ಶಾಸಕರಿಂದ ಹಿರೇಬಗನಾಳ ಕೆರೆಗೆ ಬಾಗಿನ

ಕೆ ರಾಘವೇಂದ್ರ ಹಿಟ್ನಾಳರವರು ಇಂದು ಹಿರೇಬಗನಾಳ ಗ್ರಾಮದಲ್ಲಿ ಸರಕಾರದ ಯೋಜನೆಯಾಗಿರುವ ಕೆರೆ ತುಂಬಿಸುವ ಯೋಜನೆಯಡಿ ತುಂಬಿ‌ ಹಿರೇಬಗನಾಳ ಕೆರೆಗೆ ಬಾಗಿನ ಅರ್ಪಿಸಿದರು., ನಂತರ ಮಾತನಾಡಿದ ಶಾಸಕರು ಕೊಪ್ಪಳ ಕ್ಷೇತ್ರದಲ್ಲಿ ನೀರಾವರಿಗಾಗಿ ಸರಕಾರವು ಸಾಕಷ್ಟು ಅನುದಾನ

ಬಿಡುಗಡೆಗೊಳಿಸಿದ್ದು ಪರಿಣಾಮವಾಗಿ ಈ ಭಾಗದಲ್ಲಿ ಸಾಕಷ್ಟು ಕೆರೆ ಹಳ್ಳಗಳು ತುಂಬಿ ಸತತ ಬರಗಾಲದಿಂದ ತತ್ತರಿಸಿದ್ದ ರೈತವರ್ಗ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿ ಪಂ ಅಧ್ಯಕ್ಷರು ಕೆ.ರಾಜಶೇಖರ ಹಿಟ್ನಾಳ, ಗೊಂಡಬಾಳ ಜಿ ಪಂ ಸದಸ್ಯರು ಗೂಳಪ್ಪ ಹಲಗೇರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಜುಲ್ಲು ಖಾದ್ರಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸುರೇಶ ಭೂಮರೆಡ್ಡಿ,ನಗರಸಭೆ ಸದಸ್ಯರು ಅಮ್ಜದ್ ಪಟೇಲ್,ಗ್ರಾಮ ಪಂಚಾಯತ್ ಅಧ್ಯಕ್ಷರು ಹೇಮಣ್ಣ ದೇವರಮನಿ,ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ಜಿಲ್ಲಾಧ್ಯಕ್ಷರು ಸೋಮಣ್ಣ ಬಾರಕೇರ, ಹಿರಿಯ ಕಾಂಗ್ರೆಸ್ ಮುಖಂಡರು ಶಿವಾನಂದ ಹೊದ್ಲೂರ,ಎಪಿಎಂಸಿ ಮಾಜಿ ಸದಸ್ಯರು ಜಗದೀಶ ಕರ್ಕಿಹಳ್ಳಿ,ಗ್ರಾಮ ಪಂಚಾಯತ್ ಸದಸ್ಯರು,ಪಿಡಿಓ,ಮತ್ತು ಗ್ರಾಮದ ಹಿರಿಯ ಮುಖಂಡರು ಉಪಸ್ಥಿತರಿದ್ದರು.

Please follow and like us:
error