ವಿಶ್ವದಾಖಲೆ ಉತ್ಸವ-೨೦೧೯

ಗಂಗಾವತಿ: ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆಯು ಏಷ್ಯಾದ ಅತಿದೊಡ್ಡ ಶಿಕ್ಷಣ ಸಂಸ್ಥೆಯಾಗಿದ್ದು, ತನ್ನ ಶಿಕ್ಷಣ ಶಾಖೆಗಳನ್ನು ಏಳು ರಾಜ್ಯಗಳಲ್ಲಿ ಸ್ಥಾಪಿಸಿದೆ. ಜೊತೆಗೆ ವಿಶ್ವದಾಖಲೆ ಉತ್ಸವ ಎನ್ನುವ ಒಂದು ವಿನೂತನ ಕಾರ್ಯಕ್ರಮವನ್ನು ಆಯೋಜಿಸಿದ್ದು, ಈ  ಕಾರ್ಯಕ್ರಮದಲ್ಲಿ ಸ್ಪೋರ್ಟ್ಸ್ ಡ್ರಿಲ್ ಮತ್ತು ಯೋಗಾಸನ ಕಾರ್ಯಕ್ರಮವನ್ನು ದಿ ೦೪  ರಂದು ಏಳು ರಾಜ್ಯದ ೩೯೦ ಶಿಕ್ಷಣ ಶಾಖೆಯ ೧೪೨೦೦ ವಿದ್ಯಾರ್ಥಿಗಳು ಒಂದೇ ದಿನ ಏಕಕಾಲದಲ್ಲಿ ಅತ್ಯದ್ಭುತವಾದ ಸಾಧನೆ ಮಾಡುವ ಮುಖಾಂತರ ವಿಶ್ವದಾಖಲೆಯಲ್ಲಿ ಸೇರ್ಪಡೆಯಾಗಲು ಅವಕಾಶ ಪಡೆದುಕೊಂಡಿದೆ.
ಏಕಕಾಲದಲ್ಲಿ ಸ್ಪೋರ್ಟ್ಸ್ ಡ್ರಿಲ್ ಮತ್ತು ಯೋಗಾಸನ ವಿವಿಧ ಶಾಖೆಗಳಲ್ಲಿ ನಡೆಸಲಾಯಿತು. ವಿಶ್ವದಾಖಲೆಗೆ ಬೇಕಾದ ವಿವರಗಳು ಈ ಕೆಳಗಿನಂತಿವೆ.
ಏಕಕಾಲದಲ್ಲಿ ಸ್ಪೋರ್ಟ್ಸ ಡ್ರಿಲ್‌ನಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಶ್ರೀ ಚೈತನ್ಯ ಸಂಸ್ಥೆಯ ಏಳು ರಾಜ್ಯಗಳಲ್ಲಿ ಒಂದರಿಂದ ಐದನೆಯ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ೧೦೦೦೦೦ ವಿದ್ಯಾರ್ಥಿಗಳು ಏಕಕಾಲದಲ್ಲಿ ಸ್ಪೋರ್ಟ್ಸ್ ಡ್ರಿಲ್ ೭ ನಿಮಿಷಗಳ ಯಾವುದೇ ವಿರಾಮವಿಲ್ಲದೆ ಸುಮಾರು ೨೧೪ ಸ್ಥಳಗಳಲ್ಲಿ ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆ ಕಾರ್ಯಕ್ರಮವನ್ನು ನಡೆಸುವುದರ ಮುಖಾಂತರ ವಿಶ್ವದಾಖಲೆ ಪಟ್ಟಿಗೆ ಸೇರ್ಪಡೆಯಾಯಿತು.
ಅತಿಹೆಚ್ಚು ವಿದ್ಯಾರ್ಥಿಗಳಿಂದ ಏಕಕಾಲಕ್ಕೆ ಯೋಗಾಸನ ವಿವಿಧ ಚೈತನ್ಯ ಶಾಖೆಗಳಲಿ ೩ ರಿಂದ ೫ನೇ ತರಗತಿಯ ಚೈತನ್ಯ ಶಿಕ್ಷಣ ಸಂಸ್ಥೆಯ ಸುಮಾರು ೭೬೦೦೦ ವಿದ್ಯಾರ್ಥಿಗಳು ಏಳು ರಾಜ್ಯಗಳಲ್ಲಿ ೪೫ ವಿವಿಧ ಯೋಗಾಸನದ ಭಂಗಿಗಳನ್ನು ಸುಮಾರು ೧೫ ನಿಮಿಷಗಳ ಕಾಲ ಯಾವುದೇ ವಿರಾಮವಿಲ್ಲದೆ ೨೧೪ ಚೈತನ್ಯ ಶಾಖೆಯಲ್ಲಿ ನಡೆಸುವುದರ ಮುಖಾಂತರ ವಿಶ್ವದಾಖಲೆ ಪಟ್ಟಿಗೆ ಸೇರಿತು.
ಪ್ರಸ್ತುತ ವಿಶ್ವದಾಖಲೆಯ ಸಾಲಿನಲ್ಲಿ ಅಂದರೆ ೨೧, ೨೦೧೬ ರಲ್ಲಿ ೧೮ ದೇಶಗಳ ೧೩೬ ಸ್ಥಳಗಳಲ್ಲಿ ೭೨೫೫೦ ಜನರು ಭಾಗವಹಿಸಿ ವಿಶ್ವದಾಖಲೆಯನ್ನು ನಿರ್ಮಿಸಿದ್ದರು. ಈ ದಾಖಲೆಯನ್ನು ಶ್ರೀ ಚೈತನ್ಯ ಸಂಸ್ಥೆಯು ಮುರಿದು ಹಾಕುವುದರ ಮೂಲಕ ಹೊಸ ದಾಖಲೆಯನ್ನು ಸೃಷ್ಟಿಸಿದೆ,.
ಈ ಒಂದು ದಾಖಲೆಯನ್ನುElite world record Asian Records academy  India Record Academy ಅಂತರಾಷ್ಟ್ರೀಯ ವಿಶ್ವದಾಖಲೆ ಪ್ರಮಾಣೀಕರಿಸಿದ ಆರು ವಿವಿಧ ದೇಶದ ಸಾಕ್ಷಿದಾರರನ್ನು ಒಳಗೊಂಡಿದೆ.

Please follow and like us:
error