ಶಾಲೆಯ ಬಯಲಲ್ಲೇ ಪಾಠ

ಹಾಸನ: ಸರ್ಕಾರಿ ಶಾಲೆಗಳನ್ನು ಉಳಿಸಬೇಕು, ಕನ್ನಡವನ್ನು ಉಳಿಸಬೇಕು ಅಂತಾ.ಆದ್ರೆ ಅದೆಲ್ಲಾ ಕೇವಲ ಭಾಷಣಕ್ಕೆ ಮಾತ್ರ ಸೀಮಿತ ಅನ್ನೋದನ್ನು ಸಾಬೀತುಪಡಿಸಿದೆ, ಹಾಸನ ಜಿಲ್ಲೆಯ ಬೇಲೂರಿನ ಮಲದೇವಿಹಳ್ಳಿ ಸರ್ಕಾರಿ ಶಾಲೆ ದು:ಸ್ಥಿತಿ. ವಿದ್ಯಾರ್ಥಿಗಳು ಕಣ್ಣೀರಿಟ್ಟು ನಮಗೊಂದು ಶಾಲಾ ಕಟ್ಟಡ ಕಟ್ಟಿಕೊಡಿ ಎಂದು ಗೋಗರೆಯುತ್ತಿದ್ದಾರೆ.  ಕಳೆದ ವರ್ಷ ಮೇನಲ್ಲಿ ಬಿರುಗಾಳಿ ಮಳೆಗೆ ಶಾಲೆಯ 2 ಕೊಠಡಿಗಳ ಮೇಲ್ಛಾವಣಿ ಹಾರಿ ಹೋಗಿದೆ. ಅಂದಿನಿಂದಲೂ ಬಯಲಲ್ಲೇ ಪಾಠ. ಇಂಥಹ ಪರಿಸ್ಥಿತಿಗೆ ಭಯಗೊಂಡ  ಮಕ್ಕಳು ಕೂಡ ಬೇರೆಡೆಗೆ ಹೋಗುತ್ತಿದ್ದು 60 ಇದ್ದ ಮಕ್ಕಳ ಸಂಖ್ಯೆ ಈಗ 26ಕ್ಕೆ ಇಳಿದಿದೆ ಅಂತಾರೆ ಶಿಕ್ಷಕರು. ಮಾತೆತ್ತಿದ್ರೆ ಸಮಾಜೋದ್ದಾರದ ಮಾತಾಡೋ ಜನಪ್ರತಿನಿಧಿಗಳೇ ಮಕ್ಕಳ ಕಣ್ಣೀರಿಗೂ ನಿಮ್ಮ ಹೃದಯ ಕರಗೋದಿಲ್ವೇ, ಅಷ್ಟಕ್ಕೂ ಇವರು ಕೇಳ್ತಿರೋದು ಅಕ್ಷರಭ್ಯಾಸಕ್ಕೆ ಒಂದು ಸೂರನ್ನ ಅದನ್ನೂ ಒದಗಿಸಿಕೊಡೋ ತಾಕತ್ತು ನಿಮಗಿಲ್ವಾ. ಮಾಜಿ ಪ್ರಧಾನಿಗಳ ತವರು ಜಿಲ್ಲೆ.

Leave a Reply