ವೀರಶೈವ ಲಿಂಗಾಯತ ಧರ್ಮಕ್ಕೆ ಸ್ವತಂತ್ರ  ಮಾನ್ಯತೆ  : ಯಡಿಯೂರಪ್ಪನವರ ಪತ್ರದಲ್ಲೇನಿದೆ? 

   

ವೀರಶೈವ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮತ್ತು ಅಲ್ಪಸಂಖ್ಯಾತ ಮಾನ್ಯತೆ ನೀಡುವ ಕುರಿತು ಪರ ವಿರೋಧ ಕುರಿತು ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿಯೇ 2013ರಲ್ಲಿಯೇ ವೀರಶೈವ ಮಹಸಭಾದವರು ಕೇಂದ್ರ ಸಚಿವರಿಗೆ ಬರೆದ ಪತ್ರವೊಂದು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ. ಅಖಿಲ ಭಾರತ ವೀರಶೈವ ಮಹಾಸಭಾದವರು ಕೇಂದ್ರ ಸಚಿವ ಸುಶೀಲಕುಮಾರ ಶಿಂದೆಯವರಿಗೆ ಪತ್ರ ಬರೆದು ಸಮಯಾವಾಕಾಶ ಕೇಳಿದ್ದಾರೆ. ಕೋಡ್ ನಂಬರ್, ಜನಗಣತಿಯಲ್ಲಿ ಕಾಲಂ ಮತ್ತು ಸ್ವತಂತ್ರ ಧರ್ಮದ ಮಾನ್ಯತೆ ಹಾಗೂ ಅಲ್ಪಸಂಖ್ಯಾತ ಧರ್ಮದ ಮಾನ್ಯ ತೆ ನೀಡುವಂತೆ ಕೋರಲು ವೀರಶೈವ ಮಹಾಸಭಾದಿಂದ ಪ್ರತಿನಿಧಿಗಳು ಬರಲಿದ್ದು ಬೇಟಿಗೆ ಸಮಯಾವಕಾಶ ನೀಡಬೇಕೆಂದು ಕೋರಿದ್ದಾರೆ. ಈ ಪತ್ರಕ್ಕೆ ಈಶ್ವರ ಖಂಡ್ರೆಯವರು ಸಹಿ ಮಾಡಿದ್ದು ಇದರಲ್ಲಿ ಶಾಮನೂರ ಶಿವಶಂಕರಪ್ಪ, ಬಸವರಾಜ ಹೊರಟ್ಟಿ, ಜಿ.ಎಸ್.ಪಾಟೀಲ್ , ಬಿ.ಆರ್.ಪಾಟೀಲ್, ಸೇರಿದಂತೆ ವಿವಿಧ ವಿಧಾನಪರಿಷತ್ ಸದಸ್ಯರು, ಶಾಸಕರು ಸಹಿ ಮಾಡಿದ್ದಾರೆ. ವಿಶೇಷ ಎಂದರೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೂ ಸಹ ಈ ಪತ್ರಕ್ಕೆ ಸಹಿ ಮಾಡಿದ್ಧಾರೆ. 31-7-2013ರಲ್ಲಿ ಪತ್ರ ಬರೆಯಲಾಗಿದೆ. ರಾಷ್ಟ್ರೀಯ ಅಲ್ಪಸಂಖ್ಯಾತರ ಕಾಯ್ದೆ 1992 ಸೆಕ್ಷನ್ 2 ಸಿ ಅಡಿಯಲ್ಲಿ ತಮ್ಮ ಮನವಿಯನ್ನು ಪರಿಗಣಿಸಬೇಕು ಎಂದು ಮನವಿ ಮಾಡಿದ್ದಾರೆ.  ಸ್ವತಂತ್ರ ಧರ್ಮದ ಮಾನ್ಯತೆ ಪರ ವಿರೋಧ ಚೆರ್ಚೆ ನಡೆಯುತ್ತಿರುವ  ಈ ಸಂದರ್ಭದಲ್ಲಿ ಈ ಪತ್ರ ಬಹಳಷ್ಟು ಚರ್ಚೆಗೆ ಕಾರಣವಾಗಿದೆ. 

Please follow and like us:
error