ಶಾಸಕ ಅಮರೇಗೌಡ ಬಯ್ಯಾಪುರ ವಿವಾದಾತ್ಮಕ ಹೇಳಿಕೆ ನೀಡಿದ್ರಾ ? 

Koppal : ಕೊಪ್ಪಳದ ಕುಷ್ಟಗಿಯಲ್ಲಿ ಕಾಂಗ್ರೆಸ್ ಪಕ್ಷದ ಸಂಸ್ಥಾಪನಾ ದಿನಾಚರಣೆಯಲ್ಲಿ ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದ್ದು ವಿವಾದಕ್ಕೆ ಕಾರಣವಾಗಿದೆ. ಟ
ಸರ್ದಾರ್ ಪಟೇಲ್, ಬೋಸ್ ಉಗ್ರವಾದಿಗಳು. ಸ್ವಾತಂತ್ರ್ಯ ಹೋರಾಟದ ವೇಳೆ ಸರ್ದಾರ್ ವಲ್ಲಭಭಾಯ್ ಪಟೇಲ್ ಮತ್ತು ಸುಭಾಷಚಂದ್ರ ಬೋಸ್ ಅವರು ಒಂದು ರೀತಿ ಉಗ್ರವಾದಿಗಳಂತಿದ್ದರು. ಮಹಾತ್ಮಗಾಂಧಿ ಅವರದ್ದು ಅಹಿಂಸಾತ್ಮಕ ಚಳವಳಿಯಾಗಿತ್ತು . ಹಿಂಸಾ ಮಾರ್ಗದ ಮೂಲಕ ಸ್ವಾತಂತ್ರ್ಯ ಪಡೆಯಬೇಕು ಎಂಬುದು ಸರ್ದಾರ್ ಪಟೇಲ್ ಮತ್ತು ಬೋಸ್ ಅವರ ಉದ್ದೇಶ ಆಗಿತ್ತು .  ಕೊನೆ ಘಳಿಗೆಯಲ್ಲಿ ಕಾಂಗ್ರೆಸ್ ಸೇರಿದ್ದ ಪಟೇಲ್ ಅವರನ್ನು ಬಿಜೆಪಿ ತಮ್ಮವರು ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ . ಪಟೇಲರ ದೊಡ್ಡ ಮೂರ್ತಿಯನ್ನೇ ನಿರ್ಮಿಸಿ ವೈಭವೀಕರಿಸಿದ್ದಾರೆ . ಯುವಜನರಲ್ಲಿ ತಪ್ಪುಕಲ್ಪನೆ ಬಿತ್ತುತ್ತಿದ್ದಾರೆ. ನಂತರ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವೇಂದ್ರಪ್ಪ ಬಳೂಟಗಿ. ನೀವು ಉಗ್ರವಾದಿಗಳು ಎಂಬ ಪದ ಬಳಸಬಾರದಿತ್ತು ಎಂದು ಆಕ್ಷೇಪಿಸಿದರು. ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಬಯ್ಯಾಪುರ “ನಾನು ಹೇಳಿದ್ದು ಸರಿ”ಬೇಕಾದರೆ ಇದರ ಬಗ್ಗೆ ಚರ್ಚೆಯಾಗಲಿ ಎಂದು ಹೇಳಿದರು. 

Please follow and like us:
error