ವೈಚಾರಿಕ ಜಾಗೃತಿಗಾಗಿ ಪರಿರ್ವತನಾ ದಿನ-ರತ್ನಾಕರ

ಕೊಪ್ಪಳ : ಪ್ರಸ್ತುತ ದಿನಮಾನದಲ್ಲಿ ಮನುಷ್ಯ ಎಷ್ಟೇ ವಿದ್ಯಾವಂತನಾದರು ಈ ಸಮಾಜದಲ್ಲಿ ಅಂಧಕಾರ, ಮೂಡನಂಬಿಕೆ, ಮೌಢ್ಯ ತಾಂಡವಾಡುತ್ತಿರುವುದು ವಿಪರ್ಯಾಸದ ಸಂಗತಿ ಆ ನಿಟ್ಟಿನಲ್ಲಿ ಇಂತಹ ಪರಿರ್ವತನಾ ಕಾರ್ಯಕ್ರಮಗಳನ್ನು ಹಮ್ಮೀಕೊಳುವ ಮೂಲಕ ಸಮಾಜದ ಸುಧಾರಣೆಗೆ ವೈಚಾರಿಕ ಜಾಗೃತಿ ಕಾರ್ಯಕ್ರಮಗಳು ಅವಶ್ಯವಾಗಿವೆ ಎಂದು ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ರತ್ನಾಕರ ಅಭಿಪ್ರಾಯಪಟ್ಟರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಬಿ.ಆರ್.ಅಂಬೇಡ್ಕರ್ ಪರಿ ನಿರ್ಮಾಣದ ದಿನದ ನಿಮಿತ್ಯ ಜಿಲ್ಲೆಯಲ್ಲಿ ಡಿ. 2 ರಂದು ಬೈಕ್ ರ್ಯಾಲಿ ನಡೆಸುವ ಮುಖಾಂತರ ಜನರಲ್ಲಿ ಮನೆಮಾಡಿರುವ ಅಂಧಕಾರ, ಮೌಢ್ಯವನ್ನು ನಿವಾರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಹೇಳಿದರು.
ಅಭೂತ ಪೂರ್ವ ಕಾರ್ಯಕ್ರಮಕ್ಕೆ ಬೆಳಗಾವಿ ಸಾಕ್ಷಿ
ಅಂಬೇಡ್ಕರ್ ಸರ್ವ ಸಮಾನತೆ ಸ್ವಾಭಿಮಾನಿ ಸಮಾಜದ ನಿರ್ಮಾಣಕ್ಕಾಗಿ ಶಾಸಕ ಸತೀಶ್ ಜಾರಕಿಹೊಳಿ ಮುಂದಾಳತ್ವದಲ್ಲಿ ಡಿ.6 ರಂದು ಬೆಳಗಾವಿಯ ಸದಾಶಿವ ನಗರದಲ್ಲಿರುವ ಬುದ್ಧ, ಬಸವ, ಅಂಬೇಡ್ಕರ್ ಶಾಂತಿಧಾಮದಲ್ಲಿ ಡಾ.ತೋಂಟದಾರ್ಯ ಸಿದ್ದಲಿಂಗ ವೇದಿಕೆಯಲ್ಲಿ ವೈಚಾರಿಕ ಜಾಗೃತಿ ಕಾರ್ಯಕ್ರಮವನ್ನು ವಿಶ್ರಾಂತ ನ್ಯಾಯಾಧೀಶ ಡಾ.ನಾಗ ಮೋಹನ್‍ದಾಸ್ ರವರು ಉದ್ಘಾಟಿಸುವುರು. ಹಾಗೂ ನಾಡಿನ ಹೆಸರಾಂತ ಸಾಹಿತಿ ಬರಗೂರು ರಾಮಚಂದ್ರಪ್ಪ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು. ಸ್ಮಶಾನದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರನ್ನು ಸೇರಿಸುವ ಮೂಲಕ ಸತತ 24 ಗಂಟೆಗಳ ಕಾಲ ಕಾರ್ಯಕ್ರಮವು ಜರುಗುವುದು, ಕಾರ್ಯಕ್ರಮದಲ್ಲಿ ಬೀದಿನಾಟಕ, ಮೌಢ್ಯ ವಿರೋಧಿ ಕ್ರಾಂತಿಕಾರಿ ಗೀತೆಗಳು, ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿ ಮೌಢ್ಯದ ವಿರುದ್ಧ ಆಂದೋಲನ ನಡೆಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾನವ ಬಂಧುತ್ವ ವೇದಿಕೆ ಸದಸ್ಯ ರಾಮಣ್ಣ ಕಲ್ಹಣನವರ್, ಹಿರಿಯ ಸಾಹಿತಿ ವಿಠಪ್ಪ ಗೋರಂಟ್ಲಿ, ಕಾಶೆಪ್ಪ ಸೇರಿದಂತೆ ಇತರರು ಉಪಸ್ಥಿತರಿದರು

Please follow and like us:
error