ಶಬರಿಮಲೆ ಮಹಿಳೆಯರ  ಪ್ರವೇಶ ವಿರೋಧಿಸುವುದು  ಸರಿಯಲ್ಲ – SFI,CITU

ಮಹಿಳೆಯರು ಶಬರಿಮಲೆ ದೇವಸ್ಥಾನವನ್ನು ವಿರೋಧಿಸುವುದು ಸರಿಯಲ್ಲ ಎಂದು SFI ಮತ್ತು CITU ಸಂಘಟನೆಗಳು ತಿಳಿಸಿವೆ. ವಿನಾಕಾರಣ ಗುಲ್ಲೆಬ್ಬಿಸುವ ಕೆಲಸಮಾಡಲಾಗುತ್ತಿದೆ. ಪ್ರವೇಶ ಬೇಡ ಎನ್ನುವವರು ಕಾನೂನು ವಿರೋಧಿಗಳು ಎಂದು CITU ರಾಜ್ಯಾಧ್ಯಕ್ಷ ಎಸ್. ವರಲಕ್ಷ್ಮಿ ಆರೋಪಿಸಿದರು.

ಶಬರಿಮಲೆ ದೇವಸ್ಥಾನಕ್ಕೆ ಎಲ್ಲ ವಯಸ್ಸಿನ ಮಹಿಳೆಯರಿಗೆ ಪ್ರವೇಶಕ್ಕೆ ಅವಕಾಶ ನೀಡಿರುವ ಸುಪ್ರಿಂ ಕೋರ್ಟಿನ ತೀರ್ಪನ್ನು ನಾವೆಲ್ಲ ಜಾರಿ ಮಾಡಿಬೇಕು.  ಶಬರಿಮಲೆ ದೇವಸ್ಥಾನದಲ್ಲಿ ಈ ಮುಂಚೆ ೧೦ರಿಂದ ೫೦ ವರ್ಷದ ವರೆಗಿನ ಮಹಿಳೆಯರಿಗೆ ದೇವಸ್ಥಾನ ಪ್ರವೇಶವನ್ನು ನಿಷಿದ್ಧಗೊಳಿಸಿತ್ತು. ಮುಟ್ಟಿನ ಸಮಯದಲ್ಲಿ ಮಹಿಳೆಯರು ಅಶುದ್ಧರಾಗಿರುತ್ತಾರೆ ಮತ್ತು ಇಂತಹ ಇತರ ನಂಬಿಕೆಗಳಿಂದಾಗಿ ಹೀಗೆ ಮಾಡಲಾಗಿತ್ತು. ದೈಹಿಕ ಕಾರಣಗಳ ಆಧಾರದಲ್ಲಿ ಮಹಿಳೆಯರು ತಮ್ಮ ಪೂಜಾ ಹಕ್ಕುಗಳನ್ನು ಚಲಾಯಿಸದಂತೆ ಮಿತಿ ಹಾಕುವುದು ಅಸಂವೈಧಾನಿಕ ಮತ್ತು ಮಹಿಳೆಯರನ್ನು ಹೊರಗಿಡುವುದು ಅವರ ಘನತೆಗೆ ವಿರುದ್ಧವಾದದ್ದು ಎಂದು ನ್ಯಾಯಾಲಯ ಹೇಳಿದೆ. ಸಾಂಪ್ರದಾಯಿಕ ಆಚರಣೆಗಳು ಮತ್ತು ಹಳೆಯ ಧಾರ್ಮಿಕ ನಂಬಿಕೆಗಳಿಗಾಗಿ ಭಾರತೀಯ ಸಂವಿಧಾನವನ್ನು ಬುಡಮೇಲು ಮಾಡಲು ಸಾಧ್ಯವಿಲ್ಲ, ಸಂವಿಧಾನದ ಅಡಿಯಲ್ಲಿ ಎಲ್ಲ ಕ್ರಿಯೆಗಳನ್ನು ಸ್ವಾತಂತ್ರ್ಯ ಮತ್ತು ಸಮಾನತೆಯ ಒರಗಲ್ಲಲ್ಲಿ ಪರೀಕ್ಷಿಸಬೇಕು ಎಂದೂ ಈ ತೀರ್ಪು ಹೇಳಿದೆ. ಹಾಗಾಗಿ ತೀರ್ಪನ್ನು ಜಾರಿ ಮಾಡಬೇಕು ಎಂದು ತಿಳಿಸಿದ್ದಾರೆ.RSS ನವರು ಕಾನೂನು ಮತ್ತು ಸಂವಿಧಾನಕ್ಕೆ ಗೌರವ ನೀಡುತ್ತಿಲ್ಲ. ಸುಪ್ರಿಂಕೋರ್ಟ್ ತೀರ್ಪನ್ನು ವಿರೋಧಿಸುವರು ದೇಶದ್ರೋಹಿಗಳು ಎಂದಿದ್ದಾರೆ. ಮುಂದುವರೆದ ಭಾರತದ ಸಂವಿಧಾನದ ೨೫ನೇ ವಿಧಿಯ ಅಡಿಯಲ್ಲಿ ಮಹಿಳೆಯರಿಗೂ ಒಂದು ಸಾರ್ವಜನಿಕ ಸ್ಥಳದಲ್ಲಿ ಸಮಾನ ಪೂಜಾ ಹಕ್ಕು ಇದ್ದು, ಶಬರಿಮಲೆ ದೇವಸ್ಥಾನದ ಪ್ರವೇಶ ನಿಯಮಗಳು ಈ ಹಕ್ಕಿನ ಒಂದು ಸ್ಪಷ್ಟ ಉಲ್ಲಂಘನೆ ಎಂದು ಸುಪ್ರಿಂ ಕೋರ್ಟ್ ಸರಿಯಾಗಿಯೇ ಹೇಳಿದೆ ಎಂದು SFI ರಾಜ್ಯ ಕಾರ್ಯದರ್ಶಿ ಗುರುರಾಜ್ ದೇಸಾಯಿ ತಿಳಿಸಿದ್ದಾರೆ.ಮಹಿಳೆಯರ ಸಮಾನ ಹಕ್ಕುಗಳನ್ನು ನಿರಾಕರಿಸಲು ಧರ್ಮವನ್ನು ಒಂದು ಕತ್ತಿಯಾಗಿ ಬಳಸಲು ಸಾಧ್ಯವಿಲ್ಲ,  ಎಲ್ಲ ಪೂಜಾಸ್ಥಳಗಳಲ್ಲಿ ಧಾರ್ಮಿಕ ಆಚರಣೆಗಳಿಗೆ ಮಹಿಳೆಯರಿಗೆ ಸಮಾನ ಹಕ್ಕುಗಳಿರಬೇಕು ಎಂದು ಪ್ರಚಾರಾಂದೋಲನ ನಡೆಸಿಕೊಂಡು ಬಂದಿದೆ. ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ನಿರಾಕರಿಸಲು ಮತ್ತು ಅವರನ್ನು ಅಡಿಯಾಳುಗಳಾಗಿ ಮಾಡಲು ಸಂಪ್ರದಾಯ, ಪರಂಪರೆಗಳ ಬಳಕೆ ಮುಂದುವರೆದಿದೆ CITU ಜಿಲ್ಲಾಧ್ಯಕ್ಷ ನಿರುಪಾದಿ ಬೆಣಕಲ್ ಖಂಡಿಸಿದ್ದಾರೆ. SFI ಜಿಲ್ಲಾಧ್ಯಕ್ಷ ಅಮರೇಶ ಕಡಗದ್,  ಖಾಸಿಂ ಸರ್ಧಾರ್, ಲಕ್ಷ್ಮಿದೇವಿ, ಹುಲಿಗೆಮ್ಮ, ದುರಗಮ್ಮ ಇವರ ಹೇಳಿಕೆಯನ್ನು ಬೆಂಬಲಿಸಿದ್ದಾರೆ.

Please follow and like us:
error