ಶಾಸಕರು ರಸ್ತೆ ಹಗರಣದಲ್ಲಿ ಶಾಮೀಲಾದವರ ವಿರುದ್ದ ಕ್ರಮ ಜರುಗಿಸಲಿ- ಕಂದಾರಿ

ಕೊಪ್ಪಳ ನಗರದ ಮುಖ್ಯರಸ್ತೆ ಕಾಮಗಾರಿ ಕೇವಲ 4.5ಕೋಟಿ ಹಗರಣ ನಡೆದಿಲ್ಲ, ಬದಲಾಗಿ 40ಕೋಟಿ ಹಗರಣ ನಡೆದಿದ್ದು, ಈಗಾಗಲೇ ನಗರಾಭಿವೃದ್ದಿ ಇಲಾಖೆಯ ಅಧಿಕಾರಿಗಳ ತಂಡ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿ 5ವರ್ಷಾವಾದರೂ ಯಾವುದೇ ಕ್ರಮ ಜರುಗಿಸಿಲ್ಲ. ಅಲ್ಲದೆ ನಾನು ಸಹ ಮುಖ್ಯಮಂತ್ರಿಗಳು ಸೇರಿದಂತೆ ಜಿಲ್ಲಾ ಉಸ್ತುವರಿ ಸಚಿವರಿಗೆ ಶಾಸಕರಿಗೆ ದೂರು ನೀಡಿ 8 ತಿಂಗಳು ಕಳೆಯುತ್ತಾ ಬಂದರೂ ಅದನ್ನು ತಿರುಗಿ ನೋಡದವರು ಈಗ ರಾಜಕೀಯ ಕಾರಣಕ್ಕಾಗಿ ತಪ್ಪಿತಸ್ಥರ ಕ್ರಮ ಜರುಗಿಸದೇ ದೂರು ಸಲ್ಲಿಸಿರುವ ಬಗ್ಗೆ ಸಮಾರಂಭದಲ್ಲಿ ಮಾತನಾಡಿರುವದು ಶಾಸಕರಿಗೆ ಶೋಭೆ ತರುವಂತದಲ್ಲ ಎಂದು ಹಾಲೇಶ ಕಂದಾರಿ ಹೇಳಿಕೆ ನೀಡಿದ್ದಾರೆ.

ನಿನ್ನೆ 2 ನೇ ಭಾರಿ ಮುಖ್ಯರಸ್ತೆ ಕಾಮಗಾರಿಗೆ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿರುವ ಕಾಮಗಾರಿ ಪೂಜೆಯಲ್ಲಿ ಮಾತನಾಡಿರುವ ಕೊಪ್ಪಳದ ಶಾಸಕರಾದ ರಾಘವೇಂದ್ರ ಹಿಟ್ನಾಳರವರಿಗೆ ನಿಜಕ್ಕೂ ಸಾರ್ವಜನಿಕ ಹಣ ಪೋಲಾಗಿರುವ ಬಗ್ಗೆ ಕಾಳಜಿ ಇದ್ದರೆ, ಈಗಾಗಲೇ ತನಿಖಾ ತಂಡ ನೀಡಿರುವ ವರದಿಯಲ್ಲಿ ಪ್ರಸ್ತಾಪಿತವಾಗಿರುವ ಅಧಿಕಾರಿಗಳು ಮತ್ತು ನಿರ್ಮಿತಿಕೇಂದ್ರವೆಂಬ ಬೋಗಸ್ ಏಜೆನ್ಸಿಯವರ ಮೇಲೆ ಕ್ರಮ ಜರುಗಿಸಲು ಒತ್ತಾಯಿಸಲಿ. ವಿನಾಕಾರಣ ಸಂಸದರಾದ ಸಂಗಣ್ಣ ಕರಡಿಯವರ ಹೆಸರನ್ನು ಪ್ರಸ್ತಾಪಿದೇ ಸರ್ಕಾರದ ಹಣವನ್ನು ಕೊಳ್ಳೆ ಹೊಡೆದಿರುವ ನಿರ್ಮಿತಿಕೇಂದದ ಶಶಿಧರ ಪಾಟೀಲ್, ಮಂಜುನಾಥ ಬನ್ನಿಕೊಪ್ಪ, ರಾಘವೇಂದ್ರ ಹಾಗೂ ಹಿಂದಿನ ಜಿಲ್ಲಾಧಿಕಾರಿಗಳಾದ ತುಳಸಿ ಮದ್ದೀನೇನಿಯವರ ಮೇಲೆ ಕ್ರಮ ಜರುಗಿಸುವ ಪ್ರಯತ್ನ ಮಾಡಲಿ ಎಂದರು.

ಅಲ್ಲದೆ ಶಾಸಕರೇ ನಿರ್ಮಿತಿ ಕೇಂದ್ರ ಭ್ರಷ್ಡ ಏಜೆನ್ಸಿ ಎಂದು ತಿಳಿದ್ದರೂ ಕೊಪ್ಪಳ ನಗರ ಆಶ್ರಮ ಮನೆಗಳ ನಿರ್ಮಾಣ ಕಾಮಗಾರಿ ಕಳಪೆಯಿಂದ ನಡೆಯುತ್ತಿದೆ.ಅಲ್ಲದೆ ಕರ್ನಾಟಕ ನೀರಾವರಿ ನಿಗಮದ ಕಾಮಗಾರಿಗಳನ್ನು ನಿರ್ಮಿತಿಕೇಂದ್ರಕ್ಕೆ ವಹಿಸಿರುವದು ದುರಾದೃಷಕರ.
ಅಲ್ಲದೆ ಜಿಲ್ಲೆಯ ಬಹಳಷ್ಟು ಕಾಮಗಾರಿಗಳನ್ನು ನಿರ್ಮಿತಿಕೇಂದ್ರಕ್ಕೆ ವಹಿಸಿರುವದು ಶೋಚನೀಯ.
ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಗುತ್ತಿಗೆದಾರರಿಗೆ ಸರ್ಕಾರದ ಸುತ್ತೋಲೆಯನ್ನು ಪ್ರಕಾರ ಶೇ. 24.1 ಕಾಮಗಾರಿಯನ್ನು ನೀಡಬೇಕು ಆದರೆ ಸರ್ಕಾರದ ಪಾರದರ್ಶಕ ನಿಯಮ ಉಲ್ಲಂಘನೆ ಮಾಡಿ ಕಾಮಗಾರಿ ಗುಚ್ಚಗಳನ್ನು ತಯಾರಿಸಿಕೊಂಡು ನಿರ್ಮಿತಿ ಕೇಂದ್ರ ಮತ್ತು ಕೆ ಆರ್ ಡಿ ಎಲ್ ಏಜೆನ್ಸಿಗೆ ಅನುಷ್ಠಾನಗೊಳಿಸಲು ನೀಡಿರುವದು ಏನು ತೋರಿಸುತ್ತದೆ?
ಸಚಿವರಿಗೆ ಮತ್ತು ಶಾಸಕರಿಗೆ ಕೇವಲ ಸಮಾರಂಭಗಳಲ್ಲಿ ಹೇಳಿಕೆ ನೀಡದೆ ನಾನು 8 ತಿಂಗಳಿನಿಂದ ಕೊಟ್ಟೀರುವ ದೂರನ್ವಯ ಕ್ರಮ ಜರುಗಿಸಿ ಭ್ರಷ್ಟಅಧಿಕಾರಿಗಳನ್ನು ಜೈಲಿಗೆ ಕಳುಹಿಸುವ ಇಚ್ಛಾಶಕ್ತಿ ತೋರಿಸಲಿ ಎಂದರು.
ಜಿಲ್ಲಾಢಳಿತ ಮತ್ತು ಸರ್ಕಾರ ಯಾವುದೇ ಕ್ರಮ ಜರುಗಿಸದೇ ಇರುವದರಿಂದ ನಾನು ಈಗಾಗಲೇ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಲಾಗಿದೆ. ಕೆಲವೇ ದಿನಗಳಲ್ಲಿ ಜನರ ದುಡ್ಡನ್ನು ಕೊಳ್ಳೆ ಹೊಡೆದಿರುವ ಅಧಿಕಾರಿ ಜೈಲು ಸೇರಿ ನಿರ್ಮಿತಿಕೇಂದ್ರ ನಿರ್ನಾಮವಾಗಲಿದೆ ಎಂದು ಹೇಳಿಕೆ ನೀಡಿದ್ದಾರೆ

Related posts