ವಿಶ್ವ ನೀರು ದಿನಾಚರಣೆ ನಿಮಿತ್ಯ ಜಲಾಮೃತ ಸಮಗ್ರ ಚಳುವಳಿ : ಆರ್.ಎಸ್. ಪೆದ್ದಪ್ಪಯ್ಯ

ಕೊಪ್ಪಳ ಮಾ  : ವಿಶ್ವ ನೀರು ದಿನಾಚರಣೆ ನಿಮಿತ್ಯ ಜಲಾಮೃತ ಎಂಬ ಸಮುದಾಯ ಚಾಲಿತ ಸಮಗ್ರ ಚಳುವಳಿಯೊಂದನ್ನು ಜಿಲ್ಲೆಯಲ್ಲಿ ಪ್ರಾರಂಭಿಸಿಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ಎಸ್. ಪೆದ್ದಪ್ಪಯ್ಯ ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರದಂದು ಜರುಗಿತ ವಿಶ್ವ ನೀರು ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿ ಅವರು ಮಾತನಾಡಿದರು.
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲೆಯ ಎಲ್ಲಾ ಜಿಲ್ಲಾ ಮಟ್ಟದ ಅನುಷ್ಠಾನ ಇಲಾಖೆಯ ಸಹಯೋಗದಲ್ಲಿ ಇಂದು ವಿಶ್ವ ನೀರು ದಿನಾಚರಣೆ ಯನ್ನು ಆಚರಿಸಲಾದ್ದು, ಜಲ ಸಾಕ್ಷರತೆ, ಜಲ ಸಂರಕ್ಷಣೆ, ನೀರಿನ ಪ್ರಜ್ಞಾವಂತ ಬಳಕೆ ಹಾಗೂ ಹಸಿರುಕರಣಕ್ಕಾಗಿ ಜಲಾಮೃತ ಎಂಬ ಸಮುದಾಯ ಚಾಲಿತ ಸಮಗ್ರ ಚಳುವಳಿಯೊಂದನ್ನು ಜಿಲ್ಲೆಯಲ್ಲಿ ಪ್ರಾರಂಭಿಸಿಲಾಗಿದ್ದು, ಅದರಂತೆ ೨೦೧೯ನೇ ವರ್ಷವನ್ನು ಜಲ ವರ್ಷವೆಂದು ಘೋಷಿಸಲಾಗಿ ಜಲ ವರ್ಷದ ಆಚರಣೆಯನ್ನು ಜಿಲ್ಲಾದ್ಯಂತ ಎಲ್ಲಾ ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ ವಿವಿಧ ಚಟುವಟಿಕೆಗಳ ಮುಖಾಂತರ ಹಾಗೂ ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಂಡು ಎಲ್ಲಾ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುವುದು. ಶುದ್ಧ ನೀರಿನ ಮಹತ್ವವನ್ನು ತಿಳಿಸುವ ಉದ್ಧೇಶದಿಂದ ವಿಶ್ವ ಸಂಸ್ಥೆಯು ಮಾರ್ಚ್. ೨೨ ಅನ್ನು ವಿಶ್ವ ನೀರಿನ ದಿನವೆಂದು ಅಧೀಕೃತವಾಗಿ ಘೋಷಿಸಿದೆ. ಇದರ ನಿಮಿತ್ಯ ಈ ದಿನದಂದು ಎಲ್ಲಾ ಇಲಾಖೆಗಳು, ಸಂಘ ಸಂಸ್ಥೆಗಳು, ಸಾರ್ವಜನಿಕರು, ಗ್ರಾಮಸ್ಥರು ಜೊತೆಗೂಡಿ ಶುದ್ಧ ನೀರಿನ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಯನ್ನು ಮಾಡೋಣ. ನೀರು ಅಮೃತಕ್ಕೂ ಮಿಗಿಲು, ನೀರು ಪ್ರಕೃತಿ ನೀಡಿರುವ ವರ. ಬೇಸಿಗೆಯ ದಿನಗಳಲ್ಲಿ ನೀರು ನಮ್ಮ ಕೈ ಜಾರಿ ಹೋಗದಂತೆ ಸಂರಕ್ಷಿಸುವುದು ಅವಶ್ಯಕ. ಇದು ಮನ ಪರಿವರ್ತನೆಯ ಕಾಲವಾಗಿದ್ದು, ನಮ್ಮ ಮನಸ್ಸು ಪರಿವರ್ತನೆಯಾದರೆ ಮಾತ್ರ ಈ ಪರಿಸ್ಥಿತಿ ಬದಲಾಗಲು ಸಾಧ್ಯವೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ಎಸ್. ಪೆದ್ದಪ್ಪಯ್ಯ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಎಸ್.ಎಲ್. ಬಾಲಚಂದ್ರ, ಉಪವಿಭಾಗಾಧಿಕಾರಿ ಸಿ.ಡಿ. ಗೀತಾ, ಜಿ.ಪಂ. ಉಪಕಾರ್ಯದರ್ಶಿ ಎಸ್.ಬಿ. ಮುಳ್ಳೊಳ್ಳಿ, ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ ಮತ್ತಿತರರು ಇದ್ದರು. ಜಲಾಮೃತ-೨೦೧೯ರ ಮಾಹಿತಿ ಇರುವ ಭಿತ್ತಿ ಪತ್ರವನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದ ನಂತರ ಜಿಲ್ಲಾಡಳಿತ ಭವನದ ಆವರಣದಲ್ಲಿ ಸಾಮಾಜಿಕ ಅರಣ್ಯ ವಿಭಾಗದ ಸಹಯೋಗದೊಂದಿಗೆ ಹೊಂಗೆ, ಬೇವು, ಆಲ, ಅರಳಿ ಗಿಡಗಳನ್ನು ಪ್ರತಿಷ್ಟಾಪಿಸಿ ವಿಶ್ವ ನೀರು ದಿನಾಚರಣೆಯನ್ನು ಆಚರಿಸಲಾಯಿತು. ಜಿ.ಪಂ. ಉಪಕಾರ್ಯದರ್ಶಿ ಎಸ್.ಬಿ. ಮುಳ್ಳೊಳ್ಳಿ, ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ, ಸಹಾಯಕ ಕಾರ್ಯದರ್ಶಿ ಶರಣಬಸಪ್ಪ ಸೇರಿದಂತೆ ಜಿಲ್ಲಾ ಮಟ್ಟದ ಎಲ್ಲಾ ಅನುಷ್ಠಾನ ಇಲಾಖೆ ಅಧಿಕಾರಿಗಳು, ಮಹಾತ್ಮ ಗಾಂಧಿ ನರೇಗಾ ಯೋಜನೆಯ ಎಲ್ಲಾ ಸಂಯೋಜಕರು ಮತ್ತು ಸಿಬ್ಬಂದಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Please follow and like us:
error