ಕೊಪ್ಪಳ: ಮಾರ್ಚ ೧೬ ರಂದು ನಗರದ ಪ್ರವಾಸಿ ಮಂದಿರದಲ್ಲಿ ವೆಲ್ಪೇರ್ ಪಾರ್ಟಿ ಆಪ್ ಇಂಡಿಯಾ ಜಿಲ್ಲಾ ಕಾರ್ಯಕಾರಣಿ ಸಭೆಯು ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ತಾಹೇರ ಹುಸೆನ್ರವರ ಅಧ್ಯಕ್ಷತೆಯಲ್ಲಿ ಸಭೆಯನ್ನು ಏರ್ಪಡಿಸಲಾಗಿತ್ತು
ಈ ಸಭೆಯಲ್ಲಿ ಕೊಪ್ಪಳ ಜಿಲ್ಲೆಯ ಅಧ್ಯಕ್ಷ ನಜೀರ ಮುದಗಲ್ ಅವರ ರಾಜೀನಾಮೆ ವಿಷಯದ ಕುರಿತು ಎಲ್ಲಾ ಕಾರ್ಯಕಾರಣಿಯ ಸದಸ್ಯರ ಸಮ್ಮುವದಲ್ಲಿ ಚರ್ಚಸಿ ಎಲ್ಲಾರ ಅಭಿಪ್ರಾಯ ಪಡೆದು ಒಮ್ಮತದಿಂದ ರಾಜೀನಾಮೆಯನ್ನು ಅಂಗಿಕರಿಸಲಾಯಿತು.
ನಂತರ ಎಲ್ಲಾ ಕಾರ್ಯಕಾರಣಿಯ ಸದಸ್ಯರ ಅಭಿಪ್ರಾಯ ಪಡೆದು ಮತ ಹಾಕುವ ಮುಖಾಂತರ ಹೊಸ ಜಿಲ್ಲಾ ಜಿಲ್ಲಾಧ್ಯಕ್ಷರನ್ನಾಗಿ ನೂತನ ವೇಲ್ಪೆರ ಪಾರ್ಟಿ ಆಪ್ ಇಂಡಿಯಾ ಕೊಪ್ಪಳ ಜಿಲ್ಲಾಧ್ಯಕ್ಷರನ್ನಾಗಿ ಆದಿಲ್ ಪಟೇಲ್ ಅವರನ್ನು ಆಯ್ಕೆ ಮಾಡಲಾಯಿತು.
ಕೂನೆಯಲ್ಲಿ ಕಾರ್ಯಕಾರಣಿ ಸದಸ್ಯರನ್ನು ಉದ್ದೇಶಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ತಾಹೇರ್ ಹುಸೇನ್ ಮಾತನಾಡುತ್ತಾ ಮುಂಬರವ ವಿಧಾನ ಸಭೆ ಹಾಗೂ ಸ್ಥಳಿಯ ಚುನಾವಣೆಗಳಿಗೆ ಈಗಿನಿಂದತಯಾರಿ ನಡೆಸಬೇಕು ಎಂದು ಸೂಚಿಸಿದರು.
ನೂತನವಾಗಿ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೇಯಾದ ಆದಿಲ್ ಪಟೇಲ್ ಅವರು ವಂದನೆಯನ್ನು ಸಲ್ಲಿಸಿದರು
ವೇಲ್ಪೇರ ಪಾರ್ಟಿಯ ನೂತನ ಜಿಲ್ಲಾಧ್ಯಕ್ಷರಾಗಿ ಆದಿಲ್ ಪಟೇಲ್ ಆಯ್ಕೆ
Leave a Reply
You must be logged in to post a comment.