ಶಾಸಕರಿಂದ ಅಂಗನವಾಡಿ ಕಟ್ಟಡ ಉದ್ಘಾಟನೆ


ಕೊಪ್ಪಳ 09:- ನಗರದ 3ನೇ ವಾರ್ಡಿನ ಹಮಾಲರ ಕಾಲೋನಿ ಮತ್ತು ನಿರ್ಮಿತಿ ಕೇಂದ್ರದಲ್ಲಿ ಹೆಚ್. ಕೆ. ಡಿ. ಆರ್. ಬಿ ಯೋಜನೆಡಿಯಲ್ಲಿ ರೂ 26 ಲಕ್ಷದ ನೂತನ ಅಂಗನವಾಡಿ ಕಟ್ಟಡ ಉದ್ಘಾಟಿಸಿದ ಬಳಿಕ ಮಾತನಾಡಿದ ಶಾಸಕ ಕೆ. ರಾಘವೇಂದ್ರ ಹಿಟ್ನಾಳರವರು ಶಿಶುಗಳ ಸಮಗ್ರ ಅಭಿವೃದ್ಧಿಗೆ ಅಂಗನವಾಡಿಯ ಶಿಕ್ಷಣವು ಮಹತ್ವದಾಗಿದ್ದು, ಇಲ್ಲಿಯೇ ಮಕ್ಕಳಿ ಶಿಕ್ಷಣಕೆ ಅಂಗನವಾಡಿಯಿಂದಲಿ ಬುನಾದಿಯಾಗಿದ್ದು ಶಿಸ್ತು, ಸಂಯಮ, ಅಕ್ಷರ ಕಲಿಕೆಗೆ ಮೊದಲ ಪಾಠಶಾಲೆ ಯಾಗಿವೆ ಅಂಗನವಾಡಿ ಶಿಕ್ಷಕಿಯರು ಚಾಚೂ ತಪ್ಪದೇ ಹಾಜರಾತಿ ನೀಡಿ ಮಕ್ಕಳ ಭವಿಷ್ಯ ರೂಪಿಸಲು ಪ್ರಮಾಣಿಕೆ ಹಾಗೂ ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು ಬಡ ಮಕ್ಕಳಿಗೆ ಸರಕಾರವು ಕೋಡುವ ಪೌಷ್ಠಿಕ ಆಹಾರವನ್ನು ಮಕ್ಕಳಿಗೆ ಸರಿಯಾದ ಸಮಯದಲ್ಲಿ ನೀಡಿ ಅವರ ಶಿಕ್ಷಣ ಕಲಿಕೆ ಜೊತೆಗೆ ಮಕ್ಕಳ ಆರೋಗ್ಯದ ಬಗ್ಗೆ ಪೂರ್ವ ನಿಗಾವಹಿಸುವುದು ಪ್ರತಿಯೊಬ್ಬ ಅಂಗನವಾಡಿ ಶಿಕ್ಷಕಿಯರ ಜೊತೆಗೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳ ಅದಮ್ಯ ಕರ್ತವೆಂದು ಹೇಳಿದ್ದರು. ಹಾಗೂ ಇದೇ ಸಂದರ್ಭದಲ್ಲಿ ಕರ್ನಾಟಕ ಕೋಳಚೆ ಮಂಡಿಳಿಯ ವತಿಂಯಿಂದ ರೂ 3-30 ಲಕ್ಷದ ವೆಚ್ಚದಲ್ಲಿ ನಿರ್ಮಿಸುತ್ತಿರುವ ಮನೆಗಳನ್ನು ಪರಿಶಿಲಿಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರು & ಮಾಜಿ ಅಧ್ಯಕ್ಷರಾದ ಎಸ್.ಬಿ.ನಾಗರಳ್ಳಿ. ರಾಜಶೇಖರ ಹಿಟ್ನಾಳ, ಮಾಜಿ ಕುಡಾ ಅಧ್ಯಕ್ಷ ಜುಲ್ಲು ಖಾದ್ರಿ, ಕೊಪ್ಪಳ ನಗರ ಸಭೆಯ ಸದಸ್ಯರಾದ ಅಮ್ಜದ್ ಪಟೇಲ್, ಬಸಯ್ಯ ಸ್ವಾಮಿ, ಅಕ್ಬರ ಪಾಷ ಪಲ್ಟನ್ ಭಾಗ್ಯನಗರ ಪಟ್ಟಣ ಪಂಚಾಯತ್ ಉಪಾಧ್ಯಕ್ಷರಾದ ಯಶೋದಾ ಶಿವಶಂಕರ ಮುರಡಿ, ಸದಸ್ಯರಾದ ಹುಲಿಗೆಮ್ಮ ತಟ್ಟಿ, ಸವಿತಾ ಅಶೋಕ ಗೋರ್ಲಂಟಿ, ಮುಖಂಡರುಗಳಾದ ಪ್ರಸನ್ನಾ ಗಡಾದ, ಗವಿಸಿದ್ದಪ್ಪ ಪಾಟೀಲ್, ಮಂಜುನಾಥ ಗಿಣಿಗೇರಿ, ಕಿಶೋರಿ ಭೂದನೂರ ಮಠ, ಹಾಗು ಇನ್ನು ಅನೇಕರು ಉಪಸ್ಥಿತರಿದ್ದರು

Please follow and like us:
error