ವ್ಯಕ್ತಿ ಕಾಣೆ : ಪತ್ತೆಗೆ ಸಹಕರಿಸಲು ಮನವಿ

ಕ್ತಿ
ಕೊಪ್ಪಳ ಮೇ. 14 (ಕರ್ನಾಟಕ ವಾರ್ತೆ): ಕೊಪ್ಪಳ ನಗರದ ನಿರ್ಮೀತಿ ಕೇಂದ್ರ ಹತ್ತಿರ ಬಹೂದ್ದೂರ ಬಂಡಿ ರಸ್ತೆಯ ಮೆಹಬೂಬಪಾಷ ತಂದೆ ಅಬ್ದುಲ್ ಕರೀಮ್ ಸಿಂನೂರು(38) ಎಂಬ ವ್ಯಕ್ತಿಯು ಮಾರ್ಚ್ 08 ರಂದು ಕಾಣೆಯಾಗಿದ್ದು ಪತ್ತೆಗೆ ಸಹಕರಿಸುವಂತೆ ಕೊಪ್ಪಳ ಪೊಲೀಸ್ ಠಾಣೆಯ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಮೆಹಬೂಬಪಾಷ ತಂದೆ ಅಬ್ದುಲ್ ಕರೀಮ್ ಸಿಂನೂರು (38) ಎಂಬ ವ್ಯಕ್ತಿಯು ಮಾರ್ಚ್ 08 ರಂದು ಉಮ್ರಾಕ್ಕೆ ಹೋಗುವ ಪ್ರಯಾಣಿಕರ ಪಾಸ್ಪೊÃರ್ಟ್ ಟಿಕೇಟ್ ತೆಗೆದುಕೊಂಡು ಬರಲು ಬಾಂಬೆಕ್ಕೆ ಹೋಗುತ್ತೆÃನೆ ಎಂದು ಹೇಳಿ ಮನೆಯಿಂದ ಹೋಗಿದ್ದು ಇಲ್ಲಿಯವರೆಗೆ ವಾಪಸ್ ಮನೆಗೆ ಬಂದಿರದ ಕಾರಣ ಆತನು ಎಲ್ಲಿಯೋ ಹೋಗಿದ್ದು, ಕಾಣೆಯಾಗಿದ್ದಾರೆ ಎಂದು ಕಾಣೆಯಾದ ವ್ಯಕ್ತಿಯ ಪತ್ನಿ ಸಮೀನಾಬೇಗಂ ಅವರು ಕೊಪ್ಪಳ ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆ.
ಕಾಣೆಯಾದ ವ್ಯಕ್ತಿಯ ಚಹರೆ ವಿವರ ಇಂತಿದೆ. ಮೆಹಬೂಬಪಾಷ ತಂದೆ ಅಬ್ದುಲ್ ಕರೀಮ್ ಸಿಂನೂರು (38), ಎತ್ತರ 5.3 ಇಂಚು, ಸಾದರಣ ಮೈಕಟ್ಟು, ಗೋಧಿಗೆಂಪು ಮೈಬಣ್ಣ, ಕಪ್ಪು ಕೂದಲು,. ಕಾಣೆಯಾದಾಗ ವ್ಯಕ್ತಿ ಧರಿಸಿರುವ ಉಡುಪುಗಳು. ಕಪ್ಪು ಬಣ್ಣದ ಟಿ ಶರ್ಟ, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಕನ್ನಡ, ಉರ್ದು ಮಾತನಾಡುತ್ತಾನೆ. ಈ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಜಿಲ್ಲಾ ಪೊಲೀಸ್ ಕಂಟ್ರೊÃಲ್ ರೂಂ ದೂ.ಸಂ 08539-230222-100, ನಗರ ಪೊಲೀಸ್ ಠಾಣೆ ಇನ್ಸಪೆಕ್ಟರ್ ಮೊ.ಸಂ. 9480809745 ಹಾಗೂ ನಗರ ಪೊಲೀಸ್ ಠಾಣೆ ದೂ.ಸಂ.08539-220333 ಇಲ್ಲಿಗೆ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.

Please follow and like us: