ಶಾಲಾ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿಯನ್ನು ಕಡ್ಡಾಯಗೊಳಿಸಿ – ಕರಾಟೆ ಮೌನೇಶ

ಕೊಪ್ಪಳ : ಡಿ.09 ರಂದು ಕೊಪ್ಪಳ ರಸ್ತೆಯ ಮೂಲಕ ಗದಗದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹೊರಟಂತಹ ಪಶು ಸಂಗೋಪನಾ ಮತ್ತು ಮೀನುಗಾರಿಕೆ ಸಚಿವರಾದ ವೆಂಕಟರಾವ್ ನಾಡಗೌಡರ್‍ವರಿಗೆ ನಗರದ ಎಸ್‍ಎಫ್‍ಎಸ್ ಶಾಲೆಯ ಹತ್ತಿರ ಕೊಪ್ಪಳ ಜಿಲ್ಲಾ ಹಾಗೂ ರಾಜ್ಯ ಕರಾಟೆ ಶಿಕ್ಷಕರ ಸಂಘದ ವತಿಯಿಂದ ಸ್ವಾಗತಿಸಲಾಯಿತು.
ನಂತರ ಕರ್ನಾಟಕ ರಾಜ್ಯದ ಎಲ್ಲಾ ಸರಕಾರಿ ಹಾಗೂ ಖಾಸಗಿ ಶಾಲೆಗಳ ವಿದ್ಯಾರ್ಥಿನಿಯರಿಗೆ ಆತ್ಮ ರಕ್ಷಣಾ ಕಲೆಯಾದ ಕರಾಟೆ ತರಬೇತಿಯನ್ನು ಕಡ್ಡಾಯಗೊಳಿಸಲು ಮನವಿ ಸಲ್ಲಿಸಿದ ರಾಜ್ಯ ಕರಾಟೆ ಶಿಕ್ಷಕರ ಸಂಘದ ಕ್ರೀಡಾ ಕಾರ್ಯದರ್ಶಿ ಮೌನೇಶ ಎಸ್ ವಡ್ಡಟ್ಟಿ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಆರ್‍ಎಂಎಸ್‍ಎ ಯೋಜನೆ ಅಡಿಯಲ್ಲಿ ಸರ್ಕಾರಿ ಪ್ರೌಢ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿಯರಿಗೆ ವರ್ಷದಲ್ಲಿ ಮೂರು ತಿಂಗಳು ಕರಾಟೆ ತರಬೇತಿ ನೀಡುತ್ತಿದ್ದರು. ಈ ವರ್ಷ ಡಿಸೆಂಬರ ಬಂದರೂ ಕೂಡಾ ತರಬೇತಿ ನೀಡಲು ಆದೇಶ ಬಂದಿರುವುದಿಲ್ಲ ಆದ ಕಾರಣ ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ಶಾಲಾ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯಗಳು ಹೆಚ್ಚುತ್ತಿದ್ದು ಹೆಣ್ಣು ಮಕ್ಕಳು ಮನೋಬಲ ಮತ್ತು ಆತ್ಮ ಸ್ಥೈರ್ಯವನ್ನು ಹೆಚ್ಚಿಸಲು ಆತ್ಮ ರಕ್ಷಣೆಯ ಕಲೆಯಾದ ಕರಾಟೆ ತರಬೇತಿಯನ್ನು ಕಡ್ಡಾಯಗೊಳಿಸಲು ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಶಾಲಾ ವಿದ್ಯಾರ್ಥಿಗಳಿಗೆ ಕರಾಟೆ ತರಬೇತಿಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕೆಂದು ಮನವಿ ಸಲ್ಲಿಸಿದರು.
ಮತ್ತು ರಾಜ್ಯದಲ್ಲಿ ಸಾವಿರಾರು ನಿರುದ್ಯೋಗ ಕರಾಟೆ ಶಿಕ್ಷಕರಿಗೆ ತಾತ್ಕಾಲಿಕ ಹುದ್ದೆಯನ್ನು ನೀಡಿದಂತಾಗುತ್ತದೆ ಮತ್ತು ವಿದ್ಯಾರ್ಥಿನಿಯರಿಗೆ ಕರಾಟೆ ಕಲೆ ಸದುಪಯೋಗವಾಗುತ್ತದೆ ಎಂದು ತಿಳಿಸಿ ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಕರಾಟೆ ಶಿಕ್ಷಕರ ಸಂಘದ ಕ್ರೀಡಾ ಕಾರ್ಯದರ್ಶಿ ಮತ್ತು ಕೊಪ್ಪಳ ಜಿಲ್ಲಾದ್ಯಕ್ಷ ಮೌನೇಶ ಎಸ್ ವಡ್ಡಟ್ಟಿ, ತರಬೇತಿದಾರರಾದ ವಿಠ್ಠಲ ಹೆಚ್, ಸೋಮಲಿಂಗ ಕವಲೂರು, ಮುಖಂಡರಾದ ವಿರೇಶ ಮಾಹಾಂತಯ್ಯನಮಠ, ಅಯೂಬ್ ಅಡ್ಡೇವಾಲೆ, ಮಂಜುನಾಥ ಹುರಕಡ್ಲಿ ಸೇರಿದಂತೆ ಇತರರು ಇದ್ದರು

Please follow and like us:
error