You are here
Home > Koppal News > ಶಾಸಕರಿಂದ ರೂ. ೧ ಕೋಟಿ ಕಾಮಗಾರಿಗೆ ಭೂಮಿ ಪೂಜೆ.

ಶಾಸಕರಿಂದ ರೂ. ೧ ಕೋಟಿ ಕಾಮಗಾರಿಗೆ ಭೂಮಿ ಪೂಜೆ.

cotton+pasha_koppal_mla
ಕೊಪ್ಪಳ:ನ-೧೧, ನಗರದ ವಿವಿಧ ವಾರ್ಡುಗಳಲ್ಲಿ ಹೆಚ್.ಕೆ.ಆರ್.ಡಿ.ಬಿ./ಎಸ್.ಎಫ್.ಸಿ. ೧೪ನೇ ಹಣಕಾಸು ಯೋಜನೆಯಡಿಯಲ್ಲಿ ಅಂದಾಜು ಮೊತ್ತ ರೂ. ೧ ಕೋಟಿಯ ಸಿ.ಸಿ.ರಸ್ತೆ, ಕುಡಿಯುವ ನೀರಿನ ಪೈಪಲೈನ್ ಕಾಮಗಾರಿ, ಚರಂಡಿ ಸ್ಲ್ಯಾಬ್ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಕೊಪ್ಪಳ ನಗರವು ತೀವ್ರಗತಿಯಲ್ಲಿ ಬೆಳೆಯುತ್ತಿದ್ದು ಇದರ ಅನುಗುಣವಾಗಿ ನಗರಕ್ಕೆ ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ಒದಗಿಸಿ ನಗರವನ್ನು ಸ್ವಚ್ಛ ಹಾಗೂ ಸುಂದರವಾಗಿ ಮಾಡಬೇಕಾಗಿದೆ. ಕೊಪ್ಪಳ ನಗರದ ಎಲ್ಲಾ ಮುಖ್ಯ ರಸ್ತೆಗಳಿಗೆ ಸಿ.ಸಿ.ರಸ್ತೆ ನಿರ್ಮಾಣಕ್ಕೆ ಸುಮಾರು ೩೦ ಕೋಟಿ ಅನುದಾನ ಮಂಜೂರು ಮಾಡಿಸಲಾಗಿದ್ದು ಶೀಘ್ರವೇ ಈ ಕಾಮಗಾರಿಗಳು ಪ್ರಾರಂಭಗೊಳ್ಳಲಿವೆ. ನಗರದ ಎಲ್ಲಾ ವಾರ್ಡುಗಳಿಗೆ ನಗರಸಭೆಯ ವತಿಯಿಂದ ಹೆಚ್ಚಿನ ಅನುದಾನ ನೀಡಿ ವಾರ್ಡುಗಳ ಸರ್ವಾಂಗೀಣ ಅಭಿವೃದ್ಧಿ ಕೈಗೊಳ್ಳಲಾಗುವುದು. ನಗರಕ್ಕೆ ಕುಡಿಯುವ ನೀರಿನ ಸರಬರಾಜಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದ್ದು ಬರುವ ದಿನಗಳಲ್ಲಿ ದಿನದ ೨೪ ತಾಸು ನೀರು ಸರಬರಾಜು ಮಾಡುವ ಕಾಮಗಾರಿ ಪ್ರಾರಂಭಗೊಂಡು ಜನರ ಕುಡಿಯುವ ನೀರಿನ ಆತಂಕವನ್ನು ದೂರವಾಗುವದೆಂದು ಹೇಳಿದರು.

ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷರಾದ ಮಹೇಂದ್ರ ಚೋಪ್ರಾ, ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಜುಲ್ಲು ಖಾದ್ರಿ, ಜಿ.ಪಂ.ಸದಸ್ಯ ಕೆ.ರಾಜಶೇಖರ ಹಿಟ್ನಾಳ, ಅಮ್ಜದ್ ಪಟೆಲ್, ಮುತ್ತುರಾಜ ಕುಷ್ಟಗಿ, ಅಪ್ಪಣ್ಣ ಪದಕಿ, ಮುರುಡಿ ಮಲ್ಲಪ್ಪ, ಶ್ರೀಮತಿ ರೇಣುಕಾ ಪೂಜಾರ, ಶರಣಪ್ಪ ಸಜ್ಜನ್, ಕಾಟನ್ ಪಾಷಾ, ಇಬ್ರಾಹಿಂ ಅಡ್ಡೆವಾಲೆ, ವೀರಣ್ಣ ಸಂಡೂರು, ಮಾನ್ವಿ ಪಾಷಾ, ಮಂಜುನಾಥ ಗಾಳಿ, ವೀರಣ್ಣ ಟಾಂಗಾ, ಅಜ್ಜಪ್ಪ ಸ್ವಾಮಿ, ವಾಹಿದ್ ಸೋಂಪೂರ, ನಗರಸಭೆಯ ಅಯುಕ್ತರು, ಅಭಿಯಂತರರು, ಗುತ್ತಿಗೆದಾರರು, ವಕ್ತಾರ ಅಕ್ಬರಪಾಷಾ ಪಲ್ಟನ್ ಉಪಸ್ಥಿತರಿದ್ದರು.

Leave a Reply

Top