ಶರಣ ಮಾದಾರ ಚನ್ನಯ್ಯ ಜಯಂತಿ ಹಾಗೂ ವಚನ ಅಭ್ಯಾಸ ತರಬೇತಿ ಕಾರ್ಯಕ್ರಮದ ಉದ್ಘಾಟನೆ

ವಿಶ್ವಗುರು ಬಸವೇಶ್ವರ ಟ್ರಸ್ಟ್ (ರಿ) ವತಿಯಿಂದ ದಿ||೧೫-೧೨-೨೦೧೯ ರಂದು ಸಂಜೆ ೬-೦೦ ಗಂಟೆಗೆ ನಡೆಯುವ ೬೫ ನೇ ಅನುಭಾವ ಮಂಟಪ ಕಾರ್ಯಕ್ರಮದಲ್ಲಿ ಶರಣ ಮಾದಾರ ಚನ್ನಯ್ಯ ಜಯಂತಿ ಹಾಗೂ ವಚನ ಅಭ್ಯಾಸ ತರಬೇತಿ ಕಾರ್ಯಕ್ರಮದ ಉದ್ಘಾಟನೆ. ಸ್ಥಳ : ಗುರುಬಸವ ಮಹಾಮನೆ ಈ ಅ I ಗೋದಾಮು ಹತ್ತಿರ ಕಿನ್ನಾಳ ರಸ್ತೆ ಕೊಪ್ಪಳ.
ದಿ ಸೋಶಿಯಲ್ ಸೈನ್ಸ & ಲಾರ್ಡ ಬಸವೇಶ್ವರ್ ಪ್ರಬಂಧಕ್ಕೆ ಕೋಲಂಬಿಯಾ ಯುನಿವರ್ಸಿಟಿಯಿಂದ ಡಾಕ್ಟರೇಟ್ ಪಡೆದ ಪೂಜ್ಯಶ್ರೀ ಶರಣ ಡಾ|| ಮಹಾಂತದೇವರು (ತೋಂಟದಾರ್ಯ ಶಾಖಮಠ ನವದೆಹಲಿ) ಇವರಿಗೆ ಗೌರವ ಸನ್ಮಾನ ಹಾಗೂ ಅವರ ಅನುಭಾವದ ನುಡಿಗಳು . ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶರಣರಾದ ಗಾಳೆಪ್ಪ ಕಡೇಮನಿ ಅವರು ವಹಿಸಲಿದ್ದಾರೆ. ಅತಿಥಿಗಳಾಗಿ ಶರಣ ಹನುಮಂತಪ್ಪ ಮ್ಯಾಗಳಮನಿ (ಜಿಲ್ಲಾಧ್ಯಕ್ಷರು ಊಖಈಆಐಏ), ಶರಣ ಮಲ್ಲಿಕಾರ್ಜುನ ಪೂಜಾರ (ಸದಸ್ಯರು ಆರೋಗ್ಯ ರಕ್ಷಾ ಸಮಿತಿ ಮೆಡಿಕಲ್ ಕಾಲೇಜ್ ಕೊಪ್ಪಳ), ಶರಣ ದುರ್ಗಪ್ಪ ಮ್ಯಾಗಳಮನಿ ಭಾಗ್ಯನಗರ, ಶರಣ ನಾಗಲಿಂಗ ಮಾಳೆಕೊಪ್ಪ, ಶರಣ ಸಿದ್ದಪ್ಪ ತಂಬೂರಿ
ಶರಣ ನಾಗರಾಜ ಹುರಕಡ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸರ್ವರಿಗೂ ಸ್ವಾಗತ ಕೋರಿ ವಿಶ್ವಗುರು ಬಸವೇಶ್ವರ ಟ್ರಸ್ಟ್(ರಿ) ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದೆ.

Please follow and like us:
error