ಶಾಶ್ವತ ಕಾಮಗಾರಿ ಕಾಂಗ್ರೆಸ್ ಸರಕಾರದಿಂದ ಮಾತ್ರ ಸಾಧ್ಯ – ಶಾಸಕ ಕೆ.ರಾಘವೇಂದ್ರ ಹಿಟ್ನಾಳ

, ಹಾಲವರ್ತಿ ಗ್ರಾಮದಲ್ಲಿ ಹೆಚ್.ಕೆ.ಆರ್.ಡಿ.ಬಿ. ಹೋಜನೆಯಡಿಯಲ್ಲಿ ರೂ.೧ ಕೋಟಿ ವೆಚ್ಚದ ಪ್ರೌಢ ಶಾಲಾಕಟ್ಟಡದ ಕಾಮಗಾರಿ ಹಾಗೂ ಲಿಂಗಾಪೂರ ಗ್ರಾಮದಲ್ಲಿ ರೂ.೧೦ ಲಕ್ಷದ ಪರಿಶಿಷ್ಟ ಜಾತಿಯ ಸಮುದಾಯ ಭವನಕ್ಕೆ ಭೂಮಿ ಪೂಜೆ ನೆರವೇರಿಸಿ ಬಳಿಕ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು ಜನತೆಗೆ ಅತ್ಯವಶ್ಯಕವಿರುವ ಶಾಶ್ವತ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು ಕಾಂಗ್ರೆಸ್ ಸರಕಾರದ ಧ್ಯೇಯವಾಗಿದ್ದು, ಜನಪರ ಯೋಜನೆಗಳನ್ನು ಎಲ್ಲಾ ವರ್ಗದ ಜನರ ಹಿತದೃಷ್ಟಿಯಿಂದ ಯೋಜನೆಗಳನ್ನು ಸಿದ್ದಗೊಳಿಸಿ ಜನರಿಗೆ ತಲುಪಿಸುವುದು ಕಾಂಗ್ರೆಸ್ ಕಾರ್ಯವಾಗಿದೆ. ರಾಜ್ಯದ ಬಿಜೆಪಿ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜ್ಯದ ಜನತೆಗೆ ಕೊಡಮಾಡಿರುವ ಅನೇಕ ಅಭಿವೃದ್ಧಿಪರ ಕಾರ್ಯಗಳನ್ನು ಸಹಿಸದೆ ಸಮಾಜದಲ್ಲಿ ಗೊಂದಲ ಸೃಷ್ಟಿಮಾಡಿ ವಿನಾಃ ಕಾರಣ ಆರೋಪಗಳನ್ನು ಮಾಡುತ್ತಿದ್ದಾರೆ. ನಾಲಿಗೆಯ ಹಿಡಿತವಿಲ್ಲದೆ ಬುದ್ಧಿ ಭ್ರಮಣೆಯಾದ ಬಿಜೆಪಿ ನಾಯಕರಿಗೆ ಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ಇವರ ಆರೋಪಗಳಿಗೆ ತಕ್ಕ ಉತ್ತರ ನೀಡಿ ಕಾಂಗ್ರೆಸ್ ಪಕ್ಷವನ್ನು ಜಯಭೇರಿಗೊಳಿಸಿ ಮತ್ತೆ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯುವಂತೆ ರಾಜ್ಯದ ಮತದಾರ ಪ್ರಭು ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವದಿಸುವುದು ನಿಶ್ಚಿತವೆಂದು ಹೇಳಿದರು.

ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ಗೂಳಪ್ಪ ಹಲಗೇರಿ, ತಾ.ಪಂ.ಅಧ್ಯಕ್ಷ ಬಾಲಚಂದ್ರನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಭೂಮರಡ್ಡಿ, ಗ್ರಾ.ಪಂ. ಅಧ್ಯಕ್ಷ ಕೆಂಚಮ್ಮ ಫಕೀರಪ್ಪ, ಎ.ಪಿ.ಎಂ.ಸಿ. ಸದಸ್ಯ ನಾಗರಾಜ ಚಳ್ಳೊಳ್ಳಿ, ತಾ.ಪಂ.ಸದಸ್ಯ ಯಂಕಪ್ಪ ಹೊಸಳ್ಳಿ, ಮುಖಂಡರುಗಳಾದ ಕಾಮಣ್ಣ ಕಂಬಳಿ, ಪಂಪಣ್ಣ ಪೂಜಾರ, ಹನುಮಂತಪ್ಪ ಕಿಡದಾಳ, ಜಡಿಸ್ವಾಮಿ ಇಳಿಗೇರ, ಮುದಿಯಪ್ಪ ಆದೋನಿ, ಆನಂದ ಹಾಲವರ್ತಿ, ಭರಮಪ್ಪ ಗೊರವರ, ಚಂದ್ರಕಾಂತ ನಾಯಕ, ವೆಂಕೋಬರಡ್ಡಿ, ಗವಿಸಿದ್ದರಡ್ಡಿ, ಸಿಂದೋಗೆಪ್ಪ, ರಾಮನಗೌಡ, ಮಹೇಂದ್ರ ದುರುಗಪ್ಪ, ಗ್ಯಾನಪ್ಪ ಹಾಗೂ ವಕ್ತಾರ ಅಕ್ಬರ್ ಪಾಷಾ ಪಲ್ಟನ್ ಉಪಸ್ಥಿತರಿದ್ದರು.

Please follow and like us:
error

Related posts