ವೈದ್ಯರ ಮುಷ್ಕರ ಪೋಲಿಸ್ ಪೇದೆ ಸಾವು

ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರದಿಂದ ಕರ್ತವ್ಯದಲ್ಲಿದ್ದ ಡಿಆರ್.ಪೊಲೀಸ್ ಪೇದೆ ಹೃದಯಾಘಾತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಿಸಿದ್ರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳದ ಕುಷ್ಟಗಿ ತಾಲೂಕಿ ನ

ಒಕ್ಕನದುರ್ಗ ಗ್ರಾಮದ ನಿವಾಸಿಗಾಗಿದ್ದ ಧರ್ಮಣ್ಣ, ಹೈವೆ ಪೆಟ್ರೋಲಿಂಗ್ ವಾಹನ ಚಾಲನೆ ಮಾಡುತ್ತಿದ್ದ. 40 ವರ್ಷದ ಧರ್ಮಣ್ಣ ಪೂಜಾರಿ ಬೆಳಗಿನ ವೇಳೆ ಪೆಟ್ರೋಲಿಂಗ್ ಮುಗಿಸಿಕೊಂಡು ಹೆಡ್ ಕ್ವಾಟರ್‍ಗೆ ಬರುವ ವೇಳೆ ಎದೆ ನೋವಿನಿಂದ ಬಳಲಿದ್ದಾನೆ. ತಕ್ಷಣ ಧರ್ಮಣ್ಣನನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲು ಮುಂದಾಗಿದ್ದರು. ಆಸ್ಪತ್ರೆಗಳ ಬಾಗಿಲು ಕ್ಲೋಸ್ ಆಗಿದ್ದರಿಂದ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಿಸದೆ ಧರ್ಮಣ್ಣ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. 1999 ರಿಂದ ಡಿಆರ್.ಪೇದೆ ಆಗಿ 18 ವರ್ಷ ಸೇವೆಸಲ್ಲಿಸಿದ್ದರು. ಕಳೆದ 10 ತಿಂಗಳ ಹಿಂದೆ ಧರ್ಮಣ್ಣ ಪೂಜಾರಿ ಹೆಡ್ ಕಾನ್ಸ್‍ಟೇಬಲ್ ಆಗಿ ಪ್ರಮೋಷನ್ ಹೊಂದಿದ್ದ. ಈ ರೀತಿ ಧರ್ಮಣ್ಣ ಸಾವನ್ನಪ್ಪಿದ್ದು ಡಿಆರ್ ಪೊಲೀಸ್ ಇಲಾಖೆ ಕಂಬನಿ ಮಿಡಿದಿದೆ.

Please follow and like us:
error