡ್ಡಿ-ಹಂಪಸದುರ್ಗಾ ರಸ್ತೆ ಡಾಂಬರೀಕರಣ, 20 ಲಕ್ಷ ವೆಚ್ಚದ ಸಿಸಿ ರಸ್ತೆ, 30 ಲಕ್ಷ ವೆಚ್ಚದ ಚೆಕ್ ಡ್ಯಾಂ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ವಿಸ್ತರಣಾ ಚಿಕಿತ್ಸಾಲಯ ಉದ್ಘಾಟಿಸಿದರು. ಜಿನ್ನಾಪುರದಲ್ಲಿ 10 ಲಕ್ಷ ವೆಚ್ಚದ ಸಿಸಿ ರಸ್ತೆ, ಚಾಮಲಾಪುರದಲ್ಲಿ 15 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಎಪಿಎಂಸಿ ಸದಸ್ಯ ರಾಮನಗೌಡ ಪಾಟೀಲ, ಹಾಸಗಲ್ ಗ್ರಾಪಂ ಅಧ್ಯಕ್ಷ ತುಕಾರಾಮ ಬಡೀಗೇರ, ಗಣ್ಯರಾದ ಹನುಮಂತಪ್ಪ ವನಬಳ್ಳಾರಿ, ಮಲ್ಲೇಶಪ್ಪ ಗುಮಗೇರಿ, ಸಂಗಮೇಶ ಬಾದವಾಡಗಿ, ಈರಣ್ಣ ಕೊಳ್ಳಿ, ಕನಕಪ್ಪ ಪೂಜಾರ ಇತರರು ಉಪಸ್ಥಿತರಿದ್ದರು. ಇಂದ್ರೇಶ ಕೊಳ್ಳಿ ಕಾರ್ಯಕ್ರಮ ನಿರ್ವಹಿಸಿದರು.

Please follow and like us:
error