fbpx

ಶಾಸಕರಿಂದ ಹಿಂಗಾರು ಬಿತ್ತನೆ ನೀಜ ವಿತರಣೆ


ಕೊಪ್ಪಳ:೩೦, ಅಳವಂಡಿ ಗ್ರಾಮದಲ್ಲಿ ೨೦೧೯-೨೦ನೇ ಸಾಲಿನ ಹಿಂಗಾರು ಬಿತ್ತನೆ ಬೀಜ ವಿತರಣೆ ಮಾಡಿ ಬಳಿಕ ಮಾತನಾಡಿದ ಶಾಸಕ .ಕೆ.ರಾಘವೇಂದ್ರ ಹಿಟ್ನಾಳರವರು, ಪ್ರತಿಯೊಬ್ಬ ರೈತನು ತಮ್ಮ ಬೆಳೆಯ ವಿಮೆಯನ್ನು ಕಡ್ಡಾಯವಾಗಿ ಮಾಡಿಸ ಬೇಕು ಪ್ರಕೃತಿ ವಿಕೋಪದಿಂದ ಉಂಟಾಗುವ ಹಾನಿಗಳಿಂದ ಬೆಳೆಗಳು ನಾಶವಾದಾಗ ರೈತರು ತೀರ್ವ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಾರೆ. ಅದಕ್ಕಾಗಿ ಚಾಚುತಪ್ಪದೆ ಬೆಳೆ ವಿಮೆ ಮಾಡಿಸಬೇಕು. ೧ ಲಕ್ಷ ೩೫ ಸಾವಿರ ಏಕರೆ ಭೂಮಿಗೆ ಕೃಷಿ ಇಲಾಖೆಯಿಂದ ಬೀಜ ಗೊಬ್ಬರದ ಸವಲತ್ತು ಕಲ್ಪಿಸಲಾಗುತ್ತಿದ್ದು, ರೈತರು ತಮ್ಮ ಭೂಮಿಯ ಮಣ್ಣಿನ ಗುಣಮಟ್ಟವನ್ನು ಪರೀಕ್ಷಿಸಿ ಫಲವತ್ತತೆ ಪಡೆಯಲು ಯಾವ ಬೆಳೆ ಬೆಳೆಯಲು ಸೂಕ್ತವೆಂದು ನಿರ್ದರಿಸಬೇಕು. ಕಡಿಮೆ ಖರ್ಚಿನಲ್ಲಿ ಲಾಭದಾಯಕ ಬೆಳೆಗನ್ನು ಬೆಳೆದು ಆರ್ಥಿಕವಾಗಿ ಸದೃಡರಾಗಬೇಕು. ಈ ಭಾಗದ ನೀರಾವರಿ ಸೌಲಭ್ಯಕ್ಕೆ ಹೆಚ್ಚು ಒತ್ತುಕೊಟ್ಟು ಸಿಂಟಾಲೂರು ಏತನೀರಾವರಿ ಯೋಜನೆಯಿಂದ ರೂ.೧೯ ಕೋಟಿ ವೆಚ್ಚದಲ್ಲಿ ೧೩ ಏಕರೆಗಳನ್ನು ತುಂಬಿಸಿ ಅಂತರ್ಜಲಮಟ್ಟ ಹೆಚ್ಚಿಸಲಾಗುವುದು. ಎನ್.ಆರ್.ಜಿ. ಯೋಜನೆ ಅಡಿಯಲ್ಲಿ ತೋಟಗಾರಿಕೆ ಬೆಳೆಗಳಿಗೆ ಬೀಜವನ್ನು ಸಬ್ಸಿಡಿ ರೂಪದಲ್ಲಿ ವಿತರಿಸಲಾಗುತ್ತಿದ್ದು, ಸರ್ಕಾರವೂ ಕೃಷಿ ಯಂತ್ರದಾರೆ ಮೂಲಕ ಆಧುನಿಕ ಕೃಷಿ ಉಪಕರಣಗಳನ್ನು ನೀಡುತ್ತಿದ್ದು, ಪ್ರತಿಯೊಬ್ಬ ರೈತನು ಇದರ ಸದ್ಬಳಕೆ ಮಾಡಿಕೊಳ್ಳಬೇಕೆ ಎಂದು ರೈತರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ತಾ.ಪಂ..ಅಧ್ಯಕ್ಷ ಬಾಲಚಂದ್ರನ್, ಕೆ.ಎಮ್.ಎಫ್.ಮಾಜಿ ಅಧ್ಯಕ್ಷ ಯಂಕನಗೌಡ್ರು ಹಿರೇಗೌಡ್ರು, ಎ.ಪಿ.ಎಮ್.ಸಿ.ಅಧ್ಯಕ್ಷ ಜಡಿಯಪ್ಪ ಬಂಗಾಳಿ, ತಾ.ಪಂ.ಸದಸ್ಯರುಗಳಾದ ಸಿದ್ದಲಿಂಗಸ್ವಾಮಿ ಇನಾಮದಾರ, ಶರಣಪ್ಪಗೌಡ್ರು, ಮುಖಂಡರುಗಳಾದ ಭರಮಪ್ಪ ನಗರ, ಹನುಮರೆಡ್ಡಿ ಹಂಗನಕಟ್ಟಿ, ಚೌಡಪ್ಪ ಜಂತ್ಲಿ, ಕೇಶವ ರೆಡ್ಡಿ, ಬಸವರೆಡ್ಡೆಪ್ಪ ಹಳ್ಳಿಕೇರಿ, ಯಲ್ಲಪ್ಪ ಜೀರ, ನಗರಸಭೆ ಸದಸ್ಯ ಅಕ್ಬರಪಾಷಾ ಪಲ್ಟನ, ವಕ್ತಾರ ಕುರಗೋಡ ರವಿ ಯಾದವ್, ನಾಗರಾಜ ಪಟವಾರಿ, ಕೃಷಿ ಅಧಿಕಾರಿ ಯಂಕಪ್ಪ ಹತ್ತಾರ, ಗುರುಬಸವರಾಜ ಹಳ್ಳಿಕೇರಿ ಕಾರ್ಯಕ್ರಮ ನಿರೂಪಿಸಿ ಕೊನೆಗೆ ವಂದಿಸಿದರು.

Please follow and like us:
error
error: Content is protected !!