ಶಕ್ತಿ ಯೋಜನೆ ಮೂಲಕ ಕಾಂಗ್ರೆಸ್ ಬಲವರ್ಧನೆ : ರಾಜಶೇಖರ ಹಿಟ್ನಾಳ

ಕೊಪ್ಪಳ, ನ. 27: ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ದೇಶದಾದ್ಯಂತ ನಡೆಯುತ್ತಿರುವ ಶಕ್ತಿ ಪ್ರೊಜೆಕ್ಟ್ ಮೂಲಕ ದೇಶದ ಕಾರ್ಯಕರ್ತರನ್ನು ಕಾಂಗ್ರೆಸ್ ಜೊತೆಗೆ ಸೇರಿಸುವ ಮೂಲಕ ಕಾಂಗ್ರೆಸ್ ಬಲವರ್ಧನೆ ಮಾಡಬೇಕು ಎಂದು ಜಿ. ಪಂ. ಮಾಜಿ ಅಧ್ಯಕ್ಷ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ರಾಜಶೇಖರ ಹಿಟ್ನಾಳ ಅವರು ಹೇಳಿದರು.
ನಗರದ ಅವರ ಗೃಹ ಕಛೇರಿಯಲ್ಲಿ ಸರಳ ಕಾರ್ಯಕ್ರಮದಲ್ಲಿ, ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕ ತಯಾರಿಸಿದ ಕಾಂಗ್ರೆಸ್ ಶಕ್ತಿ ಯೋಜನೆಯ ಪ್ರಚಾರ ಮಾಹಿತಿಯುಳ್ಳ ಸ್ಟಿಕ್ಕರ್ ಬಿಡುಗಡೆಗೊಳಿಸಿ ಮಾತನಾಡಿದರು.
ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಶಕ್ತಿ ಯೋಜನೆಗೆ ಕಾರ್ಯಕರ್ತರನ್ನು ಜೋಡಿಸುವ ಮೂಲಕ ಬರುವ ದಿನಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಜೊತೆಗೆ ಸಾಮಾನ್ಯ ಕಾರ್ಯಕರ್ತರನ್ನು ಸೇರಿಸುವ ಕೆಲಸವಾಗುತ್ತದೆ, ಇಲ್ಲಿ ಎಲ್ಲರಿಗೂ ಒಂದೇ ಸ್ಥಾನಮಾನ ಅದುವೇ ಕಾರ್ಯಕರ್ತ ಎಂದವರು ಹೇಳಿದರು.
ಕೆಪಿಸಿಸಿ ರಾಜ್ಯ ಕಾರ್ಮಿಕ ವಿಭಾಗದ ಕಾರ್ಯದರ್ಶಿ, ಪಟ್ಟಣ ಪಂಚಾಯತ ಸದಸ್ಯ ಮಂಜುನಾಥ ಜಿ. ಗೊಂಡಬಾಳ ಮಾತನಾಡಿ, ಜಿಲ್ಲೆಯಲಿ ಕಾಂಗ್ರೆಸ್ ಕಾರ್ಮಿಕ ಘಟಕ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ, ತನ್ಮೂಲಕ ಕಾಂಗ್ರೆಸ್ ಕಟ್ಟುವ ಹಾಗÀೂ ಅದರೊಟ್ಟಿಗೆ ಪ್ರತಿದಿನ ದುಡಿದು ಬದುಕುವ ಜನರಿಗೆ ಸೂಕ್ತ ಸಹಾಯ ಸಹಕಾರ ನೀಡುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಪ್ರತಿ ಮನೆಗೆ ಮನಕ್ಕೆ ತಲುಪಿಸಲು ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಸಹಕರಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಪಂಡಿತ್, ಭೋವಿ ಸಮಾಜದ ಜಿಲ್ಲಾಧ್ಯಕ್ಷ ವೆಂಕಟೇಶ ಕಂಪಸಾಗರ, ನಗರಸಭೆ ಸದಸ್ಯ ಅರುಣ, ಮುಖಂಡರುಗಳಾದ ರಮೇಶ ಪಾಟೀಲ್, ಶಿವಲಿಂಗಪ್ಪ ಕರ್ಲಿ, ಕುಲಗಪ್ಪ ದೊಡ್ಡಮನಿ, ಗಾಳೆಪ್ಪ ಹಿಟ್ನಾಳ

Please follow and like us:
error