ವೃಂದಾವನ ದ್ವಂಸ ಪ್ರಕರಣ: ಐವರ ಬಂಧನ

ಕೊಪ್ಪಳ : ಶ್ರಿ ಕೃಷ್ಣ ದೇವರಾಯನ ರಾಜ ಗುರು ವ್ಯಾಸರಾಜ ತೀರ್ಥರ ವೃಂದಾವನ ದ್ವಂಸಗೊಳಿಸಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೊಪ್ಪಳ ಜಿಲ್ಲೆ ಆನೆಗೊಂದಿ ಸಮೀಪದ ತುಂಗಭದ್ರಾ ನದಿಯಲ್ಲಿನ  ನಡುಗಡ್ಡೆಯಲ್ಲಿದ್ದ ನವವೃಂದಾವನದಲ್ಲಿದ್ದ ವೃಂದಾವನ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ದುಷ್ಕರ್ಮಿಗಳನ್ನು ಬಂಧಿಸಲಾಗಿದೆ. 
ಆಂದ್ರಪ್ರದೇಶದ ತಾಡಪತ್ರಿಯ ಪೊಲ್ಲಾರಿ ಮುರಳಿ ಮೋಹನ ರೆಡ್ಡಿ,ಮನೋಹರ, ಕುಮ್ಮಟಕೇಶವ, ವಿಜಯಕುಮಾರ, ಬಾಲನರಸಯ್ಯ ಬಂಧಿತರು.‌ ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ನಿಧಿ ಶೋಧನೆಗಾಗಿ ವ್ಯಾಸರಾಜರ ಸಮಾಧಿ ಧ್ವಂಸ ಮಾಡಿದ್ದಾಗಿ ಆರೋಪಿಗಳು ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.‌ ವೃಂದಾವನ ಧ್ವಂಸ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ರಾಜ್ಯಾದ್ಯಂತ ಬ್ರಾಹ್ಮಣ ಸಮುದಾಯ ಮತ್ತು ಭಕ್ತರು ಆಕ್ರೋಶಗೊಂಡಿದ್ದರು. ಈ  ಹಿನ್ನೆಲೆ ಕೊಪ್ಪಳ ಎಸ್ಪಿ ಅವರು 5 ವಿಶೇಷ ತಂಡ ರಚಿಸಿದ್ದರು. ಕೊಪ್ಪಳ ಪೊಲೀಸರು ಘಟನೆ ನಡೆದ ಮೂರು ದಿನದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.

Please follow and like us:
error