ವಿಶ್ವವಿದ್ಯಾಲಯ ಕುಲಪತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಎಸ್.ಎಫ್.ಐ ಒತ್ತಾಯ

ಕನ್ನಡ ವಿರೋಧಿ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಕುಲಪತಿ
ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಎಸ್.ಎಫ್.ಐ ಪ್ರತಿಭಟನೆsfi-koppal

ಈ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಭಾರತ್ ವಿದ್ಯಾರ್ಥಿ ಪೆಡರೇಷನ್ (ಎಸ್.ಎಫ್.ಐ) ಸಂಘಟನೆಯು ಇಂದು ಗಂಗಾವತಿ ನಗರದ ಎಸ್.ಕೆ.ಎನ್.ಜಿ ಮಹಾವಿದ್ಯಾಲಯ ಮುಂದೆ ಪ್ರತಿಭಟನೆ ಮಾಡಿ ಮಾನ್ಯ ಉನ್ನತ ಶಿಕ್ಷಣ ಸಚಿವರು ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಲ್ಲಿ ಒತ್ತಾಯಿಸುವುದೆನೆಂದರೆ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಸ್ನಾತಕೋತ್ತರ ವಿಭಾಗದ ದ್ವಿತೀಯ ಸೆಮಿಸ್ಟರಿನ ಪರೀಕ್ಷೆಗಳು ಇಂದು ಪ್ರಾರಂಭವಾಗಿದ್ದು, ಈ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ ಇತ್ಯಾದಿ ವಿಷಯಗಳನ್ನು ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡುತ್ತಿದ್ದು, ಕನ್ನಡದಲ್ಲಿ ಬೋಧನೆ ಮಾಡಿದ್ದು ಮತ್ತು ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯುತ್ತಿದ್ದು ಆದರೆ ಪ್ರಶ್ನೆಪತ್ರಿಕೆಯನ್ನು ಆಂಗ್ಲ(ಇಂಗ್ಲೀಷ್) ಭಾಷೆಯಲ್ಲಿ ಕಳುಹಿಸುವುದರ ಮೂಲಕ ವಿಶ್ವವಿದ್ಯಾಲಯದ ಅಧಿಕಾರಗಳು ಕನ್ನಡದ ವಿರೋಧ ನೀತಿ ಅನುಸರಿಸಿ, ಉದ್ದಟತನ ತೋರಿದ್ದಾರೆ. ಆದ್ದರಿಂದ ಈ ತರಹದ ಕನ್ನಡ ವಿರೋಧಿ ಅಧಿಕಾರಿಗಳನ್ನು ಹುದ್ದೆಯಿಂದ ವಜಾಮಾಡಬೇಕು. ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳು ಪ್ರಶ್ನೆಪತ್ರಿಕೆಗಳನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಮುದ್ರಿಸುತ್ತೇವೆ. ಆದರೆ ಈ ವಿಶ್ವವಿದ್ಯಾಲಯ ಮಾತ್ರ ಕನ್ನಡ ವಿರೋಧ ನೀತಿ ಅನುಸರಿಸಿ, ವಿದ್ಯಾರ್ಥಿಗಳಿಗೂ ಗೊಂದಲಮಯವಾಗಿದೆ. ಆದ್ದರಿಂದ ಕೂಡಲೇ ಉನ್ನತ ಶಿಕ್ಷಣ ಸಚಿವರಾದ ತಾವುಗಳು ತಮ್ಮ ಇಲಾಖೆಯ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕನ್ನಡ ವಿರೋಧ ನೀತಿಗೆ ಕಡಿವಾಣ ಹಾಕಬೇಕು. ಮತ್ತು ಸೂಕ್ತ ತನಿಖೆ ನಡೆಸಿ, ತಪ್ಪಿಸ್ಥರ ಅಧಿಕಾರಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಸ್.ಎಫ್.ಐ ಸಂಘಟನೆಯು ಒತ್ತಾಯಿಸುತ್ತದೆ.
ಇತ್ತೀಚಿಗೆ ವಿಧಾನಸೌಧದಲ್ಲಿ ಎಲ್ಲಾ ಕಡತಗಳನ್ನು ಆಂಗ್ಲ ಭಾಷೆಯಲ್ಲಿ ತರಲು ತಿಳಿಸಿ, ಕನ್ನಡ ವಿರೋಧಿ ನೀತಿ ಅನುಸರಿಸಿದ ಐ.ಎ.ಎಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು ಮಾನ್ಯ ಮುಖ್ಯಮಂತ್ರಿಗಳಲ್ಲಿ ಕೋರಿದ್ದರು. ಇದರಿಂದಾಗಿ ಆ ಅಧಿಕಾರಿಯು ಹುದ್ದೆಯಿಂದ ವರ್ಗಾವಣೆಯಾಗಿರುವುದು ಸ್ಮರಿಸಬಹುದು. ಈ ಮೇಲ್ಕಾಣಿಸಿದ ಪ್ರಕರಣವನ್ನು ತಾವುಗಳು ಕೂಡಲೇ ಗಂಭೀರವಾಗಿ ಪರಿಗಣಿಸಬೇಕೆಂದು ಎಸ್.ಎಫ್.ಐ ಸಂಘಟನೆಯು ಪ್ರತಿಭಟನೆಯ ಮಾಡಿ, ಈ ಮೇಲ್ ಮೂಲಕ ಸಚಿವರಿಗೆ ಮನವಿ ಪತ್ರವನ್ನು ಕಳುಹಿಸಲಾಯಿತು. ಪ್ರತಿಭಟನೆಯಲ್ಲಿ ಎಸ್.ಎಫ್.ಐ ಜಿಲ್ಲಾಧ್ಯಕ್ಷ ಅಮರೇಶ ಕಡಗದ, ಸಣ್ಣೆಪ್ಪ, ಸಂಗಮೇಶ, ಹನುಮೇಶ, ವಿರುಪಾಕ್ಷಿ, ರಮೇಶ, ಶಿವರಾಜ, ಈರಣ್ಣ, ಸುರೇಶ ಹಾಗೂ ಇನ್ನಿತರ ಹೋರಾಟದಲ್ಲಿ ಪಾಲ್ಗೊಂಡಿದ್ದರು.

Please follow and like us:

Leave a Reply